ಬಿಸಿಸಿಐ ನಿರ್ಧಾರಕ್ಕೆ ಸೂರ್ಯಕುಮಾರ್ ಯಾದವ್ ಮೊದಲ ರಿಯಾಕ್ಷನ್
ಭಾರತದಲ್ಲಿ ಈ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿ, ಚಾಂಪಿಯನ್ ಪಟ್ಟವನ್ನು ತೊಡಿಸಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಮುಂದಿನ ಟಿ20 ಸರಣಿಯಿಂದ ಕೈ ಬಿಡಲಾಗಿದೆ. ಇವರು ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು ನಾಯಕತ್ವ ಹಾಗೂ ತಂಡದಲ್ಲಿ ಸ್ಥಾನವನ್ನು ಸಹ ಕಳೆದುಕೊಂಡಿದ್ದಾರೆ. ಇವರು ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಈ ಮೊದಲೇ ಸುದ್ದಿಗಳು ಇದ್ದವು. ಆದರೆ ತಂಡದಿಂದ ಕೈ ಬಿಡಲಾಗುತ್ತದೆ ಎಂದು ಯಾರು ಊಹಿಸಿರಲಿಲ್ಲ. ಬಿಸಿಸಿಐ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸುಮಾರು ಮೂರು ವರ್ಷಗಳಿಂದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಶ್ರೇಯಸ್ ಅಯ್ಯರ್ ಅವರನ್ನು ಈ ಸ್ವರೂಪದ ಹೊಸ ನಾಯಕನನ್ನಾಗಿ ನೇಮಿಸಿದೆ. ನಾಯಕನಾಗಿ ಭರ್ಜರಿ ದಾಖಲೆಯನ್ನು ಹೊಂದಿದ್ದ ಸೂರ್ಯಕುಮಾರ್ ಯಾದವ್, ಬಿಸಿಸಿಐ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೊದಲ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ 2024 ರ ಟಿ20 ವಿಶ್ವಕಪ್ ನಂತರ ಟಿ20 ತಂಡದ ಚುಕ್ಕಾಣಿಯನ್ನು ಹಿಡಿದರು. ಅಲ್ಲಿಂದ ಈ ವರೆಗೆ ಟೀಮ್ ಇಂಡಿಯಾ ಒಂದೇ ಒಂದು ದ್ವಿಪಕ್ಷೀಯ ಸರಣಿ ಸೋತಿಲ್ಲ. ಇದಲ್ಲದೆ, ಭಾರತ ತಂಡವು ಏಷ್ಯಾ ಕಪ್ ಮತ್ತು 2026 ರ ಟಿ20 ವಿಶ್ವಕಪ್ ಅನ್ನು ಸಹ ಗೆದ್ದಿತು. ಆದರೆ ಇವರ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿತ್ತು. ಸೂರ್ಯಕುಮಾರ್ ಯಾದವ್ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರತಿಭಾನ್ವಿತ ತಂಡಕ್ಕೆ ಮುಂದಿನ ಸವಾಲುಗಳಿಗೆ ಶುಭ ಹಾರೈಸಿದರು. ಸೂರ್ಯ ತಮ್ಮ ಪೋಸ್ಟ್‌ಗೆ ಭಾರತೀಯ ಧ್ವಜದ ಎಮೋಜಿಯನ್ನು ಸಹ ಸೇರಿಸಿದ್ದಾರೆ.
ವೈಭವ್‌ಗೂ ಸಂದೇಶ
ಸೂರ್ಯಕುಮಾರ್ ಯಾದವ್ ಸಾಮಾಜಿಕ ತಾಣದಲ್ಲಿ ವೈಭವ್ ಸೂರ್ಯವಂಶಿ ಬಗ್ಗೆ ಒಂದು ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ನೀವು ಈ ಅವಕಾಶವನ್ನು ಗಳಿಸಿದ್ದೀರಿ ಮತ್ತು ಎಂತಹ ಅದ್ಭುತ ರೀತಿಯಲ್ಲಿ ಮತ್ತು ನಿಮ್ಮ ಮುಂಬರುವ ಪ್ರಯಾಣಕ್ಕಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಬರೆದಿದ್ದಾರೆ. ವೈಭವ್ ಸೂರ್ಯವಂಶಿ 2026 ರ ಐಪಿಎಲ್‌ನಲ್ಲಿ ಒಟ್ಟು 776 ರನ್‌ಗಳನ್ನು ಗಳಿಸಿದ್ದು, 72 ಸಿಕ್ಸರ್‌ಗಳನ್ನು ಸಹ ಸಿಡಿಸಿದ್ದಾರೆ. ಇವರು ಈಗ ಭಾರತ ಎ ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಲ್ಲಿ ತ್ರಿಕೋನ ಸರಣಿಯನ್ನು ಆಡಲು ಸಜ್ಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications