ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

ಕೊಲಂಬೋ: ಭಾರತದ ವೇಗಿ ದೀಪಕ್ ಚಾಹರ್ ಏಕದಿನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮಂಗಳವಾರ (ಜುಲೈ 20) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಚಾಹರ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ಚಾಹರ್ ಮತ್ತು ತಂಡದ ಉಪನಾಯಕ ಭುವನೇಶ್ವರ್ ಕುಮಾರ್ ಅಜೇಯ ಬ್ಯಾಟಿಂಗ್‌ನೊಂದಿಗೆ ಭಾರತ 3 ವಿಕೆಟ್ ರೋಚಕ ಜಯ ಗಳಿಸಿದೆ.
ದೀಪಕ್ ಚಾಹರ್, ಸೂರ್ಯಕುಮಾರ್ ಯಾದವ್ ಅರ್ಧ ಶತಕ ಮತ್ತು ಯುಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್ ಬೌಲಿಂಗ್ ನೆರವಿನೊಂದಿಗೆ ದ್ವಿತೀಯ ಏಕದಿನದಲ್ಲಿ ಗೆಲುವು ಕಂಡಿರುವ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಜಯ ಗಳಿಸಿದೆ.

ಚಾಹರ್ ಚೊಚ್ಚಲ ಏಕದಿನ ಅರ್ಧ ಶತಕ
8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ದೀಪಕ್ ಚಾಹರ್ 82 ಎಸೆತಗಳಲ್ಲಿ 69 ರನ್ ಕೊಡುಗೆ ನೀಡಿದರು. ಇದರಲ್ಲಿ 7 ಫೋರ್ಸ್, 1 ಸಿಕ್ಸರ್ ಸೇರಿತ್ತು. ಇದು ಚಾಹರ್ ತನ್ನ ಏಕದಿನ ವೃತ್ತಿ ಬದುಕಿನಲ್ಲಿ ಗಳಿಸಿದ ಚೊಚ್ಚಲ ಅರ್ಧ ಶತಕ. 5ನೇ ಒಡಿಐನಲ್ಲಿ ಚಾಹರ್ ಈ ಸಾಧನೆ ತೋರಿದ್ದಾರೆ. ಭುವನೇಶ್ವರ್ ಕುಮಾರ್ ಜೊತೆ ಚಾಹರ್ 84 ರನ್‌ಗಳ ಜೊತೆಯಾಟ ನೀಡಿದ್ದೂ ಪಂದ್ಯ ಗೆಲುವಿಗೆ ಪ್ರಮುಖ ಕಾರಣವೆನಿಸಿತು.

ಶ್ರೀಲಂಕಾ ಇನ್ನಿಂಗ್ಸ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ಅವಿಷ್ಕ ಫೆರ್ನಾಂಡೋ 50, ಮಿನೋದ್ ಭಾನುಕಾ 36, ಧನಂಜಯ ಡೆ ಸಿಲ್ವಾ 32, ಚರಿತ್ ಅಸಲಂಕ 65, ದಶುನ್ ಶನಕಾ 16, ವನಿಂದು ಹಸರಂಗ 8, ಚಮಿಕ ಕರುಣರತ್ನೆ 44 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 275 ರನ್ ಗಳಿಸಿತ್ತು.
ಭಾರತದ ಇನ್ನಿಂಗ್ಸ್
ಲಂಕಾ ನೀಡಿದ್ದ 276 ರನ್ ಗುರಿ ಬೆನ್ನಟ್ಟಿದ ಭಾರತದಿಂದ ಪೃಥ್ವಿ ಶಾ 13, ಶಿಖರ್ ಧವನ್ 29, ಮನೀಷ್ ಪಾಂಡೆ 37, ಸೂರ್ಯಕುಮಾರ್ ಯಾದವ್ 53 (44), ಕೃನಾಲ್ ಪಾಂಡ್ಯ 35, ದೀಪಕ್ ಚಾಹರ್ ಅಜೇಯ 69 (82), ಭುವನೇಶ್ವರ್ ಕುಮಾರ್ ಅಜೇಯ 19 ರನ್ ಸೇರಿಸಿದರು. ಭಾರತ 49.1 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿ ಜಯದ ಕೇಕೆ ಹಾಕಿತು.

ಭುವಿ ಉಪನಾಯಕನ ಆಟ
ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಭುವನೇಶ್ವರ್ ಕುಮಾರ್ 3, ದೀಪಕ್ ಚಾಹರ್ 2, ಯುಜುವೇಂದ್ರ ಚಾಹಲ್ 3 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಕಸುನ್ ರಜಿತ 1, ವನಿಂದು ಹಸರಂಗ 3, ಲಕ್ಷನ್ ಸಂದಕನ್ 1, ದಸುನ್ ಶನಕ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಆಲ್ ರೌಂಡರ್ ಆಟ ನೀಡಿದ ದೀಪಕ್ ಚಾಹರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications