ಚಾಪೆಲ್ ಆರೋಪಕ್ಕೆ ಸ್ಟೀವ್ ಸ್ಮಿತ್ ಕೊಟ್ರು ಖಡಕ್ ಉತ್ತರ!

ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರು ತನ್ನ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಮಾಡಿದ ಆರೋಪಕ್ಕೆ ಸ್ಟೀವ್ ಸ್ಮಿತ್ ಉತ್ತರವನ್ನು ನೀಡಿದ್ದಾರೆ. ಮಾಜಿ ನಾಯಕ ಇಯಾನ್ ಚಾಪೆಲ್ ಮಾಡಿದ ಆರೋಪವನ್ನು ಸ್ಮಿತ್ ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ್ದಾರೆ.
ಆಸ್ಟ್ರೇಲಿಯಾ ತನ್ನ ತವರಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಟೂರ್ನಿಯನ್ನು ಭರ್ಜರಿಯಾಗಿ ಗೆದ್ದು ಕೊಂಡಿದೆ. 2-0ಅಂತರದಲ್ಲಿ ಈ ಪಂದ್ಯವನ್ನು ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಗೆಲುವಿನ ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಸ್ಟಿವ್ ಸ್ಮಿತ್ ನಾಯಕನನ್ನು ಕಡೆಗಣಿಸಿ ತಾನೇ ಫೀಲ್ಡರ್‌ಗಳನ್ನು ನಿಲ್ಲಿಸುತ್ತಿದ್ದರು, ಅದು ನಾಯಕನಿಗೆ ನೀಡುವ ಅಗೌರವ ಎಂದು ಖಾರವಾಗಿ ಹೇಳಿಕೆ ನೀಡಿದ್ದರು.
ಇದಕ್ಕೆ ಆಸ್ಟ್ರೆಲಿಯಾದ ಚಾನೆಲ್ ಒಂದಕ್ಕೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಉತ್ತರವನ್ನು ನೀಡಿದ್ದಾರೆ. ನಾನು ತಂಡದ ನಾಯಕ ಟಿಮ್ ಪೈನ್‌ಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡುವ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ತನ್ನ ಉದ್ದೇಶವಿದ್ದದ್ದು ತಂಡಕ್ಕೆ ಸಹಾಯ ಮಾಡುವುದಷ್ಟೇ ಆಗಿತ್ತು ಎಂದು ತಿಳಿಸಿದ್ದಾರೆ.
ಟಿಮ್ ತಮ್ಮ ಜವಾಬ್ಧಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ನಾನು ಅವರಿಗೆ ಸಲಹೆಗಳನ್ನಷ್ಟೇ ನೀಡುತ್ತಿರುತ್ತೇನೆ. ನಾನು ಯಾವಾಗಲು ತಂಡದ ಜೊತೆಗೇ ಇರಲು ಬಯಸುತ್ತೇನೆ. ತಂಡದಲ್ಲಿ ಆಟಗಾರರು ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಎರಡು ಅಮೋಘ ಜಯ ದಾಖಲಿಸಿದ್ದೇವೆ ಎಂದು ಸ್ಟೀವ್ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications