For Quick Alerts
ALLOW NOTIFICATIONS  
For Daily Alerts
 

ಮಹಿಳಾ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ನ ಸ್ಟೆಫಾನಿ ಟೇಲರ್

Stafanie Taylor becomes 2nd West Indian to take T20I hat-trick in womens cricket

ಆ್ಯಂಟಿಗುವಾ: ವೆಸ್ಟ್‌ ಇಂಡೀಸ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಟೆಫಾನಿ ಟೇಲರ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ತೋರಿದ ಎರಡನೇ ವೆಸ್ಟ್ ಇಂಡೀಸ್ ಆಟಗಾರ್ತಿಯಾಗಿ ಸ್ಟೆಫಾನಿ ಗುರುತಿಸಿಕೊಂಡಿದ್ದಾರೆ.

ಆ್ಯಂಟಿಗುವಾದಲ್ಲಿನ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್‌ ಇಂಡೀಸ್ ಮಹಿಳೆಯರು ಮತ್ತು ಪಾಕಿಸ್ತಾನ ಮಹಿಳೆಯರ ನಡುವಿನ ಮೂರನೇ ಟಿ20ಐ ಪಂದ್ಯದಲ್ಲಿ ಸ್ಟೆಫಾನಿ ಟೇಲರ್ ಹ್ಯಾಟ್ರಿಕ್ ವಿಕೆಟ್‌ ದಾಖಲೆ ಬರೆದಿದ್ದಾರೆ. 20ನೇ ಓವರ್‌ನಲ್ಲಿ ಸ್ಟೆಫಾನಿ ಈ ಸಾಧನೆ ತೋರಿದ್ದಾರೆ.

ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ 19.2ನೇ ಓವರ್‌ನಲ್ಲಿ ಫಾತಿಮಾ ಸನಾ, 19.3ನೇ ಓವರ್‌ನಲ್ಲಿ ಡಯಾನಾ ಬೇಗ್, 19.4ನೇ ಓವರ್‌ನಲ್ಲಿ ಆನಂ ಅಮಿನ್ ವಿಕೆಟ್‌ ಕೆಡವುವ ಮೂಲಕ ಸ್ಟೆಫಾನಿ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ ಸ್ಟೆಫಾನಿ, ಪಂದ್ಯದಲ್ಲಿ 43 ರನ್ ಕೊಡುಗೆಯೂ ನೀಡಿದ್ದರು.

ಪಂದ್ಯದಲ್ಲಿ 17 ರನ್‌ಗೆ 4 ವಿಕೆಟ್‌ ಪಡೆದಿರುವ ಸ್ಟೆಫಾನಿ ಪಂದ್ಯಶ್ರೇಷ್ಠೆ ಪ್ರಶಸ್ತಿಗೂ ಭಾಜನರಾದರು. ಇದಕ್ಕೂ ಮುನ್ನ ವಿಂಡೀಸ್‌ನ ಅನಿಸಾ ಮೊಹಮ್ಮದ್ ಅವರು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮಾಡಿದ್ದರು. ಅಂದ್ಹಾಗೆ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ 6 ವಿಕೆಟ್‌ ಜಯ ಗಳಿಸಿತು. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ವಿಂಡೀಸ್ 3-0ಯಿಂದ ಪಾರಮ್ಯ ಮೆರೆದಿದೆ.

Story first published: Monday, July 5, 2021, 18:45 [IST]
Other articles published on Jul 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+