ಶೋಯೆಬ್ ಅಖ್ತರ್, ಮೊಹಮ್ಮದ್ ಶಮಿ ಟ್ವೀಟ್ ಫೈಟ್: ಕಚ್ಚಾಟ ಮೊದಲು ನಿಲ್ಲಿಸಿ ಎಂದ ವಾಸಿಂ ಅಕ್ರಂ!

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಾಗೂ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಟ್ವೀಟ್ ಕಿತ್ತಾಟ ಕುರಿತಾಗಿ ಪಾಕಿಸ್ತಾನದ ಲೆಜೆಂಡರಿ ಬೌಲರ್ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ವಿನಂತಿಸಿದ್ದಾರೆ.

ನವೆಂಬರ್ 13ರಂದು ಎಂಸಿಜಿಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಸೋಲಿನ ಬಳಿಕ ಪಾಕಿಸ್ತಾನ ಭಾರೀ ಮುಖಭಂಗ ಎದುರಿಸಿತು. ಟೀಂ ಇಂಡಿಯಾ ಅಭಿಮಾನಿಗಳು ಮತ್ತು ಪಾಕಿಸ್ತಾನ ಕ್ರಿಕೆಟ್ ನಡುವೆ ಟ್ವೀಟ್‌ನಲ್ಲಿ ಮೀಮ್ಸ್‌ ತಿಕ್ಕಾಟ ನಡೆಯಿತು. ಈ ವೇಳೆಯಲ್ಲಿ ಭಾರತದ ಬೌಲರ್ ಮೊಹಮ್ಮದ್ ಶಮಿ ಕೂಡ ಶೋಯೆಬ್ ಅಖ್ತರ್ ಟ್ವೀಟ್‌ಗೆ ಉತ್ತರಿಸುವ ಮೂಲಕ ಕಿಡಿ ಹೊತ್ತಿಸಿದರು.

ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳಿಗೆ ವಾಸಿಂ ಅಕ್ರಂ ಕಳಕಳಿಯ ಮನವಿ

ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳಿಗೆ ವಾಸಿಂ ಅಕ್ರಂ ಕಳಕಳಿಯ ಮನವಿ

ಪಾಕ್ ಮಾಜಿ ಬೌಲರ್ ವಾಸಿಂ ಅಕ್ರಂ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೆ ಮನವಿ ಮಾಡಿದ್ದು, ಐಸಿಸಿಯಂತಹ ದೊಡ್ಡ ಟೂರ್ನಿಗಳಲ್ಲಿ ಸೋತಾಗ ಉಭಯ ರಾಷ್ಟ್ರಗಳ ಕ್ರಿಕೆಟ್ ಪ್ರೇಮಿಗಳು ಗಾಯಕ್ಕೆ ಉಪ್ಪು ಸವರುವುದರ ಬದಲು ತಟಸ್ಥವಾಗಿರಿ ಎಂದು ಮನವಿ ಮಾಡಿದ್ದಾರೆ.

''ನಾವು ಆದಷ್ಟು ತಟಸ್ಥವಾಗಿರಲು ಬಯಸುತ್ತೇವೆ. ಭಾರತೀಯರು ಸಾಕಷ್ಟು ದೇಶಭಕ್ತರು ಎಂಬುದು ತಿಳಿದಿದೆ. ನಾವು ಕೂಡ ನಮ್ಮ ದೇಶದ ಕುರಿತು ಅಭಿಮಾನವನ್ನು ಹೊಂದಿದ್ದೇವೆ. ಆದ್ರೆ ಇದ್ರ ನಡುವೆ ಸುಟ್ಟ ಮೇಲೆ ಎಣ್ಣೆ ಸುರಿಯುವುದು, ಟ್ವೀಟ್ ಮೇಲೆ ಟ್ವೀಟ್ ಮಾಡುವುದು ಬೇಡ, ತಕ್ಷಣವೇ ಅದನ್ನು ಮಾಡುವುದನ್ನ ನಿಲ್ಲಿಸಿ'' ಎಂದು ವಾಸಿಂ ಅಕ್ರಂ ಎ ಸ್ಪೋರ್ಟ್ಸ್‌ನಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ಬಳಸಿದ ಈ ಸೂತ್ರವನ್ನು ಭಾರತ ತಂಡ ಅಳವಡಿಸಿಕೊಳ್ಳಬೇಕು; ಅನಿಲ್ ಕುಂಬ್ಳೆ ಒತ್ತಾಯ

ಲೈಕ್ಸ್, ಕ್ಲಿಕ್ಸ್‌ಗಳಿಗಾಗಿ ಈ ರೀತಿಯ ಕಾಮೆಂಟ್ ಮಾಡದಿರಿ: ಮಿಸ್ಬಾ ಉಲ್ ಹಕ್

ಲೈಕ್ಸ್, ಕ್ಲಿಕ್ಸ್‌ಗಳಿಗಾಗಿ ಈ ರೀತಿಯ ಕಾಮೆಂಟ್ ಮಾಡದಿರಿ: ಮಿಸ್ಬಾ ಉಲ್ ಹಕ್

ಪಾಕಿಸ್ತಾನದ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್ ಕೂಡ 'ಎ ಸ್ಪೋರ್ಟ್ಸ್‌' ಪ್ಯಾನೆಲ್‌ನಲ್ಲಿ ಭಾಗಿಯಾಗಿದ್ದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 1992ರ ವಿಶ್ವಕಪ್ ಗೆಲುವಿನ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪರಸ್ಪರ ಗೌರವ ಹೊಂದಿದ್ದಾರೆ. ಆದ್ರೆ ಲೈಕ್ಸ್ ಮತ್ತು ಕಾಮೆಂಟ್ಸ್‌ಗಳಿಗಾಗಿ ವಿರೋಧಿ ಕಾಮೆಂಟ್‌ ಮಾಡದಿರಿ ಎಂದಿದ್ದಾರೆ.

''ಲೈಕ್ಸ್ ಪಡೆಯುವ ಸಲುವಾಗಿ ನೀವು ಆ ರೀತಿಯಾಗಿ ಪೋಸ್ಟ್ ಮಾಡಬಾರದು. ಕ್ರಿಕೆಟರ್‌ಗಳು, ಭಾರತದವರೇ ಆಗಿರಲಿ ಅಥವಾ ಪಾಕಿಸ್ತಾನ ಅಥವಾ ಮತ್ಯಾವುದೇ ರಾಷ್ಟ್ರವೇ ಆಗಿರಲಿ ನಾವೆಲ್ಲರೂ ಒಂದೇ ಕುಟುಂಬ. ನಾವು ಒಬ್ಬರನ್ನೊಬ್ಬರನ್ನು ಗೌರವಿಸಬೇಕು. ಪರಸ್ಪರ ಅಭಿಪ್ರಾಯಗಳನ್ನು ಗೌರವಿಸಬೇಕು. ನಾವು ಕೆಲವೊಂದು ಜವಾಬ್ದಾರಿಯನ್ನು ಹೊಂದಿದ್ದೇವೆ'' ಎಂದು ಮಿಸ್ಬಾ ಹೇಳಿದ್ದಾರೆ.

IPL 2023: ಮಿನಿ ಹರಾಜಿಗೆ ಬಂದ ಬೆನ್ ಸ್ಟೋಕ್ಸ್ : ಈ ಮೊದಲು ಹರಾಜಾಗಿದ್ದು ಎಷ್ಟು ಕೋಟಿಗೆ ಗೊತ್ತಾ?

ಪಾಕಿಸ್ತಾನ ಸೋತಿದ್ದಕ್ಕೆ ಮಾಡಿದ ಕರ್ಮ ಎಂದು ಟ್ವೀಟ್ ಮಾಡಿದ್ದ ಶಮಿ!

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಪಾಕಿಸ್ತಾನ ತಂಡ ಸೋತ ಬಳಿಕ, ಮಾಜಿ ಆಟಗಾರ ಶೋಯೆಬ್ ಅಖ್ತರ್‌ ಬ್ರೋಕನ್ ಹಾರ್ಟ್ ಎಮೋಜಿಯನ್ನು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರವಾಗಿ ಟ್ವೀಟ್ ಮಾಡಿದ್ದ ಭಾರತದ ಬೌಲರ್ ಮೊಹಮ್ಮದ್ ಶಮಿ, 'ಹಲೋ ಬ್ರದರ್, ಇದೆಲ್ಲವನ್ನು ಕರ್ಮ ಎನ್ನಲಾಗುತ್ತದೆ'' ಎಂದು ಟ್ವೀಟ್ ಜೊತೆಗೆ ಅಖ್ತರ್ ರೀತಿಯಲ್ಲೇ ಬ್ರೋಕನ್ ಹಾರ್ಟ್ ಎಮೋಜಿಯನ್ನು ಪೋಸ್ಟ್ ಮಾಡಿದ್ದರು.

ಇದಕ್ಕೆ ಉತ್ತರ ಕೊಡಲು ಶೋಯೆಬ್ ಅಖ್ತರ್ ಕೂಡ ಹಿಂದೆ ಸರಿಯಲಿಲ್ಲ. ಅನುಭವಿ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಪಾಕಿಸ್ತಾನ ಬೌಲರ್‌ಗಳನ್ನು ಹೊಗಳಿರುವುದರ ಕುರಿತಾಗಿ ಮತ್ತು ಸಣ್ಣ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳಲು ಪ್ರಯತ್ನಿಸಿದ ರೀತಿಯ ಕುರಿತಾಗಿ ಹೇಳಿರುವ ಮಾತುಗಳನ್ನು ಟ್ವೀಟ್ ಮಾಡಿದರು. ಜೊತೆಗೆ ಶೀರ್ಷಿಕೆಯಲ್ಲಿ '' ಇದನ್ನು ನಾವು ಸಂವೇದನಾಶೀಲ ಟ್ವೀಟ್'' ಎಂದು ಕರೆಯುತ್ತೇವೆ ಎಂದು ಶಮಿಗೆ ಟಾಂಗ್ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 15, 2022, 12:31 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X