ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 14 ವರ್ಷ ಕಳೆದ ಬಳಿಕ ಸಚಿನ್‌ಗಿಂತ ವಿರಾಟ್ ಕೊಹ್ಲಿ ಎಲ್ಲದರಲ್ಲೂ ಮುಂದು!

2008ರ ಆಗಸ್ಟ್ ತಿಂಗಳಿನಲ್ಲಿ ಭಾರತ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿತ್ತು. ಎಂಎಸ್ ಧೋನಿ ನಾಯಕತ್ವದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದರು. ಈ ಪ್ರವಾಸದ ಪ್ರಥಮ ಏಕದಿನ ಪಂದ್ಯ ಆಗಸ್ಟ್ 18ರಂದು ಡಂಬುಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಅದೇ ಮೊದಲ ಬಾರಿಗೆ ಆಡುವ ಅವಕಾಶ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಟೀಮ್ ಇಂಡಿಯಾ ಪರ ಗೌತಮ್ ಗಂಭೀರ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಆ ಪಂದ್ಯದಲ್ಲಿ 22 ಎಸೆತಗಳಲ್ಲಿ 12 ರನ್ ಕಲೆಹಾಕಿದ್ದರು. ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್ ಆಡಿ ನಿನ್ನೆಗೆ ( ಆಗಸ್ಟ್ 18, 2022 ) 14 ವರ್ಷಗಳು ಕಳೆದಿವೆ.
ಹೀಗೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಆಟವನ್ನಾಡಿದ್ದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಸಾಕಷ್ಟು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಇದೀಗ ಕಿಂಗ್ ಆಫ್ ಕ್ರಿಕೆಟ್ ಎನಿಸಿಕೊಂಡಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿ ಈ ಹಿಂದೆ ಭವಿಷ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯಬಹುದಾದ ಸಾಮರ್ಥ್ಯವಿರುವ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹೆಸರನ್ನು ಸಂಪಾದಿಸಿದ್ದರು.
ಆದರೆ ಕಳೆದ 3 ವರ್ಷಗಳಿಂದ ಯಾವುದೇ ಶತಕವನ್ನು ಬಾರಿಸದೆ ಮಂಕಾಗಿರುವ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಅರ್ಧಶತಕವನ್ನೂ ಸಹ ಗಳಿಸಲಾಗದೆ ಮಂಕಾಗಿದ್ದಾರೆ. ಹೀಗೆ ಏಳುಬೀಳುಗಳನ್ನು ಕಂಡಿರುವ ವಿರಾಟ್ ಕೊಹ್ಲಿ 14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ನಂತರ ಹೊಂದಿರುವ ಅಂಕಿಅಂಶ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ನಂತರ ಹೊಂದಿದ್ದ ಅಂಕಿ ಅಂಶಗಳ ನಡುವಿನ ಹೋಲಿಕೆಯ ವಿವರ ಕೆಳಕಂಡಂತಿದೆ.

14 ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ vs ವಿರಾಟ್ ಕೊಹ್ಲಿ
ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 14 ವರ್ಷಗಳನ್ನು ಕಳೆದ ನಂತರ ಇಬ್ಬರ ಅಂಕಿಅಂಶಗಳು:
ಪಂದ್ಯಗಳು: 427
ಇನ್ನಿಂಗ್ಸ್: ಸಚಿನ್ - 484, ವಿರಾಟ್ ಕೊಹ್ಲಿ - 463
ರನ್‌ಗಳು: ಸಚಿನ್ ತೆಂಡೂಲ್ಕರ್ - 21522, ವಿರಾಟ್ ಕೊಹ್ಲಿ - 23726
ಅರ್ಥಶತಕಗಳು: ಸಚಿನ್ ತೆಂಡೂಲ್ಕರ್ - 100, ವಿರಾಟ್ ಕೊಹ್ಲಿ - 122
ಶತಕಗಳು: ಸಚಿನ್ ತೆಂಡೂಲ್ಕರ್ - 67, ವಿರಾಟ್ ಕೊಹ್ಲಿ - 70
ದ್ವಿಶತಕಗಳು: ಸಚಿನ್ ತೆಂಡೂಲ್ಕರ್ - 7, ವಿರಾಟ್ ಕೊಹ್ಲಿ - 7

ಸಚಿನ್‌ಗಿಂತ ಹೆಚ್ಚು ರನ್, ಶತಕ ಹಾಗೂ ಅರ್ಧಶತಕ ಬಾರಿಸಿರುವ ಕೊಹ್ಲಿ. ಆದರೆ..
ಇನ್ನು 14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಮುಗಿದ ನಂತರ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇಬ್ಬರ ಅಂಕಿ ಅಂಶಗಳನ್ನು ಗಮನಿಸಿದರೆ ಸಚಿನ್ ತೆಂಡೂಲ್ಕರ್ ಅವರಿಗಿಂತ ವಿರಾಟ್ ಕೊಹ್ಲಿ ಹೆಚ್ಚು ಶತಕ, ಹೆಚ್ಚು ಅರ್ಧಶತಕ ಹಾಗೂ ಹೆಚ್ಚು ರನ್ ಕಲೆ ಹಾಕಿ ಮುಂದೆ ಇದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಅವರಿಗಿಂತ ವಿರಾಟ್ ಕೊಹ್ಲಿ ಹೆಚ್ಚು ಪಂದ್ಯ ಮತ್ತು ಇನ್ನಿಂಗ್ಸ್‌ನಲ್ಲಿ ಆಡಿರುವುದು ಇಲ್ಲಿ ಗಮನಾರ್ಹ.

ಕೆಟ್ಟ ಫಾರ್ಮ್ ಇಲ್ಲದೇ ಇದ್ದಿದ್ದರೆ ಕೊಹ್ಲಿ ಇನ್ನೂ ಹೆಚ್ಚು ಅಂಕಿ ಅಂಶ ಹೊಂದಿರುತ್ತಿದ್ದರು
ವಿರಾಟ್ ಕೊಹ್ಲಿ ಕೊನೆಯ ಶತಕ ಬಾರಿಸಿ 3 ವರ್ಷಗಳು ಈಗಾಗಲೇ ಉರುಳಿ ಹೋಗಿವೆ. ಹಾಗೂ ಇತ್ತೀಚಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಲು ಕೂಡ ಪರದಾಡುತ್ತಿದ್ದು, ಕೆಟ್ಟ ಫಾರ್ಮ್ ಎದುರಿಸುತ್ತಿದ್ದಾರೆ. ಒಂದುವೇಳೆ ವಿರಾಟ್ ಕೊಹ್ಲಿ ಈ 3 ವರ್ಷಗಳಲ್ಲಿ ತಾವು ಹಿಂದೆ ಆಡುತ್ತಿದ್ದ ರೀತಿ ಪ್ರದರ್ಶನ ನೀಡಿದ್ದಿದ್ದರೆ ಇನ್ನೂ ಉತ್ತಮವಾದ ಅಂಕಿ ಅಂಶವನ್ನು ಹೊಂದಿರುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications