ಸುರೇಶ್ ರೈನಾ ಬ್ಯಾಚುಲರ್ ಪಾರ್ಟಿ ಸಕತ್ ಬೊಂಬಾಟ್
ನವದೆಹಲಿ, ಏ.3: ಟೀಂ ಇಂಡಿಯಾದ ಪ್ರಮುಖ ಆಟಗಾರ ಸುರೇಶ್ ರೈನಾ ಅವರ ಬ್ಯಾಚುಲರ್ ಪಾರ್ಟಿ ಚಿತ್ರಗಳು ನಿಮಗಾಗಿ ಇಲ್ಲಿದೆ. ದೆಹಲಿಯ ಲೀಲಾ ಪ್ಯಾಲೇಸ್ ಹೊಟೆಲ್ ನಲ್ಲಿ ಸಂಜೆ ಪತ್ನಿ ಪ್ರಿಯಾಂಕಾ ಚೌಧುರಿ ಜೊತೆ ಸುರೇಶ್ ರೈನಾ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಕಾದಿದ್ದಾರೆ.
ಏ.3ರಂದು ಮದುವೆಗೂ ಮುನ್ನ ನಡೆದ ರೈನಾ ಅವರ ಬ್ಯಾಚುಲರ್ ಪಾರ್ಟಿಯಲ್ಲಿ ಅವರ ಆಪ್ತ ವಲಯ, ಕೆಲವು ಬಾಲಿವುಡ್ ಸ್ಟಾರ್ ಗಳು ಪಾಲ್ಗೊಂಡಿದ್ದರು, ಮದುವೆಗೆ ವಿವಿಧ ಕ್ಷೇತ್ರಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ. [ಸುರೇಶ್ ರೈನಾ ಮದ್ವೆಗೆ ಮೋದಿ ಗೈರು]
ಆಸ್ಟ್ರೇಲಿಯಾದ ಸುಧೀರ್ಘ ಪ್ರವಾಸದ ನಂತರ ಮನೆಗೆ ಮರಳಿದ ರೈನಾ ಅವರ ಬಾಳಲ್ಲಿ ವಸಂತ ಕಾಲ ಆರಂಭವಾಗಿದೆ. ಪಂಜಾಬಿ ಸಂಪ್ರದಾಯದಂತೆ ಬಾಲ್ಯದ ಗೆಳತಿ ಪ್ರಿಯಾಂಕಾ ಅವರನ್ನು ರೈನಾ ವರಿಸಿದ್ದಾರೆ.
ಧೋನಿ ಫ್ಯಾಮಿಲಿ ಆಕರ್ಷಣೆ: ಟೀಂ ಇಂಡಿಯಾ ನಾಯಕ ಧೋನಿ ಕುಟುಂಬ ಸಮೇತ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ. ರವೀಂದ್ರ ಜಡೇಜ ಹಾಗೂ ಇನ್ನಿತರರು ಆಗಮಿಸುವ ನಿರೀಕ್ಷೆ ಇದೆ. ನಟ ಅನುಪಮ್ ಖೇರ್ ಅವರು ಲೀಲಾ ಪ್ಯಾಲೇಸ್ ಗೆ ಹೋಗುವುದಾಗಿ ಟ್ವೀಟ್ ಮಾಡಿದ್ದಾರೆ.

ಸಾಂಪ್ರದಾಯಿಕ ಮದುವೆಗೆ ಮಾರು ಹೋದ ಅತಿಥಿಗಳು
ಸಾಂಪ್ರದಾಯಿಕ ಪಂಜಾಬಿ ಮದುವೆಗಳು ರೋಕಾ ಸಮಾರಂಭದ ಮೂಲಕ ಆರಂಭಗೊಳ್ಳುತ್ತವೆ. ವರನ ಮನೆ ಕಡೆಯವರು ವಧುವಿನ ಮನೆಗೆ ತೆರಳಿ ಉಡುಗೊರೆ, ವಸ್ತ್ರ, ಆಭರಣ, ಸಿಹಿ ತಿನಿಸುಗಳನ್ನು ನೀಡುತ್ತಾರೆ. ಎರಡು ಕಡೆಯವರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಾದ ಮೇಲೆ ಥಾಕಾ ಸಮಾರಂಭ ನಡೆಯಲಿದೆ. ವಿವಾಹಕ್ಕೆ ಮುನ್ನ ಪ್ರಮುಖ ಧಾರ್ಮಿಕ ವಿಧಿ ವಿಧಾನವಾಗಿದೆ. ರೋಕಾ, ಥಾಕಾ ನಂತರ ಕುರ್ಮಾಯಿ, ಛುನ್ನಿ ಸಮಾರಂಭಗಳು ನಡೆಯಲಿವೆ.
ರೈನಾ-ಪ್ರಿಯಾಂಕಾ ಮದುವೆಗೆ ಸಿಂಗಾರಗೊಂಡ ಪ್ಯಾಲೇಸ್
ರೈನಾ-ಪ್ರಿಯಾಂಕಾ ಮದುವೆಗಾಗಿ ಸಿಂಗಾರಗೊಂಡ ದೆಹಲಿಯ ಐಷಾರಾಮಿ ಹೋಟೆಲ್ ಲೀಲಾ ಪ್ಯಾಲೇಸ್
ಸೂಪರ್ ಜೋಡಿ ಎಂದು ಸಿಎಸ್ ಕೆ ಇಂದ ಶುಭ ಹಾರೈಕೆ
ಸೂಪರ್ ಜೋಡಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಶುಭ ಹಾರೈಕೆ
ಕಸಿನ್ಸ್ ಜೊತೆ ರೈನಾ ಬ್ಯಾಚುಲರ್ ಪಾರ್ಟಿ
ಕಸಿನ್ಸ್ ಜೊತೆ ರೈನಾ ಬ್ಯಾಚುಲರ್ ಪಾರ್ಟಿ
ಸುರೇಶ್ ರೈನಾ ಮದುವೆ ಕುರಿತ ವಿಡಿಯೋ ಸುದ್ದಿ
ಸುರೇಶ್ ರೈನಾ ಮದುವೆ ಕುರಿತ ವಿಡಿಯೋ ಸುದ್ದಿ
ಸಾಂಪ್ರಾದಾಯಿಕ ಲುಕ್ ರೈನಾ ಮಿಂಚಿಂಗ್
ಸಾಂಪ್ರಾದಾಯಿಕ ಲುಕ್ ರೈನಾ ಮಿಂಚಿಂಗ್.. ಟೀಂ ಧೋನಿ ಫ್ಯಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡದವರಿಂದ ಟ್ವೀಟ್ಸ್
ರೈನಾ ಆಪ್ತವಲಯದೊಡನೆ ಇರುವ ಚಿತ್ರಗಳು
ರೈನಾ ಆಪ್ತವಲಯದೊಡನೆ ಇರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಬ್ಯಾಚುಲರ್ ಪಾರ್ಟಿಗೆ ತೆರಳುವ ಮುನ್ನ
ಬ್ಯಾಚುಲರ್ ಪಾರ್ಟಿಗೆ ತೆರಳುವ ಮುನ್ನ.. ನಿಶ್ಚಿತಾರ್ಥದ ದಿರಿಸಿನಲ್ಲಿ ರೈನಾ ಕಾಣಿಸಿಕೊಂಡಿದ್ದು ಹೀಗೆ
ರೈನಾ ಬ್ಯಾಚುಲರ್ ಪಾರ್ಟಿ ಚಿತ್ರಗಳು
ರೈನಾ ಬ್ಯಾಚುಲರ್ ಪಾರ್ಟಿಯ ಇನ್ನಷ್ಟು ಚಿತ್ರಗಳು ಇಲ್ಲಿವೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications