ಸನ್‌ರೈಸರ್ಸ್ ಹೈದ್ರಾಬಾದ್ ತಂಡದಿಂದ ಕೇನ್ ವಿಲಿಯಮ್ಸನ್ ಕೈ ಬಿಡಲು ಮುಂದಾದ SRH ಫ್ರಾಂಚೈಸಿ: ವರದಿ

ಇಂಡಿಯನ್ ಪ್ರೀಮಿಯ್ ಲೀಗ್ 16ನೇ ಸೀಸನ್‌ನ ಆಟಗಾರರು ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದ್ದು, ಕೊಚ್ಚಿಯಲ್ಲಿ ಇದೇ ವರ್ಷ ಡಿಸೆಂಬರ್ 23ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಉತ್ತಮ ಪ್ರದರ್ಶನ ನೀಡದ ಆಟಗಾರರನ್ನ ಕೈ ಬಿಡಲು 10 ಫ್ರಾಂಚೈಸಿಗಳು ಯೋಚಿಸುತ್ತಿವೆ.
ಅಂತೆಯೇ ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ರಿಲೀಸ್ ಮಾಡಲು ಯೋಜಿಸಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಕಳೆದ ಕೆಲವು ತಿಂಗಳಿನಲ್ಲಿ ತಗ್ಗಿರುವ ಅವರ ಪ್ರದರ್ಶನದ ಜೊತೆಗೆ ಟಿ20ಗೆ ಅಗತ್ಯವಿರುವ ಸ್ಟ್ರೈಕ್‌ರೇಟ್ ಕೂಡ ಕಡಿಮೆಯಾಗಿದೆ.
ಇತ್ತೀಚೆಗಷ್ಟೇ ನಡೆದ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡ ಕೇನ್ ವಿಲಿಯಮ್ಸನ್ 109.52ರ ಸ್ಟ್ರೈಕ್‌ರೇಟ್ ಬ್ಯಾಟ್ ಬೀಸುವ ಮೂಲಕ 42 ಎಸೆತಗಳಲ್ಲಿ 46 ರನ್‌ಗಳಿಸಿ ಔಟಾದರು. ವಿಲಿಯಮ್ಸನ್ ಈ ಇನ್ನಿಂಗ್ಸ್ ಕೂಡ ತಂಡದ ಕಡಿಮೆ ಮೊತ್ತಕ್ಕೆ ಕಾರಣವಾಯಿತು. ಅಲ್ಲದೆ ಕಿವೀಸ್ ಪಾಕ್ ವಿರುದ್ಧ ಮುಗ್ಗರಿಸಿತು.
ಹೀಗಾಗಿ ಕಳೆಗುಂದಿರುವ ಕೇನ್ ವಿಲಿಯಮ್ಸನ್‌ರನ್ನು ಮುಂದುವರಿಸಲು ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ಹೀಗಾಗಿ ಮುಂಬರುವ ಆಟಗಾರರ ಹರಾಜಿಗೂ ಮುನ್ನ ಕೇನ್ ವಿಲಿಯಮ್ಸನ್ ಸೇರಿದಂತೆ ಕೆಲ ಆಟಗಾರರನ್ನು ಕೈ ಬಿಡಲು ಮುಂದಾಗಿದೆ.
ಎಸ್‌ಆರ್‌ಎಚ್‌ನ ಕೇನ್ ವಿಲಿಯಮ್ಸನ್ ಅಷ್ಟೇ ಅಲ್ಲದೆ ವಿವಿಧ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡದ ಮಯಾಂಕ್ ಅಗರ್ವಾಲ್, ಒಡಿಯನ್ ಸ್ಮಿತ್, ಶಾರ್ದೂಲ್ ಠಾಕೂರ್, ಶಿವಂ ಮಾವಿ, ರೊಮಾರಿಯೊ ಶೆಫರ್ಡ್, ಜೇಸನ್ ಹೋಲ್ಡರ್, ಕೆಎಸ್ ಭರತ್ ತಮ್ಮ ಫ್ರಾಂಚೈಸಿಯಿಂದ ಹೊರಬೀಳಬಹುದಾದಂತಹ ಆಟಗಾರರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಆಲ್‌ರೌಂಡರ್ ರವೀಂದ್ರ ಜಡೇಜಾ ಹೊರಬೀಳಲಿದ್ದಾರೆ ಎಂದು ಸಾಕಷ್ಟು ಚರ್ಚೆಗಳು ನಡೆದವು. ಆದ್ರೆ ಸಿಎಸ್‌ಕೆ ಫ್ರಾಂಚೈಸಿ ಆಲ್‌ರೌಂಡರ್ ತಂಡದಲ್ಲೇ ಉಳಿಯಲಿದ್ದಾರೆ ಎಂದು ಖಚಿತಪಡಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications