ಕ್ರಿಕೆಟರ್ ಸುರೇಶ್ ರೈನಾ ಮದ್ವೆಗೆ ಮೋದಿ ಗೈರು?
ನವದೆಹಲಿ,ಏ.2: ಟೀಂ ಇಂಡಿಯಾದ ಪ್ರತಿಭಾವಂತ ಕ್ರಿಕೆಟರ್ ಸುರೇಶ್ ರೈನಾ ಅವರ ಮದುವೆ ಸಂಭ್ರಮದಲ್ಲಿ ದೆಹಲಿ ಮಿಂದೇಳುತ್ತಿದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಭೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈನಾ ಮದುವೆ ಆರತಕ್ಷತೆಗೆ ಗೈರು ಹಾಜರಾಗುವ ಸಾಧ್ಯತೆ ಹೆಚ್ಚಿದೆ.
ಪಂಜಾಬಿ ಸಂಪ್ರದಾಯದಂತೆ ವಧುವಿನ ಮನೆಗೆ ರೈನಾ ಅವರ ಪೋಷಕರು ತೆರಳಿ ರೋಕಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಐಸಿಸಿ ವಿಶ್ವಕಪ್ 2015 ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕಾಗಿ ರೈನಾ ತಯಾರಿ ನಡೆಸಿದ್ದರು. ಈಗ ಟೀಂ ಇಂಡಿಯಾದ ಪ್ರಮುಖ ಆಟಗಾರರು ರೈನಾ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಲು ಕಾತುರರಾಗಿದ್ದಾರೆ. [ರೈನಾ ಮದುವೆ ಪೂರ್ವ ತಯಾರಿ ಚಿತ್ರಗಳು]
ಭಾರತದ ಪ್ರಮುಖ ಆಟಗಾರ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಏ.3ರಂದು ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧುರಿ ಕೈ ಹಿಡಿಯಲಿದ್ದಾರೆ.
ಆಸ್ಟ್ರೇಲಿಯಾದ ಸುಧೀರ್ಘ ಪ್ರವಾಸದ ನಂತರ ಮನೆಗೆ ಮರಳಿದ ರೈನಾ ಅವರ ಬಾಳಲ್ಲಿ ವಸಂತ ಕಾಲ ಆರಂಭವಾಗಿದೆ... ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ರೈನಾ ಏ.8ರಿಂದ ಐಪಿಎಲ್ 8ರಲ್ಲಿ ಬ್ಯಾಟ್ ಬೀಸಲು ಸಜ್ಜಾಗಬೇಕಿದೆ.

ಮೋದಿ ಸೇರಿ ಅನೇಕ ಗಣ್ಯರಿಗೆ ಆಹ್ವಾನ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರಿಗೆ ಸುರೇಶ್ ರೈನಾ ಮದುವೆ ಆಮಂತ್ರಣ ನೀಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಅವರು ಮದುವೆ ದಿನ (ಏ.3) ಸಂಜೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿದ್ದು ಮಧ್ಯಾಹ್ನ 3.45ರ ತನಕ ಬೆಂಗಳೂರಿನಲ್ಲೇ ಇರಲಿದ್ದಾರೆ. ಹೀಗಾಗಿ ಮೋದಿ ಅವರು ರೈನಾ ಮದ್ವೆಗೆ ಗೈರು ಹಾಜರಾಗುತ್ತಾರೆ.

ರೋಕಾ ಸಮಾರಂಭದೊಂದಿಗೆ ಮದ್ವೆ ಆರಂಭ
ಸಾಂಪ್ರದಾಯಿಕ ಪಂಜಾಬಿ ಮದುವೆಗಳು ರೋಕಾ ಸಮಾರಂಭದ ಮೂಲಕ ಆರಂಭಗೊಳ್ಳುತ್ತವೆ. ವರನ ಮನೆ ಕಡೆಯವರು ವಧುವಿನ ಮನೆಗೆ ತೆರಳಿ ಉಡುಗೊರೆ, ವಸ್ತ್ರ, ಆಭರಣ, ಸಿಹಿ ತಿನಿಸುಗಳನ್ನು ನೀಡುತ್ತಾರೆ. ಎರಡು ಕಡೆಯವರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಾದ ಮೇಲೆ ಥಾಕಾ ಸಮಾರಂಭ ನಡೆಯಲಿದೆ. ವಿವಾಹಕ್ಕೆ ಮುನ್ನ ಪ್ರಮುಖ ಧಾರ್ಮಿಕ ವಿಧಿ ವಿಧಾನವಾಗಿದೆ.

ಪಂಜಾಬಿ ಸಂಪ್ರದಾಯದಂತೆ ಮದುವೆ
ಪಂಜಾಬಿ ಸಂಪ್ರದಾಯದಂತೆ ಮದುವೆ ರೈನಾ- ಪ್ರಿಯಾಂಕಾ ಮದುವೆ ನಡೆಯಲಿದೆ. ರೋಕಾ, ಥಾಕಾ ನಂತರ ಕುರ್ಮಾಯಿ, ಛುನ್ನಿ ಸಮಾರಂಭಗಳು ನಡೆಯಲಿವೆ.

ಗೆಳೆತನ, ಪ್ರೇಮ ಈಗ ವಿವಾಹ ಬಂಧನ
ರೈನಾ ಅಪ್ಪ ಹಾಗೂ ಪ್ರಿಯಾಂಕಾ ಅಪ್ಪ ಕೂಡಾ ಮುರಾದ್ನಗರ್ ಆರ್ಡನನ್ಸ್ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಪ್ರಿಯಾಂಕಾ ಹಾಗೂ ರೈನಾ ನಡುವೆ ಗೆಳೆತನ ಬೆಳೆದಿತ್ತು. ವೃತ್ತಿಯಿಂದ ಬ್ಯಾಂಕರ್ ಆಗಿರುವ ಪ್ರಿಯಾಂಕಾ ಅವರು ನೆದರ್ಲೆಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications