ಗಾಲ್ಲೆ ಟೆಸ್ಟ್: ಪ್ರವಾಸಿ ವೆಸ್ಟ್ ಇಂಡೀಸ್‌ಗೆ ಸೋಲಿನ ರುಚಿ ತೋರಿಸಿದ ಶ್ರೀಲಂಕಾ: ಸರಣಿಯಲ್ಲಿ 1-0 ಮುನ್ನಡೆ

ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ತಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಶ್ರಿಲಂಕಾದ ಬೌಲಿಂಗ್ ದಾಅಳಿಗೆ ಸಂಪೂರ್ಣ ಮಂಕಾದ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯನ್ನು ಕೂಡ ಎದುರಿಸಿದ್ದರು. ಆದರೆ ಎನ್ಕ್ರುಮಾ ಬಾನರ್ ಹಾಗೂ ಜೋಶುವಾ ಡ ಸಿಲ್ವಾ ಈ ಕುಸಿತದಿಂದ ಪಾರು ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರು. ಆದರೆ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನಿಂದ ಪಾರು ಮಾಡಲು ಈ ಆಟಗಾರರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ಮೊದಲ ಪಂದ್ಯದಲ್ಲಿ 187 ರನ್‌ಗಳ ಅಂತರದಿಂದ ಸೋಲು ಕಂಡಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿತು. ನಾಯಕ ಕರುಣರತ್ನೆ ಭರ್ಜರಿ ಶತಕದ ಕಾರಣದಿಂದಾಗಿ ಶ್ರೀಲಂಕಾ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಕರುಣರತ್ನೆ 147 ರನ್‌ಗಳ ಕೊಡುಗೆ ನೀಡಿದರೆ ಪತುಮ್ ನಿಸ್ಸಂಕ 56 ಹಾಗೂ ಧನಂಜಯ ಡಿಸಿಲ್ವ 61 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಶ್ರೀಲಂಕಾ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 386 ರನ್ ಪೇರಿಸಿತು.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡಿಸಿದ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 230 ರನ್‌ಗಳನ್ನು ಮಾತ್ರವೇ ಗಳಿಸಲು ಸಾಧ್ಯವಾಯಿತು. ವೆಸ್ಟ್ ಇಂಡೀಸ್ ತಮಡದ ಯಾವ ಆಟಗಾರನಿಂದಲು ಕೂಡ ಅರ್ಧ ಶತಕದ ಕೊಡುಗೆಯೂ ಬಾರಲಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 156 ರನ್‌ಗಳ ಭಾರೀ ಹಿನ್ನಡೆ ಅನುಭವಿಸಿತ್ತು ಪ್ರವಾಸಿ ವಿಂಡೀಸ್. ಶ್ರೀಲಂಕಾ ಪರವಾಗಿ ಜಯವಿಕ್ರಮೆ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರೆ ಮೆಂಡಿಸ್ ಮೂರು ವಿಕೆಟ್ ಪಡೆದರು.

ನಂತರ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ನಾಯಕ ಕರುಣರತ್ನೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 83 ರನ್‌ಗಳಿಸಿದ ಅವರಿಗೆ ಮ್ಯಾಥ್ಯೂಸ್ ಕೂಡ ಉತ್ತಮ ಸಾಥ್ ನೀಡಿದರು. ಇದರ ಪರಿಣಾಮವಾಗಿ ಶ್ರೀಲಂಕಾ 2ನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 191 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮ್ಯಾಥ್ಯೂಸ್ 69 ರನ್‌ಗಳನ್ನು ಗಳಿಸಿದರು. ಹೀಗಾಗಿ ಪ್ರವಾಸಿ ವೆಸ್ಟ್ ಇಂಡೀಸ್ ಮುಂದೆ 348 ರನ್‌ಗಳ ಬೃಹತ್ ಗುರಿಯನ್ನು ಶ್ರೀಲಂಕಾ ಮುಂದಿಟ್ಟಿತ್ತು.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

ಈ ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೇ ಭಾರೀ ಕುಸಿತಕ್ಕೆ ಒಳಗಾಯಿತು. ಕೇವಲ 18 ರನ್‌ಗಳಿಗೆ ತನ್ನ 6 ವಿಕೆಟ್ ಕಳೆದುಕೊಂಡಿತ್ತು ವೆಸ್ಟ್ ಇಂಡೀಸ್. ಆದರೆ ಈ ಸಂದರ್ಭದಲ್ಲಿ ಎನ್ಕ್ರುಮಾ ಬಾನರ್ ಹಾಗೂ ಜೋಶುವಾ ಡ ಸಿಲ್ವಾ ಜೊತೆಯಾದರು. ಈ ಇಬ್ಬರು ಕೂಡ ಎಚ್ಚರಿಕೆಯ ಆಟವಾಡುತ್ತಾ ಈ ಭಾರೀ ಕುಸಿತದಿಂದ ಒಂದು ಹಂತಕ್ಕೆ ಚೇತರಿಸಿಕೊಳ್ಳುವಂತೆ ಮಾಡಿದರು. ಎನ್ಕ್ರುಮಾ ಬಾನರ್ ಅಜೇಯ 68 ರನ್‌ಗಳಿಸಿದರೆ ಸಿಲ್ವ 54 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಈ ಜೋಡಿ 100 ರನ್‌ಗಳ ಜೊತೆಯಾಟ ನೀಡಿತು. ಅಂತಿಮವಾಗಿ ವೆಸ್ಟ್ ಇಂಡೀಸ್ 160 ರನ್‌ಗಳಿಗೆ ಎರಡನೇ ಇನ್ನಿಂಗ್ಸ್‌ನ ಆಟವನ್ನು ಮುಗಿಸಿತು. ಈ ಮೂಲಕ 187 ರನ್‌ಗಳ ಅಂತರದ ಸೋಲು ಅನುಭವಿಸಿದೆ ವೆಸ್ಟ್ ಇಂಡೀಸ್.

ಈ ಗೆಲುವಿನಿಂದಿಗೆ ಶ್ರೀಲಂಕಾ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ ಆರಂಭವಾಗಲಿದ್ದು ಮೊದಲ ಪಂದ್ಯ ನಡೆದ ಗಾಲ್ಲೆ ಕ್ರೀಡಾಂಗಣವೇ ಎರಡನೇ ಟೆಸ್ಟ್‌ಗೂ ಆತಿಥ್ಯ ವಹಿಸಲಿದೆ.

ಶ್ರೀಲಂಕಾ ಪ್ಲೇಯಿಂಗ್ XI: ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಓಷಾದ ಫೆರ್ನಾಂಡೋ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಸುರಂಗ ಲಕ್ಮಲ್, ದುಷ್ಮಂತ ಚಮೀರ, ಲಸಿತ್ ಎಂಬುಲ್ದೇನಿಯ, ಪ್ರವೀಣ್ ಜಯವಿಕ್ರಮ
ಬೆಂಚ್: ಚರಿತ್ ಅಸಲಂಕಾ, ಮಿನೋದ್ ಭಾನುಕ, ರೋಷನ್ ಸಿಲ್ವಾ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ಚಾಮಿಕ ಕರುಣಾರತ್ನೆ, ಅಸಿತ ಫೆರ್ನಾಂಡೋ, ಲಕ್ಷಣ ಸಂದಕನ್, ಕಾಮಿಲ್ ಮಿಶ್ರಾ, ಸುಮಿಂದಾ ಲಕ್ಷಣ್, ಚಾಮಿಕ ಗುಣಶೇಖರ

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್, ನ್ಕ್ರುಮಾ ಬೊನ್ನರ್, ಶಾಯ್ ಹೋಪ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಜೋಶುವಾ ಡ ಸಿಲ್ವಾ (ವಿಕೆಟ್ ಕೀಪರ್), ರಖೀಮ್ ಕಾರ್ನ್‌ವಾಲ್, ಜೋಮೆಲ್ ವಾರಿಕನ್, ಶಾನನ್ ಗೇಬ್ರಿಯಲ್
ಬೆಂಚ್: ಕೆಮರ್ ರೋಚ್, ಜೇರೆಸ್ಮಿ ಪೆರ್ಮಾ, ಜೇರೆಮಿಡೆನ್ ಸೀ ಸೊಲೊಜಾನೊ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 16:29 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X