ಸಚಿನ್ ಬಳಿಕ ಈತನ ಆಟವನ್ನು ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದೇನೆ: ಯುವ ಆಟಗಾರನ ಬಗ್ಗೆ ಗವಾಸ್ಕರ್ ಮಾತು

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಇಲ್ಲಿ ಅದ್ಭುತ ಪ್ರದರ್ಶನ ನಿಡಿ ಅದೆಷ್ಟೋ ಆಟಗಾರರು ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಅಂಥಾದ್ದೇ ಪ್ರದರ್ಶನಗಳು ಕೆಲ ಯುವ ಆಟಗಾರರಿಂದ ಬಂದಿದ್ದು ಕೆಲ ಆಟಗಾರರು ಭಾರತೀಯ ತಂಡದಲ್ಲಿ ಈಗಾಗಲೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಆಟಗಾರರ ಪೈಕಿ ಓರ್ವ ಯುವ ಕ್ರಿಕೆಟಿಗನ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಅಂಥಾದ್ದೇ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪೈಕಿ ಓರ್ವ ಆಟಗಾರನ ಬಗ್ಗೆ ಸುನಿಲ್ ಗವಾಸ್ಕರ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ನಾನು ಈತನ ಆಟವನ್ನು ನೋಡುವುದಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಸುನಿಲ್ ಗವಾಸ್ಕರ್. ಹಾಗಾದರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಸವಾಸ್ಕರ್ ಅವರ ಮೆಚ್ಚುಗೆಗೆ ಪಾತ್ರವಾಗಿರುವ ಆ ಆಟಗಾರ ಯಾರು? ಮುಂದೆ ಓದಿ..

ಯುವ ವೇಗದ ಬೌಲಿಂಗ್ ಸೆನ್ಸೇಶನ್ ಬಗ್ಗೆ ಗವಾಸ್ಕರ್ ಭರವಸೆ
ಐಪಿಎಲ್‌ನಲ್ಲಿ ನೀಡಿದ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪೈಕಿ ಉಮ್ರಾನ್ ಮಲಿಕ್ ಕೂಡ ಒಬ್ಬರು. ತಮ್ಮ ಅತ್ಯಂತ ವೇಗದ ಬೌಲಿಂಗ್ ಹಾಗೂ ನಿಖರ ದಾಳಿಯಿಂದಾಗಿ ಉಮ್ರಾನ್ ಮಲಿಕ್ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ. ಸುನಿಲ್ ಗವಾಸ್ಕರ್ ಕೂಡ ಈ ವೇಗಿಯ ಮೇಲೆ ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದು ಈತ ಆಡುವುದನ್ನು ನೋಡಲು ಉತ್ಸಾಹದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಸುನಿಲ್ ಗವಾಸ್ಕರ್.

ಸಚಿನ್ ಬಳಿಕ ಈತನ ಆಟ ನೋಡಲು ಉತ್ಸಾಹದಿಂದ ಕಾಯುತ್ತಿದ್ದೇನೆ
ಇನ್ನು ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಉಮ್ರಾನ್ ಮಲಿಕ್ ಆಟ ನೋಡಲು ತಾನು ಎಷ್ಟು ಉತ್ಸಾಹದಿಂದ ಕಾಯುತ್ತಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾರೆ. "ನಾನು ಇದಕ್ಕೆ ಮೊದಲು ಸಚಿನ್ ತೆಂಡೂಲ್ಕರ್ ಆಟವನ್ನು ನೋಡಲು ಕಾತುರದಿಂದ ಕಾದಿದ್ದೆ. ಅದಾದ ಬಳಿಕ ನನಗೆ ಹಾಗೆ ಉತ್ಸುಕತೆಯಿಂದ ಕಾಯುವಂತೆ ಮಾಡಿದ ಆಟಗಾರ ಉಮ್ರಾನ್ ಮಲಿಕ್" ಎನ್ನುವ ಮೂಲಕ ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ದಾಖಲೆ ಮುರಿದ ಜೋ ರೂಟ್: ಸಚಿನ್ ದಾಖಲೆ ಟಾರ್ಗೆಟ್

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉಮ್ರಾನ್ ಆಡಬೇಕು
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲು ಅನುಭವಿಸಿದ್ದು ಭಾರತ ತಂಡದ ಬೌಲಿಂಗ್ ವಿಭಾಗ ನೀರಸ ಪ್ರದರ್ಶನ ನೀಡಿದೆ. ಹೀಗಾಗಿ ಉಮ್ರಾನ್ ಮಲಿಕ್ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಭುವನೇಶ್ವರ್ ಕುಮಾರ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಕೂಡ ವಿಕೆಟ್ ಟೇಕರ್‌ಗಳಾಗಿ ಕಾಣಿಸಿಕೊಂಡಿಲ್ಲ ಎಂದಿರುವ ಗವಾಸ್ಕರ್ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ. ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಉಮ್ರಾನ್ ಮಲಿಕ್‌ಗೆ ಅವಕಾಶ ದೊರೆಯಬಹುದು ಎಂದಿದ್ದಾರೆ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್.

ಅರ್ಷ್‌ದೀಪ್ ಬಗ್ಗೆಯೂ ಗವಾಸ್ಕರ್ ವಿಶ್ವಾಸ
"ಅರ್ಷ್‌ದೀಪ್ ಹಾಗೂ ಉಮ್ರಾನ್ ಮಲಿಕ್ ಇಬ್ಬರು ಕೂಡ ಈ ಸರಣಿಯಲ್ಲಿ ಆಡುವುದನ್ನು ನಾನು ನಿರೀಕ್ಷೆ ಮಾಡಿತ್ತಿದ್ದೇನೆ. ಅಕ್ಟೋಬರ್‌ನಲ್ಲಿ ನಡೆಯುವ ವಿಶ್ವಕಪ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಈ ಆಟಗಾರರಿಗೆ ಅವಕಾಶವನ್ನು ನೀಡಬೇಕಾಗುತ್ತದೆ. ಭಾರತ ತಂಡಕ್ಕೆ ವಿವಕೆಟ್ ಟೇಕಿಂಗ್ ಬೌಲರ್‌ಗಳ ಅಗತ್ಯವಿದ್ದು ಉಮ್ರಾನ್ ಮಲಿಕ್ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಅದು ನಮಗೆಲ್ಲರಿಗೂ ತಿಳಿದಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications