ಭಾರತ vs ಶ್ರೀಲಂಕಾ: ಸಂಭಾವ್ಯ ತಂಡಗಳು, ಹವಾಮಾನ ವರದಿ, ಪಂದ್ಯದ ಮಾಹಿತಿ

ಕೊಲಂಬೋ: ಜುಲೈ 13ರಂದು ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿ ಜುಲೈ 18ರ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಕೊಲಂಬೋದಲ್ಲಿರುವ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ 3 PMಗೆ ಮೊದಲ ಏಕದಿನ ಪಂದ್ಯ ಶುರುವಾಗಲಿದೆ. 2.30 PMಗೆ ಟಾಸ್ ನಡೆಯಲಿದೆ. ಭಾರತ ಮತ್ತು ಶ್ರೀಲಂಕಾ ಪ್ರವಾಸವು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಒಳಗೊಂಡಿರಲಿದೆ.
ಭಾರತ ತಂಡಕ್ಕೆ ಶಿಖರ್ ಧವನ್ ನಾಯಕರಾಗಿ, ಭುವನೇಶ್ವರ್ ಕುಮಾರ್ ಉಪನಾಯಕರಾಗಿದ್ದು ಪಂದ್ಯ ಕುತೂಹಲ ಮೂಡಿಸಿದೆ. ಮೂರು ಪಂದ್ಯಗಳ ಸರಣಿಯನ್ನು ಬ್ಲೂಬಾಯ್ಸ್ ಪಡೆ ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆ.

ಪಂದ್ಯದ ಪ್ರಮುಖ ಮಾಹಿತಿ
ಭಾರತ-ಶ್ರೀಲಂಕಾ ಏಕದಿನ ಸರಣಿಯ ನೇರ ಪ್ರಸಾರ ಸೋನಿ ಚಾನೆಲ್‌ನಲ್ಲಿ ಸಿಗಲಿದೆ. ಇನ್ನು ಸೋನಿ Livನಲ್ಲಿ ನೆಟ್ಟಿಗರು ಪಂದ್ಯದ ನೇರಪ್ರಸಾರ ನೋಡಬಹುದು. ಫೇಸ್ಬುಕ್‌ನಲ್ಲೂ ಪಂದ್ಯದ ಹೈಲೈಟ್ಸ್ ವಿಡಿಯೋಗಳು ಸಿಗಲಿವೆ. ಪಂದ್ಯ ನಡೆಯುವ ದಿನ ಕೊಲಂಬೋದಲ್ಲಿ 26-29 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಸಂಜೆ 5.30ರ ವೇಳೆ ಮಳೆ ಸುರಿಯುವ ನಿರೀಕ್ಷೆಯಿದೆ. ಪಂದ್ಯಕ್ಕೆ ಮಳೆಯ ಅಡ್ಡಿಯ ಸಾಧ್ಯತೆಯಿದೆ.

ಶ್ರೀಲಂಕಾ ಸಂಭಾವ್ಯ ತಂಡ
ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಫಾತುಮ್ ನಿಸ್ಸಂಕ, ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ವನಿಂದು ಹಸರಂಗ, ದಾಸುನ್ ಶಾನಕಾ, ಚಮಿಕಾ ಕರುಣರತ್ನ, ಅಕಿಲಾ ಧನಂಜಯ, ದುಷ್ಮಂತ ಚಮೀರ, ಲಕ್ಷನ್ ಸಂದಕನ್.

ಭಾರತ ಸಂಭಾವ್ಯ ತಂಡ
ಶಿಖರ್ ಧವನ್ (ಸಿ), ಪೃಥ್ವಿ ಶಾ, ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಯುಜುವೇಂದ್ರ ಚಾಹಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications