For Quick Alerts
ALLOW NOTIFICATIONS  
For Daily Alerts
 

148 ಇನ್ನಿಂಗ್ಸ್ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಚಿನ್‌ಗೆ ಸಮನಾಗಿ ನಿಂತ ಸ್ಟೀವನ್ ಸ್ಮಿತ್

Sachin vs Smith

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶತಮಾನದ ಶ್ರೇಷ್ಠ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಚಿನ್ ಕುರಿತಾಗಿ ಹಲವಾರು ದಾಖಲೆಗಳೇ ತಿಳಿಸುತ್ತವೆ. ಹೀಗಾಗಿ ಅವರ ಬಗ್ಗೆ ಹೆಚ್ಚು ವಿಶೇಷವಾಗಿ ಹೇಳಲು ಏನು ಉಳಿದಿಲ್ಲ. ಅವರ ದಾಖಲೆ ತಿಳಿದುಕೊಂಡ್ರೆ ಸಾಕು ತೆಂಡೂಲ್ಕರ್ ಕ್ರಿಕೆಟ್ ಲೋಕವನ್ನ ಎಷ್ಟರ ಮಟ್ಟಿಗೆ ಆಳಿ ಹೋಗಿದ್ರು ಎಂದು ತಿಳಿದುಬರುತ್ತದೆ.

ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ. ಅವರು ತಮ್ಮ ಹೆಸರಿನಲ್ಲಿ ಅಳಿಸಲಾಗದ ದಾಖಲೆಗಳನ್ನು ಸಹ ಬರೆದಿದ್ದಾರೆ. ಆದಾಗ್ಯೂ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಸಚಿನ್ ತೆಂಡೂಲ್ಕರ್ ಅವರ ರನ್ ಅಂಕಿಅಂಶಗಳಿಗೆ ಸರಿಸಮಾನರಾಗಿದ್ದಾರೆ.

ಇದುವರೆಗೆ 83 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಟೀವನ್ ಸ್ಮಿತ್ 148 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 148 ಇನ್ನಿಂಗ್ಸ್‌ಗಳನ್ನು ಪೂರ್ಣಗೊಳಿಸಿದ ನಂತರ ಸ್ಮಿತ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಷ್ಟೇ ಸ್ಕೋರ್ ಕಲೆಹಾಕಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯ ವ್ಯಕ್ತವಾಗುತ್ತದೆ.

ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ 148 ಇನ್ನಿಂಗ್ಸ್‌ಗಳಲ್ಲಿ 7869 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸ್ಟೀವ್ ಸ್ಮಿತ್ ನಿಖರವಾಗಿ 148 ಇನ್ನಿಂಗ್ಸ್‌ಗಳಲ್ಲಿ 7862 ರನ್ ಗಳಿಸಿದ್ದಾರೆ. ಇಬ್ಬರ ನಡುವೆ ಕೇವಲ 7 ರನ್‌ಗಳ ಅಂತರವಿದೆ. ಇನ್ನು ಬ್ಯಾಟಿಂಗ್ ಸರಾಸರಿಯಲ್ಲಿ ಸಚಿನ್ ಶೇಕಡಾ 59.17ರಷ್ಟು ಹೊಂದಿದ್ದರೆ, ಸ್ಮಿತ್ ಶೇಕಡಾಗೆ 60.01ರಷ್ಟು ಸರಾಸರಿ ಹೊಂದುವ ಮೂಲಕ ಕೊಂಚ ವ್ಯತ್ಯಾಸಗೊಂಡಿದ್ದಾರೆ.

ಸಚಿನ್ 29 ಶತಕ ಸಿಡಿಸಿದ್ದರೆ ಸ್ಮಿತ್ 27 ಶತಕ ಸಿಡಿಸಿದ್ದಾರೆ. ಇಲ್ಲೂ ಕೂಡ ಕೇವಲ ಎರಡು ಶತಕದ ವ್ಯತ್ಯಾಸವಿದೆ. ಅಷ್ಟು ಇನ್ನಿಂಗ್ಸ್‌ನಲ್ಲಿ ಸಚಿನ್ 31 ಅರ್ಧ ಶತಕ ಸಿಡಿಸಿದ್ದರೆ, ಸ್ಮಿತ್ 34 ಅರ್ಧ ಶತಕ ಸಿಡಿಸಿದ್ದರು. ಕೇವಲ 3 ಅರ್ಧ ಶತಕಗಳ ವ್ಯತ್ಯಾಸವಿದೆ. ಸಚಿನ್ ಅತ್ಯಧಿಕ ಸ್ಕೋರ್ ಅಜೇಯ 248 ಆಗಿದ್ದು, ಸ್ಮಿತ್ ಗರಿಷ್ಠ 239 ಸ್ಕೋರ್ ಆಗಿದೆ. ಇವರಿಬ್ಬರ ನಡುವೆ ಕೇವಲ 9 ರನ್‌ಗಳ ಅಂತರವಿದೆ.

ಈ ರೀತಿ ಟೆಸ್ಟ್ ನೊಂದಿಗೆ ಪ್ರತ್ಯೇಕವಾಗಿ 148 ಇನ್ನಿಂಗ್ಸ್ ಗಳನ್ನು ಪೂರೈಸಿರುವ ಸಚಿನ್ ಹಾಗೂ ಸ್ಮಿತ್ ಅವರ ಇನ್ನಿಂಗ್ಸ್ ಬಹುತೇಕ ಒಂದೇ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಅಂಕಿಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಅಭಿಮಾನಿಗಳು ಈ ಅಂಕಿಅಂಶಗಳ ಬಗ್ಗೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Story first published: Thursday, March 10, 2022, 9:35 [IST]
Other articles published on Mar 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+