ರೈನಾ ಶತಕ, ಬಾಂಗ್ಲಾ 'ಎ' ವಿರುದ್ಧ ಸರಣಿ ಜಯ
ಬೆಂಗಳೂರು, ಸೆ. 20: ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲು ಸಜ್ಜಾಗುತ್ತ್ತಿರುವ ಸುರೇಶ್ ರೈನಾ ಅವರು ಭಾರತ 'ಎ' ಪರ ಆಡಿ ಭರ್ಜರಿ ಶತಕ ಬಾರಿಸಿ ಬಾಂಗ್ಲಾದೇಶ 'ಎ' ವಿರುದ್ಧ ಸರಣಿ ಜಯ ಸಾಧಿಸಲು ನೆರವಾದರು. ಬಾಂಗ್ಲಾ ಎ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೈನಾ ಹಾಗೂ ಸಂಜು ಸಾಮ್ಸನ್ ಉತ್ತಮ ಆಟದ ನೆರವಿನಿಂದ ಭಾರತ 'ಎ' ತಂಡ ಗೆಲುವಿನ ನಗೆ ಬೀರಿತು.
ಸುರೇಶ್ ರೈನಾ 104 ರನ್ (94 ಎಸೆತ, 9X4, 1X6) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ 90 ರನ್( 99 ಎಸೆತ, 10X4, 1X6) ನೆರವಿನಿಂದ 50 ಓವರ್ ಗಳಲ್ಲಿ 297 ರನ್ ಗಳಿಸಿತು. ಮಳೆಯಿಂದ ಆಟಕ್ಕೆ ಆಗಾಗ ತೊಂದರೆಯಾಗುತ್ತಲ್ಲೇ ಇತ್ತು. ಅದರೆ, 32 ಓವರ್ ಗಳಲ್ಲಿ 141 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ ಗೆಲ್ಲುವ ಲಕ್ಷಣಗಳು ಡಕ್ ವರ್ತ್ ಲೂಯಿಸ್ ವ್ಯವಸ್ಥೆಯಿಂದಲೂ ಕಾಣಲಿಲ್ಲ.[ಭಾರತ 'ಎ' ತಂಡಕ್ಕೆ 'ಗುರು' ಬಲ ನೆಲಕಚ್ಚಿದ ಬಾಂಗ್ಲಾ]

ಕೊನೆಗೆ ರಾಹುಲ್ ದ್ರಾವಿಡ್ ಕೋಚ್ ಮಾಡಿರುವ ಉನ್ಮುಕ್ತ್ ಚಂದ್ ನಾಯಕತ್ವದ ಭಾರತ 'ಎ' ತಂಡ 75ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತು. ಭಾರತ 'ಎ' ಪರ ಎಡಗೈ ವೇಗಿ ಎಸ್ ಅರವಿಂದ್ ಹಾಗೂ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ತಲಾ 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. [ಪ್ರವಾಸಿ ಬಾಂಗ್ಲಾದೇಶ 'ಎ' ಸರಣಿ ವೇಳಾಪಟ್ಟಿ]
ಸ್ಕೋರ್ ಕಾರ್ಡ್
ಭಾರತ: 6 ವಿಕೆಟ್ಗೆ 297 (ರೈನಾ 104, ಸಂಜು ಸ್ಯಾಮ್ಸನ್ 90, ಉನ್ಮುಕ್ತ್ 41, ಶಫಿಯುಲ್ 56ಕ್ಕೆ 2)
ಬಾಂಗ್ಲಾದೇಶ: 32 ಓವರ್ಗಳಲ್ಲಿ 6 ವಿಕೆಟ್ಗೆ 141 (ಶಬ್ಬೀರ್ 41*, ಮಾಮಿನುಲ್ 37, ಅರವಿಂದ್ 14ಕ್ಕೆ 2, ಕುಲ್ದೀಪ್ 29ಕ್ಕೆ2), ಪಂದ್ಯಶ್ರೇಷ್ಠ: ಸುರೇಶ್ ರೈನಾ, ಸರಣಿಶ್ರೇಷ್ಠ: ನಾಸೀರ್ ಹುಸೇನ್. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications