For Quick Alerts
ALLOW NOTIFICATIONS  
For Daily Alerts
 

'ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌'ಗೆ ಬಲಿಯಾದ ಗುಣತಿಲಕ: ವೈರಲ್ ವಿಡಿಯೋ

Sri Lankas Danushka Gunathilaka given out for obstructing the field

ಆ್ಯಂಟಿಗುವಾ: ಶ್ರೀಲಂಕಾದ ಬ್ಯಾಟ್ಸ್‌ಮನ್‌ ದನುಷ್ಕ ಗುಣತಿಲಕ 'ಅಬ್ಸ್ಟ್ರಾಕ್ಟಿಂಗ್ ದ ಫೀಲ್ಡ್‌'ಗಾಗಿ ಔಟ್ ಆಗಿರುವ ಬಲು ಅಪರೂಪದ ಘಟನೆ ಬುಧವಾರ (ಮಾರ್ಚ್ 10) ನಡೆದಿದೆ. ಆ್ಯಂಟಿಗುವಾಗ ನಾರ್ತ್‌ಸೌಂಡ್‌ನಲ್ಲಿರುವ ಸರ್‌ ವಿವಿಯನ್ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ-ವೆಸ್ಟ್‌ ಇಂಡೀಸ್ ಮೊದಲನೇ ಏಕದಿನ ಪಂದ್ಯದಲ್ಲಿ ಗುಣತಿಲಕ ಅಪರೂಪ ರೀತಿಯಲ್ಲಿ ಔಟ್ ಆಗಿದ್ದಾರೆ.

55 ರನ್ ಬಾರಿಸಿದ್ದ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್‌ ದನುಷ್ಕ ಗುಣತಿಲಕ ರನ್ ಯತ್ನದ ವೇಳೆ ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌ (ಕ್ಷೇತ್ರವನ್ನು ತಡೆಯುವುದು) ಅಥವಾ ಫೀಲ್ಡಿಂಗ್‌ಗೆ ಅಡ್ಡಿಪಡಿಸಲು ಪ್ರಯತ್ನಿಸಿದಂತೆ ಕಾಣಿಸಿತು. ಹೀಗಾಗಿ ಗುಣತಿಲಕ ಅವರನ್ನು ಔಟ್ ಎಂದು ತೀರ್ಮಾನಿಸಲಾಗಿತ್ತು.

ಶ್ರೀಲಂಕಾದ 22ನೇ ಇನ್ನಿಂಗ್ಸ್‌ನಲ್ಲಿ ಘಟನೆ ನಡೆದಿದ್ದು. 61 ಎಸೆತಗಳಿಗೆ 52 ರನ್ ನೀಡಿದ್ದ ಗುಣತಿಲಕ ಸಿಂಗಲ್‌ ರನ್‌ಗೆ ಯತ್ನಿಸಿ ಹೆಜ್ಜೆ ಮುಂದಿಟ್ಟಿದ್ದರು. ಆದರೆ ಮರುಕ್ಷಣ ಇಟ್ಟ ಹೆಜ್ಜೆಯನ್ನು ಹಿಂದಿರಿಸಿದರು. ಗುಣತಿಲಕ ಹೆಜ್ಜೆ ಹಿಂದಿಡುವಾಗ ಅವರ ಕಾಲುಗಳು ಚೆಂಡಿಗೆ ತಾಗಿ ಫೀಲ್ಡರ್‌ಗೆ ಅಡ್ಡಿಯಾಗಿತ್ತು.

ಚೆಂಡು ಹಿಡಿದುಕೊಳ್ಳಲು ಬಂದಿದ್ದ ಕೀರನ್ ಪೊಲಾರ್ಡ್‌ಗೆ ಗುಣತಿಲಕ ನಡೆ ಅಸಮಾಧಾನ ತರಿಸಿತು. ಹೀಗಾಗಿ ಪೊಲಾರ್ಡ್ ಔಟ್‌ಗಾಗಿ ಅಪೀಲ್ ಮಾಡಿದರು. ಆ ಬಳಿಕ ಪರಿಶೀಲಿಸಿದ ಥರ್ಡ್ ಅಂಪೈರ್‌ ಇದನ್ನು ಔಟ್ ಎಂದು ತೀರ್ಪಿತ್ತರು. ವೆಸ್ಟ್‌ ಇಂಡೀಸ್ ಈ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಗಳಿಸಿದೆ.

Story first published: Thursday, March 11, 2021, 12:53 [IST]
Other articles published on Mar 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+