'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ನವದೆಹಲಿ: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಬಗ್ಗೆ ಅನೇಕ ಕ್ರಿಕೆಟ್ ದಿಗ್ಗಜರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಾಲಿಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸೇರಿಕೊಂಡಿದ್ದಾರೆ. ಬೂಮ್ರಾ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಅಖ್ತರ್ ಬೂಮ್ರಾ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ದೀರ್ಘಕಾಲ ಆಡಲಾರರು ಎಂದಿದ್ದಾರೆ. ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಗುರುತಿಸಿಕೊಂಡಿರುವ ಬೂಮ್ರಾ ಬಗ್ಗೆ ಅಖ್ತರ್ ಆತಂಕ ತೋರಿಕೊಂಡಿದ್ದಾರೆ.
ಕಳೆದ ವರ್ಷ ಗಾಯಕ್ಕೀಡಾಗಿದ್ದ ಜಸ್‌ಪ್ರೀತ್ ಬೂಮ್ರಾ 2019ರ ಬಹುಕಾಲ ವಿಶ್ರಾಂತಿಯಲ್ಲೇ ಇದ್ದರು. 2020ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಬೂಮ್ರಾ ಕಮ್‌ಬ್ಯಾಕ್ ಮಾಡಿದ್ದರಾದರೂ ಆ ಸರಣಿಯಲ್ಲಿ ಅವರು ಅಷ್ಟೇನೂ ಗಮನಾರ್ಹ ಸಾಧನೆ ತೋರಲಿಲ್ಲ.
ಸದ್ಯ ಏಕದಿನ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಜಸ್‌ಪ್ರೀತ್ ಬೂಮ್ರಾ ಬಗ್ಗೆ ಅಖ್ತರ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತುಂಬಾ ಕಷ್ಟದ ಶೈಲಿ ಹೊಂದಿದ್ದಾನೆ
'ಬೂಮ್ರಾ ತುಂಬಾ ಕಷ್ಟದ ಶೈಲಿ ಹೊಂದಿದ್ದಾರೆ. ಆತ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಹೆಚ್ಚು ಕಾಲ ಆಡಲಾರ,' ಎಂದು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಅವರ ಶೋ 'ಆಕಾಶ್ ವಾಣಿ'ಯಲ್ಲಿ ಮಾತನಾಡಿದ ಅಖ್ತರ್ ಕಳವಳ ವ್ಯಕ್ತಪಡಿಸಿದರು.

ದಾಖಲೆ ಜಯದಲ್ಲಿ ಪ್ರಮುಖ ಪಾತ್ರಧಾರಿ
ಎಲ್ಲಾ ಮಾದರಿಯ ಕ್ರಿಕೆಟ್‌ಗಳಲ್ಲಿ ವಿಶ್ವದ ಅಪಾಯಕಾರಿ ಬೌಲರ್ ಎನಿಸಿಕೊಂಡಿರುವ ಬೂಮ್ರಾ, 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ತಂಡ ಚೊಚ್ಚಲ ಬಾರಿ ಗೆದ್ದು ಇತಿಹಾಸ ಬರೆಯುವಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಭಾರತದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಬೂಮ್ರಾ ಗಾಯಕ್ಕೀಡಾಗಿದ್ದರು.

ಆತನ ಬೆನ್ನು ಬೆಂಬಲಿಸತ್ತದೆಯೇ?
'ಬೂಮ್ರಾ ಧೈರ್ಯವೆಂದರೆ ಆತ ಟೆಸ್ಟ್‌ನಲ್ಲೂ ಕೌಶಲಗಳನ್ನು ತೋರಿಸಿದ್ದಾನೆ. ಆತ ತುಂಬಾ ಶ್ರಮ ಜೀವಿ ಮತ್ತು ತನ್ನ ಸಾಧನೆಯೆಡೆಗೆ ಗಮನ ಕೊಡುವಾತ. ತಾನೆಲ್ಲಿಗೆ ಹೋಗಬೇಕು ಅನ್ನೋದು ಅವನಿಗೆ ಗೊತ್ತು. ಆದರೆ ಆತನ ಬೆನ್ನು ಅದಕ್ಕೆ ಯಾವಾಗಲೂ ಬೆಂಬಲಿಸುತ್ತದೆಯೇ?,' ಎಂದು ಅಖ್ತರ್ ಬೂಮ್ರಾ ಆ್ಯಕ್ಷನ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ನೇಹಿತರ ಜೊತೆ ಹೇಳಿಕೊಂಡಿದ್ದೆ
ಬೂಮ್ರಾಗೆ ಗಾಯವಾಗುತ್ತದೆ ಎಂದು ನಾನು ಮೊದಲೇ ಊಹಿಸಿದ್ದೆ ಎಂದು ಅಖ್ತರ್ ಹೇಳಿಕೊಂಡಿದ್ದಾರೆ. 'ಬೆನ್ನಿನ ಮೇಲೆ ಆತ ಅಷ್ಟು ಹೊರೆ ಹಾಕಿದರೆ ಒಂದಿನ ಅದು ಮರಿಯಲೇಬೇಕು. ಆತ ಗಾಯಗೊಳ್ಳುತ್ತಾನೆ ಎಂದು ನಾನು ಆತನ ಮ್ಯಾಚ್ ನೋಡುವಾಗ ಎಷ್ಟೋ ಸಾರಿ ಸ್ನೇಹಿತರ ಬಳಿ ಹೇಳಿಕೊಂಡಿದ್ದೆ,' ಎಂದು ಅಖ್ತರ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications