ಈ ಸ್ಫೋಟಕ ಆಟಗಾರ ಭಾರತ ಟಿ20 ತಂಡಕ್ಕೆ ನಾಯಕನಾಗಲಿ ಎಂದ ಮಾಜಿ ಮುಂಬೈ ಆಟಗಾರ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬೀಳುವ ಮೂಲಕ ಭಾರತ ತಂಡ ನಿರಾಸೆ ಅನುಭವಿಸಿತು. 2024ರ ಟಿ20 ವಿಶ್ವಕಪ್‌ಗೆ ಮುನ್ನ ಬಲಿಷ್ಠ ತಂಡವನ್ನು ಸಜ್ಜುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಈಗಿನಿಂದಲೇ ಹೊಸ ನಾಯಕನನ್ನು ಹುಡುಕುತ್ತಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ನಾಯಕತ್ವದ ವಿಚಾರಕ್ಕೆ ಬಂದಾಗ ಟೀಂ ಇಂಡಿಯಾದಲ್ಲಿ ಹಲವು ಆಯ್ಕೆಗಳನ್ನು ನೋಡಬಹುದು. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಎಲ್ಲರೂ ಐಪಿಎಲ್‌ನಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿದ್ದಾರೆ.
ಆದರೆ, ಟೀಂ ಇಂಡಿಯಾದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ನಾಯಕನಾಗಿ ಆಯ್ಕೆಯಾಗುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರ ಕ್ಲಬ್ ಕೋಚ್ ವಿನಾಯಕ್ ಮಾನೆ ಅಭಿಪ್ರಾಯಪಟ್ಟಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಸದ್ಯ ನಂಬರ್ 1 ರ್‍ಯಾಂಕಿಂಗ್ ಆಟಗಾರ. ಅವರ ಆಟದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಯಾವುದೇ ಭಯವಿಲ್ಲದೆ ಮೊದಲ ಎಸೆತದಿಂದಲೇ ಬೌಂಡರಿ ಹುಡುಕುವ ಸೂರ್ಯಕುಮಾರ್ ಯಾದವ್ ಟಿ20 ಸ್ಪೆಷಲಿಸ್ಟ್ ಆಟಗಾರ.

ಆತನಿಗೆ ನಾಯಕನಾಗುವ ಅರ್ಹತೆ ಇದೆ
ಸೂರ್ಯಕುಮಾರ್ ಯಾದವ್‌ಗೆ ಒತ್ತಡವನ್ನು ನಿಭಾಯಿಸುವ ಮತ್ತು ಆಟದ ತಂತ್ರಗಳನ್ನು ರೂಪಿಸುವ ಸಾಮರ್ಥ್ಯ ಇದೆ ಎಂದು ವಿನಾಯಕ ಮಾನೆ ಅಭಿಪ್ರಾಯಪಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್‌ಗೆ 10 ವರ್ಷಗಳಿಗಿಂತ ಹೆಚ್ಚಿನ ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಇದೆ ಎಂದು ಹೇಳಿದರು.
ಆತ ಕಠಿಣ ಪರಿಶ್ರಮದ ಮೂಲಕ ಈ ಹಂತಕ್ಕೆ ಬಂದಿದ್ದಾನೆ. ಸವಾಲುಗಳಿಂದ ಆತ ಹಿಂದೆ ಸರಿದಿಲ್ಲ. ಆತನ ಅನುಭವ, ಸವಾಲನ್ನು ಸ್ವೀಕರಿಸುವ ಮನಸ್ಥಿತಿ ಉತ್ತಮ ನಾಯಕನಾಗಿಸಬಹುದು ಎಂದು ಹೇಳಿದ್ದಾರೆ.
ಶೋಯೆಬ್ ಅಖ್ತರ್, ಮೊಹಮ್ಮದ್ ಶಮಿ ಟ್ವೀಟ್ ಫೈಟ್: ಕಚ್ಚಾಟ ಮೊದಲು ನಿಲ್ಲಿಸಿ ಎಂದ ವಾಸಿಂ ಅಕ್ರಂ!

ಸದ್ಯ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್
ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಸೂರ್ಯಕುಮಾರ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಅಂತಿಮವಾಗಿ, 2021ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾದರು.
2021ರ ಮಾರ್ಚ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯ ಕ್ರಿಕೆಟ್ ಲೋಕದಲ್ಲಿ ಸದ್ಯ ಪ್ರಕಾಶಮಾನವಾಗಿ ಬೆಳಗುತ್ತಿದ್ದಾರೆ. ತಮ್ಮ ಮೊದಲನೇ ಪಂದ್ಯದಲ್ಲಿ 57 ರನ್ ಗಳಿಸಿದರು. 2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಶತಕ ದಾಖಲಿಸಿದರು.
ಒಂದೂವರೆ ವರ್ಷದಲ್ಲೇ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 59.75 ಸರಾಸರಿಯಲ್ಲಿ 189.68 ಸ್ಟ್ರೈಕ್‌ರೇಟ್‌ನಲ್ಲಿ 239 ರನ್ ಗಳಿಸಿದ್ದಾರೆ.

ಸೂರ್ಯಕುಮಾರ್ ಕೋಚ್ ವಿನಾಯಕ್ ಮಾನೆ
ಭಾರತ್ ಪೆಟ್ರೋಲಿಯಮ್ ಕಾರ್ಪೊರೇಟ್ ಟೂರ್ನಿಗಳಲ್ಲಿ ಸೂರ್ಯಕುಮಾರ್ ಯಾದವ್ ವಿನಾಯಕ್ ಮಾನೆ ನಾಯಕತ್ವದ ತಂಡದಲ್ಲಿ ಆಡಿದ್ದಾರೆ. ಸೂರ್ಯಕುಮಾರ್ ಯಾದವ್ ಕ್ಲಬ್ ಕೋಚ್ ಆಗಿ ವಿನಾಯಕ್ ಮಾನೆ ಕೆಲಸ ಮಾಡುತ್ತಿದ್ದಾರೆ.
"ನಾನು ಹಲವು ವರ್ಷಗಳಿಂದ ಸೂರ್ಯಕುಮಾರ್ ಯಾದವ್‌ರನ್ನು ನೋಡಿದ್ದೇನೆ. ಆತ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿ ಆತ ನಾಯಕತ್ವ ನಿಭಾಯಿಸುತ್ತಾನೆ ಎಂದು ಭಾವಿಸುತ್ತೇನೆ. ಆದರೂ, ಇದು ಆಯ್ಕೆದಾರರ ತೀರ್ಮಾನಕ್ಕೆ ಬಿಟ್ಟದ್ದು" ಎಂದು ಹೇಳಿದ್ದಾರೆ.

ಮುಂಬೈ ತಂಡಕ್ಕೆ ನಾಯಕನಾಗಿದ್ದ ಸೂರ್ಯಕುಮಾರ್
2014-15ರಲ್ಲಿ ರಣಜಿ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕರಾಗಿದ್ದರು. ಆದರೆ, ತಮ್ಮ ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಕೊಡಲು, ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿದಿದ್ದರು. 2019-20ರಲ್ಲಿ ಮತ್ತೆ ನಾಯಕನಾಗಿ ಆಯ್ಕೆಯಾದರು. 2020-21ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡಕ್ಕೆ ನಾಯಕನಾಗಿದ್ದರು.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರ್ಶನ ಇಂದು ಜಗತ್ತಿಗೆ ಮತ್ತೊಬ್ಬ 360 ಡಿಗ್ರಿ ಆಟಗಾರನನ್ನು ನೋಡಲು ಸಾಧ್ಯವಾಗಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications