ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗುಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!

Ranji Trophy: Shubman ‘abuses’ umpire after being given out

ಮೊಹಾಲಿ, ಜನವರಿ 3: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಶುಬ್‌ಮಾನ್ ಗಿಲ್ ಅಂಪೈರ್ ನಿಂದಿಸಿ ವಿವಾದ ಸೃಷ್ಟಿಸಿದ್ದಾರೆ. ಗಿಲ್ ನಡೆಯಿಂದ ಪಂದ್ಯ ಕ್ಷಣಕಾಲ ನಿಲುಗಡೆಯಾದ ಪ್ರಸಂಗವೂ ನಡೆದಿದೆ.

ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಶುಕ್ರವಾರ (ಜನವರಿ 3) ರಣಜಿ ಟ್ರೋಫಿ ಎಲೈಟ್‌ ಗ್ರೂಪ್‌ ಎ ಮತ್ತು ಬಿ 4ನೇ ಸುತ್ತಿನ ಪಂದ್ಯಕ್ಕಾಗಿ ಆತಿಥೇಯ ಪಂಜಾಬ್ ಮತ್ತು ದೆಹಲಿ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಔಟ್ ಆಗಿದ್ದರೂ ನಿಂತಲ್ಲಿಂದ ಕದಲದೆ ಗಿಲ್ ಅಂಪೈರ್‌ ಅವರನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

ಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಪಂಜಾಬ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್ ಶುಬ್‌ಮಾನ್‌ ಗಿಲ್, ಡೆಲ್ಲಿ ಕೀಪರ್ ಅನುಜ್ ರಾವತ್‌ಗೆ ಕ್ಯಾಚಿತ್ತರು. ರಣಜಿಗೆ ಪಾದಾರ್ಪಣೆ ಮಾಡಿದ್ದ ಅಂಪೈರ್ ಪಶ್ಚಿಮ್ ಪಾಠಕ್ ಇದಕ್ಕೆ ಔಟ್ ತೀರ್ಪಿತ್ತರು. ಆದರೆ ಗಿಲ್ ಕ್ರೀಸ್‌ನಿಂದ ಕದಲಲೇ ಇಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?

ಗಿಲ್ ಕ್ರೀಸ್‌ನಿಂದ ಹೊರನಡೆಯದ ಕಾರಣ ಅಂಪೈರ್ ಔಟ್ ತೀರ್ಪನ್ನು ರದ್ದುಗೊಳಿಸಿದರು. ಇದು ಡೆಲ್ಲಿ ಆಟಗಾರರ ಅಸಮಾಧಾನಕ್ಕೆ ಕಾರಣವಾಯ್ತು. ನಿತೀಶ್ ರಾಣಾ ನಾಯಕತ್ವದ ಡೆಲ್ಲಿ ತಂಡ ಆಟ ನಿಲ್ಲಿಸಿ ಮೈದಾನದಿಂದ ಹೊರ ನಡೆಯಿತು. ಕೊನೆಗೆ ಪಂದ್ಯ ಪುನರಾರಾಂಭಗೊಳ್ಳಲು ಮ್ಯಾಚ್ ರೆಫರೀ ಪಿ ರಂಗನಾಥನ್ ಮಧ್ಯಪ್ರವೇಶಿಸಬೇಕಾಯ್ತು.

ಕ್ರಿಸ್‌ ಲಿನ್ ಸಿಕ್ಸ್ ಚಚ್ಚಿದರೆ ಆಸ್ಟ್ರೇಲಿಯಾ ಕಾಡ್ಗಿಚ್ಚು ಸಂತ್ರಸ್ತರಿಗೆ ಹಣ ದಾನ!ಕ್ರಿಸ್‌ ಲಿನ್ ಸಿಕ್ಸ್ ಚಚ್ಚಿದರೆ ಆಸ್ಟ್ರೇಲಿಯಾ ಕಾಡ್ಗಿಚ್ಚು ಸಂತ್ರಸ್ತರಿಗೆ ಹಣ ದಾನ!

ಪಂದ್ಯ ಮರು ಆರಂಭಗೊಂಡ ಬಳಿಕ 20ರ ಹರೆಯದ ಶುಬ್‌ಮಾನ್ ಗಿಲ್ 13.1ನೇ ಓವರ್‌ನಲ್ಲಿ ಸಿಮರ್‌ಜೀತ್‌ ಸಿಂಗ್ ಎಸೆತಕ್ಕೆ ಕೀಪರ್ ಅಂಜು ರಾವತ್‌ಗೆ ಮತ್ತೆ ಕ್ಯಾಚ್‌ ನೀಡಿದರು. ಈ ಬಾರಿ ಗಿಲ್ ನಿರ್ಗಮಿಸಲೇಬೇಕಾಯ್ತು. ಶುಬ್‌ಮಾನ್‌ ಔಟಾದಾಗ 41 ಎಸೆತಗಳಿಗೆ 23 ರನ್ ಬಾರಿಸಿದ್ದರು. ಟೀ ಬ್ರೇಕ್‌ ವೇಳೆಗೆ ಪಂಜಾಬ್ 57 ಓವರ್‌ಗೆ 5 ವಿಕೆಟ್ ಕಳೆದು 198 ರನ್ ಮಾಡಿತ್ತು.

Story first published: Friday, January 3, 2020, 21:03 [IST]
Other articles published on Jan 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X