Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಲಾಡ್ಯ ಹೈದರಾಬಾದ್ ಎದುರು ಡೆಲ್ಲಿ ಗೆಲ್ಲುತ್ತಾ?

SRH vs DD, Match Preview: Upbeat Delhi run into in-form Hyderabad

ಹೈದರಾಬಾದ್, ಮೇ 5: ಈ ಐಪಿಎಲ್ ಆವೃತ್ತಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು 7ನೇ ಸ್ಥಾನದಲ್ಲಿರುವ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಇಂದು ಮತ್ತೊಂದು ಕಾದಾಟ ಹೈದರಾಬಾದ್ ನಲ್ಲಿ ನಡೆಯಲಿದೆ.

ಹೈದರಾಬಾದ್ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಗೆಲುವು ದಾಖಲಿಸಿ ಒಟ್ಟು 12 ಅಂಕಗಳನ್ನು ಕಲೆ ಹಾಕಿದೆ. ಅಂಕಪಟ್ಟಿಯ ಕೆಳ ತುದಿಯಲ್ಲಿದ್ದ ಡೆಲ್ಲಿ ಈಗಷ್ಟೇ ಗೆಲುವಿನ ಹಾದಿ ಹಿಡಿದಿದೆ. ಡೆಲ್ಲಿ ಒಟ್ಟು 9 ಪಂದ್ಯಗಳಲ್ಲಿ 3 ಗೆಲುವನ್ನಷ್ಟೇ ತನ್ನದಾಗಿಸಿಕೊಂಡಿದೆ.

ಅಗ್ರ ಸ್ಥಾನಿ ತಂಡ ಮತ್ತು ಕೆಳ ಸ್ಥಾನದಲ್ಲಿರುವ ತಂಡಗಳ ಮಧ್ಯೆ ಇಂದು ಪ್ರಬಲ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಯಾಕೆಂದರೆ ಹೈದರಾಬಾದ್ ಗೆ ಗೆಲುವು ಪ್ರತಿಷ್ಠೆಯಾದರೆ ಡೆಲ್ಲಿಗೆ ಗೆಲುವು ಅನಿವಾರ್ಯ. ಹೈದರಾಬಾದ್ 5-6 ದಿನಗಳ ಬಳಿಕ ಮತ್ತೆ ಮೈದಾನಕ್ಕೆ ಇಳಿಯಲಿರುವುದರಿಂದ ಇಂದು ಗೆಲುವು ದಾಖಲಿಸುವ ವಿಶ್ವಾಸ ಹೈದರಾಬಾದ್ದು.

ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದೆದುರು ಜಯ ಸಾಧಿಸಿ ಗೆಲುವಿನ ಲಯಕ್ಕೆ ಬಂದಿರುವ ಶ್ರೇಯಸ್ ಐಯರ್ ನಾಯಕತ್ವದ ಡೆಲ್ಲಿ ತಂಡ ಇಂದು ಬಲಾಡ್ಯ ಹೈದರಾಬಾದ್ ಎದುರು ಗೆಲ್ಲುತ್ತಾ ಕಾದುನೋಡಬೇಕಿದೆ.

Story first published: Saturday, May 5, 2018, 19:16 [IST]
Other articles published on May 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+