ಆಸ್ಟ್ರೇಲಿಯಾಗಿಂತಲೂ ಈ ತಂಡದ ವಿರುದ್ಧ ಆಡುವುದು ಹೆಚ್ಚು ಸವಾಲು ಎಂದ ಶ್ರೀಲಂಕಾ ನಾಯಕ

ದೇಶದಲ್ಲಿನ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಶ್ರೀಲಂಕಾ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡುತ್ತಾ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಮಡ ಅಮೋಘ ಪ್ರದರ್ಶನ ನೀಡಿತ್ತು. ಈ ಪ್ರದರ್ಶನದಿಂದಾಗಿ ಶ್ರೀಲಂಕಾ ಕ್ರಿಕೆಟ್ ತಮಡದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಾಗಿದ್ದು ಇದೀಗ ಮತ್ತೊಂದು ಸರಣಿಗೆ ಸಜ್ಜಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡ ಇದೀಗ ಪಾಕಿಸ್ತಾನದ ವಿರುದ್ಧ ಸರಣಿಯನ್ನಾಡಲು ಸಿದ್ಧವಾಗಿದೆ. ಪಾಕಿಸ್ತಾನದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡ ಭಾಗಿಯಾಗಲಿದ್ದು ಈ ಸರಣಿ ಶ್ರೀಲಂಕಾ ತಂಡಕ್ಕೆ ಹೆಚ್ಚು ಸವಾಲಿನಿಂದ ಕೂಡಿರಲಿದೆ ಎಂದು ಸ್ವತಃ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾಗಿಂತ ಪಾಕಿಸ್ತಾನದ ಸವಾಲು ಕಠಿಣ
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೀಲಂಕಾ ತಂಡಕ್ಕೆ ಪಾಕಿಸ್ತಾನದ ವಿರುದ್ಧದ ಸರಣಿ ಮತ್ತಷ್ಟು ಸವಾಲಿನಿಂದ ಕೂಡಿರಲಿದೆ ಎಂದಿದ್ದಾರೆ ದಿಮುತ್ ಕರುಣರತ್ನೆ. ಆಸ್ಟ್ರೇಲಿಯಾ ತಂಡಕ್ಕೆ ಹೋಲಿಸಿದರೆ ಪಾಕಿಸ್ತಾನ ತಂಡ ಸ್ಪಿನ್‌ಗೆ ಉತ್ತಮವಾಗಿ ಪ್ರದರ್ಶನ ನೀಡುತ್ತದೆ ಎಂದಿದ್ದಾರೆ ಲಂಕಾ ನಾಯಕ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲಗೊಂಡಿತ್ತು.

ಎರಡು ಪಂದ್ಯಗಳ ಟೆಸ್ಟ್ ಸರಣಿ
ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಜುಲೈ 16ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು ಮೊದಲ ಪಂದ್ಯ ಗಾಲೆಯಲ್ಲಿ ನಡೆದರೆ ಎರಡನೇ ಪಂದ್ಯ ಕೊಲಂಬೋದಲ್ಲಿ ಆಯೋಜನೆಯಾಗಲಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಈಗಾಗಲೇ ಶ್ರೀಲಂಕಾಗೆ ಆಗಮಿಸಿದ್ದು ಶ್ರೀಲಂಕಾ XI ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದೆ.
ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಮದುವೆ ಗುಸುಗುಸುಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ಏನಿದೆ?

ಲಂಕಾ ಆಸಿಸ್ ಸರಣಿಯಲ್ಲಿ ಸ್ಪಿನ್ನರ್‌ಗಳದ್ದೇ ಆರ್ಭಟ
ಇನ್ನು ಇತ್ತೀಚೆಗೆ ಅಂತ್ಯವಾಗಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಸ್ಪಿನ್ನರ್‌ಗಳು ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದರು. ಗಾಲೆಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳು 20 ವಿಕೆಟ್‌ಗಳ ಪೈಕಿ 18 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಇದರ ಪರಿಣಾಮವಾಗಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆಲುವು ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಪದಾರ್ಪಣಾ ಪಂದ್ಯದಲ್ಲಿಯೇ ಮಿಂಚಿದ ಯುವ ಸ್ಪಿನ್ನರ್ ಪ್ರಬಾತ್ ಜಯಸೂರ್ಯ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಸಂಪಾದಿಸುವ ಮೂಲಕ ಮಿಂಚಿದ್ದಾರೆ. ಈ ಪ್ರದರ್ಶನದ ಕಾರಣದಿಂದಾಗಿ ಶ್ರೀಲಂಕಾ ಇನ್ನಿಂಗ್ಸ್ ಹಾಗೂ 39 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
IND vs ENG ಮೊದಲ ಏಕದಿನ: ಧೋನಿ, ಸಚಿನ್, ದ್ರಾವಿಡ್ ಪಟ್ಟಿಗೆ ಸೇರಿದ ಶಿಖರ್ ಧವನ್

ಪಾಕ್ ತಂಡವನ್ನು ಹಗುರವಾಗಿ ಪರಿಗಣಿಸಲ್ಲ
"ನಾವು ಕಳೆದ ಮೂರು ಪಂದ್ಯಗಳನ್ನು ಒಂದೇ ಅಂಗಳದಲ್ಲಿ ಆಡಿರುವುದು ನಮಗೆ ಸಹಾಯವಾಗಬಹುದು. ಆದರೆ ಪಾಕಿಸ್ತಾನಕ್ಕೆ ಆ ಅವಕಾಶವಿಲ್ಲ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಾವು ಹಗುರವಾಗಿ ಪರಿಗಣಿಸುವಂತಿಲ್ಲ. ಅವರು ಪ್ರತಿಭಾವಂತ ಆಟಗಾರರಾಗಿದ್ದು ಏಷ್ಯಾ ಭಾಗದಲ್ಲಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವ ತಂಡವಾಗಿದೆ ಪಾಕಿಸ್ತಾನ.ಆದರೆ ನಾವು ಈಗ ಉತ್ತಮ ಸ್ಥಾನದಲ್ಲಿದ್ದು ಪಾಕಿಸ್ತಾನ ತಂಡಕ್ಕೆ ಉತ್ತಮವಾಅಗಿ ಸವಾಲೊಡ್ಡಲಿದ್ದೇವೆ" ಎಂದಿದ್ದಾರೆ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications