Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಕೌಟ್ ವೀಡಿಯೋ ಹಂಚಿಕೊಂಡ ಸುರೇಶ್ ರೈನಾ: ಹಳದಿ ಬ್ಯಾಂಡ್ ಧರಿಸಿ ನೀಡಿದ್ರಾ ಸಿಗ್ನಲ್?

Suresh Raina Posts Workout Video With Wearing Yellow Band

ಇಂಡಿಯನ್ ಪ್ರೀಮಿಯರ್ ಲೀಗ್ 2020ರಲ್ಲಿ ತಮ್ಮ ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ದೂರವಾಗಿದ್ದ ಸುರೇಶ್ ರೈನಾ ಮತ್ತೆ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ಸಿಎಸ್‌ಕೆ ತಂಡವು ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ ರೈನಾ ಮೊದಲ ಬಾರಿಗೆ ತಮ್ಮ ವರ್ಕೌಟ್ ವೀಡಿಯೋ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕ್ರಿಕೆಟಿಗ ಸುರೇಶ್ ರೈನಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವರ್ಕೌಟ್ ವಿಡಿಯೋಗಳು ಹಾಗೂ ತಮ್ಮ ಕುಟುಂಬದ ಜೊತೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ವೈಯಕ್ತಿಕ ವಿಚಾರಗಳ ಆಘಾತದಿಂದ ಹೊರಬಂದ ಬಳಿಕ ರೈನಾ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ.

View this post on Instagram

Whatever it takes! #fitness #fitnessjourney #keep

A post shared by Suresh Raina (@sureshraina3) on

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್‌ನಿಂದ ವೀಡಿಯೋ ಪೋಸ್ಟ್‌ ಮಾಡಿರುವ ಸುರೇಶ್ ರೈನಾ ತಮ್ಮ ವರ್ಕೌಟ್ ದಿನಗಳನ್ನು ಪುನರ್ ಪ್ರಾರಂಭಿಸಿರುವುದಾಗಿ ತೋರಿಬರುತ್ತಿದೆ. ವಿಶೇಷ ಅಂದ್ರೆ ರೈನಾ ವರ್ಕೌಟ್ ವೇಳೆ ಬಲಗೈಗೆ ಹಳದಿ ಬಣ್ಣದ ಬ್ಯಾಂಡ್ ಧರಿಸಿದ್ದು ನೋಡುಗರನ್ನ ಗಮನಸೆಳೆದಿದ್ದಾರೆ. ಜೊತೆಗೆ ಮುಂದಿನ ಐಪಿಎಲ್ ಸೀಸನ್‌ನಲ್ಲಿ ಮತ್ತೆ ಸಿಎಸ್‌ಕೆ ಪರವಾಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದಂತಿದೆ.

ಇನ್ನು ಸುರೇಶ್ ರೈನಾರ ಈ ಹೊಸ ವೀಡಿಯೋಗೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

Story first published: Friday, November 6, 2020, 17:32 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+