ಮೊದಲ ರನ್‌ಗೆ 45 ನಿಮಿಷ,39 ಎಸೆತ; ಪ್ರೇಕ್ಷಕರಿಂದ ಎದ್ದುನಿಂತು ಚಪ್ಪಾಳೆ ಗಿಟ್ಟಿಸಿದ ಸ್ಟೀವ್ ಸ್ಮಿತ್
ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೀವ್ ಸ್ಮಿತ್ ಅದ್ಭುತ ಆಟಗಾರ ಎಂಬುದಕ್ಕೆ ಎರಡು ಮಾತಿಲ್ಲ. ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಒತ್ತಿದ್ದಾರೆ ಸ್ಟೀವ್ ಸ್ಮಿತ್. ಆದರೆ ಇವತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ರನ್ ಗಳಿಸಲು ಅಕ್ಷರಶಃ ಪರದಾಡಿದ ಪ್ರಸಂಗ ನಡೆಯಿತು.
ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಪಂದ್ಯವನ್ನು ಆಸ್ಟ್ರೇಲಿಯಾ ಆಡುತ್ತಿದೆ. ಈ ಪಂದ್ಯದಲ್ಲಿ ಆಡಲು ಮೈದಾನಕ್ಕಿಳಿದ ಸ್ಟೀವ್ ಸ್ಮಿತ್ ಆರಂಭದಲ್ಲೇ ರನ್ ಗಳಿಸಲು ಪರದಾಡಿದರು. ಬರೊಬ್ಬರಿ ನಲವತ್ತೈದು ನಿಮಿಷಗಳನ್ನು ಕ್ರೀಸ್‌ನಲ್ಲಿ ಕಳೆದರೂ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಬಳಿಕ 46ನೇ ನಿಮಿಷದಲ್ಲಿ ಒಂಟಿ ರನ್ ಕದಿಯುವಲ್ಲಿ ಸ್ಮಿತ್ ಯಶಸ್ವಿಯಾದರು.
ಆಸ್ಟ್ರೇಲಿಯಾದ ಸಿಡ್ನಿ ಮೈದಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಪಂದ್ಯ ನಡೆಯುತ್ತಿದೆ. ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮೂರನೇ ಪಂದ್ಯದಲ್ಲೂ ಹಿಡಿತ ಸಾಧಿಸಿದೆ.

ಪ್ರೇಕ್ಷಕರಿಂದ ಚಪ್ಪಾಳೆ ಸದ್ದು
ಮೊದಲ 38 ಎಸೆತಗಳಲ್ಲಿ ಸ್ಟೀವ್ ಸ್ಮಿತ್ ಒಂದೂ ರನ್ ತೆಗೆದುಕೊಳ್ಳು ಸಾಧ್ಯವಾಗಲೇ ಇಲ್ಲ. ಬಳಿಕ 39ನೇ ಎಸೆತದಲ್ಲಿ ಒಂಟಿ ರನ್ ತೆಗೆದು ಖಾತೆ ತೆರೆದರು. ಈ ಸಂದರ್ಭದಲ್ಲಿ ಪಂದ್ಯ ನೋಡಲು ಬಂದ ಪ್ರೇಕ್ಷಕರು ಸ್ಟೀವ್ ಸ್ಮಿತ್‌ಗೆ ಎದ್ದು ನಿಂತು ತಮಾಷೆಯಾಗಿ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ ಪ್ರಸಂಗವೂ ನಡೆಯಿತು. ಇದನ್ನು ಗಮನಿಸಿದ ಸ್ಟೀವ್ ಸ್ಮಿತ್ ಪ್ರೇಕ್ಷಕರತ್ತ ಕೈ ಬೀಸಿ ನಗುಮೊಗದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಟೀಮ್ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ 2007/08ರಲ್ಲಿ ಬರೊಬ್ಬರಿ 40 ಎಸೆತಗಳ ನಂತರ ಮೊದಲ ರನ್ ಗಳಿಸಿದ್ದರು.

1ರನ್‌ಗೆ 40 ಎಸೆತ ಎದುರಿಸಿದ್ದ ದ್ರಾವಿಡ್:
ಇದಕ್ಕೂ ಮುನ್ನ ಸ್ಟೀವ್ ಸ್ಮಿತ್ 2014ರಲ್ಲಿ ಭಾರತದ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ)ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ರನ್ ಗಳಿಸಲು 18 ಎಸೆತಗಳನ್ನು ಎದುರಿಸಿದ್ದರು. 1991ರ ಬಳಿಕ ಆಸ್ಟ್ರೇಲಿಯಾ ಆಟಗಾರನೋರ್ವ ಮೊದಲ ರನ್ ಗಳಿಸಲು ತೆಗೆದುಕೊಂಡ ಅತಿ ಹೆಚ್ಚು ಎಸೆತಗಳು ಎಂಬ ದಾಖಲೆಗೂ ಸ್ಮಿತ್ ಈ ಮೂಲಕ ಪಾತ್ರರಾಗಿದ್ದಾರೆ. ಅಂದು ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ಬೂನ್ ಮೊದಲ ರನ್ ಗಳಿಸಲು ಇದೇ ರೀತಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ್ದರು.
ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!

ಅರ್ಧ ಶತಕ ಬಾರಿಸಿದ ಸ್ಮಿತ್:
ಸ್ಟೀವ್ ಸ್ಮಿತ್ ಮೊದಲ ದಿನದ ಆಟದಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. 63 ರನ್‌ಗಳಿಸಿದ ಸ್ಮಿತ್ ಬಳಿಕ ಕಾಲಿನ್ ಗ್ರ್ಯಾಂಡ್‌ಹೊಮೆ ಗೆ ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಸರಣಿಯಲ್ಲಿ ಈ ವರೆಗೆ ಐದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಸ್ಮಿತ್ ಇದೇ ಮೊದಲ ಬಾರಿಗೆ ನೀಲ್ ವ್ಯಾಗ್ನಾರ್ ಅವರಿಗೆ ವಿಕೆಟ್ ನೀಡದೆ ಕಾಲಿನ್ ಗ್ರ್ಯಾಂಡ್‌ಹೊಮೆಗೆ ವಿಕೆಟ್ ಒಪ್ಪಿಸಿದ್ದಾರೆ.

ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸಿಸ್
ಸ್ಮಿತ್ ಈ ಪಂದ್ಯದಲ್ಲಿ ಲ್ಯಾಬುಸ್ಚಾಗ್ನೆ ಅವರಜೊತೆ ಸೇರಿ 154 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಲ್ಯಾಬುಸ್ಚಾಗ್ನೆ ಈ ಪಂದ್ಯದಲ್ಲಿ ಅಜೇಯ ಶತಕವನ್ನು ಬಾರಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಲ್ಯಾಬುಸ್ಚಾಗ್ನೆ ತಾವು ಆಡಿರುವ 14 ಪಂದ್ಯಗಳಲ್ಲಿ 4ನೇ ಶತಕ ಬಾರಿಸಿ ತಮ್ಮ ಅದ್ಭುತ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಈ ಮೂಲಕ ಈ ದಶಕದ ಮೊದಲ ಶತಕ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರಾಗಿದ್ದಾರೆ. ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯಾ 283 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications