ICC T20 Ranking: ಅಗ್ರಸ್ಥಾನ ಬಲಪಡಿಸಿಕೊಂಡ ಸೂರ್ಯಕುಮಾರ್; ಅತ್ಯುತ್ತಮ ಸ್ಥಾನಕ್ಕೇರಿದ ಅರ್ಶ್ದೀಪ್

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಎತ್ತಿಹಿಡಿಯಲು ಕಠಿಣ ಹೋರಾಟಕ್ಕೆ ಸಿದ್ಧವಾಗಿದೆ.
ಭಾರತ ತಂಡವು 2013ರಿಂದ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ ಮತ್ತು ಇದೀಗ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ಎದುರು ನೋಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮುಂಚಿತವಾಗಿ, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ವೇಗಿ ಅರ್ಶ್‌ದೀಪ್ ಸಿಂಗ್ ಸಿಹಿ ಸುದ್ದಿ ಬಂದಿದೆ.
ಸೂರ್ಯಕುಮಾರ್ ಯಾದವ್ ಅವರು ಐಸಿಸಿ ಟಿ20 ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡರು. ಇದೇ ವೇಳೆ ಭಾರತದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಟಿ20 ರ್‍ಯಾಂಕಿಂಗ್ ಬೌಲರ್‌ಗಳಲ್ಲಿ ವೃತ್ತಿಜೀವನದ ಅತ್ಯುತ್ತಮ 23ನೇ ಸ್ಥಾನಕ್ಕೆ ಏರಿದ್ದಾರೆ.

ಸೂರ್ಯಕುಮಾರ್ ಯಾದವ್ ಟಿ20 ಸ್ವರೂಪದಲ್ಲಿ ನಂ.1 ಬ್ಯಾಟರ್
ಬ್ಯಾಟಿಂಗ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ ಐದು ಪಂದ್ಯಗಳಿಂದ 225 ರನ್ ಗಳಿಸಿದ್ದಾರೆ. ಅವರು 869 ಅಂಕಗಳ ವೃತ್ತಿಜೀವನದ ಅತ್ಯುನ್ನತ ಪಾಯಿಂಟ್‌ಗಳನ್ನು ಸಾಧಿಸಿದರು, ಟಿ20 ಸ್ವರೂಪದಲ್ಲಿ ನಂಬರ್ 1 ಬ್ಯಾಟರ್ ಆಗಿ ಮುಂದುವರೆದಿದ್ದಾರೆ.
ಭಾರತದ ಕೊನೆಯ ಗುಂಪಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು 25 ಎಸೆತಗಳಲ್ಲಿ 61 ರನ್ ಸಿಡಿಸುವ ಮೂಲಕ ಈ ವಾರದ ರ್‍ಯಾಂಕಿಂಗ್‌ಗಳ ನವೀಕರಣದಲ್ಲಿ ಆರು ಅಂಕಗಳನ್ನು ಸೇರಿಸಿದರು ಮತ್ತು ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ಗಿಂತ 39 ಅಂಕಗಳನ್ನು ಹೆಚ್ಚು ಗಳಿಸಿದರು.

ಐದು ಸ್ಥಾನಗಳು ಮೇಲೇರಿದ ವಿರಾಟ್ ಕೊಹ್ಲಿ
ಬ್ಯಾಟಿಂಗ್ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ, ಸೂರ್ಯಕುಮಾರ್ ಯಾದವ್‌ಗಿಂತ 90 ಪಾಯಿಂಟ್‌ಗಳ ಹಿನ್ನಡೆಯಲ್ಲಿದ್ದರೆ, ಪಾಕಿಸ್ತಾನದ ನಾಯಕ ಬಾಬರ್ ಅಜಂ ಕಿವೀಸ್ ಆಟಗಾರನಿಗಿಂತ ಇನ್ನೂ ಏಳು ಅಂಕಗಳ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧದ ಭಾರತದ ಉಪನಾಯಕ ಕೆಎಲ್ ರಾಹುಲ್ ಅರ್ಧಶತಕ ಗಳಿಸುವ ಮೂಲಕ ಐದು ಸ್ಥಾನಗಳು ಮೇಲೇರಿ 16ನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಕ್ರಮವಾಗಿ 11 ಮತ್ತು 18ನೇ ಸ್ಥಾನದಲ್ಲಿದ್ದಾರೆ.

ಅರ್ಶ್‌ದೀಪ್ ಸಿಂಗ್ 23ನೇ ಸ್ಥಾನಕ್ಕೆ ಏರಿದ್ದಾರೆ
ಇನ್ನು ಬೌಲಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ, ತನ್ನ ಅತ್ಯುತ್ತಮ ಪ್ರಗತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ಮಿಂಚುತ್ತಿರುವ ಅರ್ಶ್‌ದೀಪ್ ಸಿಂಗ್ 23ನೇ ಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನದ ಕೌಂಟರ್‌ಪಾರ್ಟ್ ಶಾಹೀನ್ ಶಾ ಅಫ್ರಿದಿ ಅವರ ಹಿಂದೆ ಇದ್ದಾರೆ.
ಮತ್ತೊಂದೆಡೆ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜಿಂಬಾಬ್ವೆ ವಿರುದ್ಧ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಐದು ಸ್ಥಾನಗಳ ಏರಿಕೆ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ.
ಈ ಮಧ್ಯೆ, ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಹೆಚ್ಚು ವಿಕೆಟ್ ಟೇಕರ್ ಆಗಿರುವ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಮತ್ತೆ ನಂಬರ್ ಒನ್ ಬೌಲರ್‌ಗೆ ಮರಳಿದ್ದಾರೆ.

15 ವಿಕೆಟ್‌ಗಳನ್ನು ಪಡೆದಿರುವ ವನಿಂದು ಹಸರಂಗ
ಟಿ20 ವಿಶ್ವ ಟೂರ್ನಿಯಲ್ಲಿ ಶ್ರೀಲಂಕಾದ ಸೂಪರ್ 12ರ ಮುಕ್ತಾಯದ ನಂತರ 15 ವಿಕೆಟ್‌ಗಳನ್ನು ಪಡೆದಿರುವ ವನಿಂದು ಹಸರಂಗ, ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರಿಂದ ಅಗ್ರಸ್ಥಾನವನ್ನು ಪಡೆದುಕೊಂಡರು. ಕಳೆದ ವರ್ಷ ನವೆಂಬರ್‌ನಲ್ಲಿ ಹಸರಂಗ ಕೊನೆಯ ಬಾರಿಗೆ ಹೊಂದಿದ್ದ ಮೊದಲ ಸ್ಥಾನವನ್ನು ಮರಳಿ ಪಡೆದರು.
ಇದೇ ವೇಳೆ ಆಲ್‌ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಮಾತ್ರ ಟಾಪ್ 10ರೊಳಗೆ ಹೊಸ ಆಗಮನವಾಗಿದ್ದರೆ, ಪಾಕಿಸ್ತಾನದ ಶಾದಾಬ್ ಖಾನ್ 10 ಸ್ಥಾನ ಮೇಲಕ್ಕೇರಿ 15 ಸ್ಥಾನಕ್ಕೆ ತಲುಪಿದ್ದಾರೆ.
ಬೌಲರ್‌ಗಳಿಗಾಗಿ ಅಗ್ರ 10ರ ್ಯಾಂಕಿಂಗ್‌ನಲ್ಲಿ ಒಬ್ಬ ಹೊಸ ಬೌಲರ್‌ನ ಆಗಮನವಾಗಿದೆ, ಇಂಗ್ಲೆಂಡ್‌ನ ಆದಿಲ್ ರಶೀದ್ ಎಂಟನೇ ಸ್ಥಾನಕ್ಕೆ ಏರಿದ್ದಾರೆ, ಅವರ ಸಹ ಆಟಗಾರ ಸ್ಯಾಮ್ ಕುರ್ರಾನ್‌ಗಿಂತ ಒಂದು ಸ್ಥಾನ ಹಿಂದೆ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications