ನ್ಯೂಜಿಲೆಂಡ್‌ನಲ್ಲಿ ನಾನು ನೋಡಿದ ಅತ್ಯುತ್ತಮ ಆಟಗಳಲ್ಲಿ ಇದು ಒಂದು; ಕಿವೀಸ್ ಕ್ರಿಕೆಟಿಗ

ಮೌಂಟ್ ಮೌಂಗನುಯಿ ಬೇ ಓವಲ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 65 ರನ್‌ಗಳಿಂದ ಭರ್ಜರಿ ಜಯ ಗಳಿಸಿತು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಈ ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಮೇತ ಅಜೇಯ 111 ರನ್ ಗಳಿಸಿ ಅಬ್ಬರಿಸಿದರು.
ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ರವಿವಾರ, ನವೆಂಬರ್ 20ರಂದು ನಡೆದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಶತಕ ನ್ಯೂಜಿಲೆಂಡ್ ನೆಲದಲ್ಲಿ ತಾನು ನೋಡಿದ ಅತ್ಯುತ್ತಮ ಆಟಗಳಲ್ಲಿ ಒಂದಾಗಿದೆ ಎಂದು ನ್ಯೂಜಿಲೆಂಡ್‌ನ ಮಾಜಿ ಬ್ಯಾಟರ್ ರಾಸ್ ಟೇಲರ್ ಹೇಳಿದ್ದಾರೆ.

ಅವನು ಸಿಕ್ಸರ್ ಹೊಡೆಯುವ ರೀತಿ ಅದ್ಭುತವಾಗಿತ್ತು
"ಇದು ನಂಬಲಾಗದ ಇನ್ನಿಂಗ್ಸ್. ಸೂರ್ಯಕುಮಾರ್ ಪ್ರಾರಂಭಿಸಿದ ರೀತಿ, ಅವನು ಸಿಕ್ಸರ್ ಹೊಡೆಯುವ ರೀತಿ ಅದ್ಭುತವಾಗಿತ್ತು. ನಾನು ನ್ಯೂಜಿಲೆಂಡ್‌ನಲ್ಲಿ ಬ್ರೆಂಡನ್ ಮೆಕಲಮ್, ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ ಅವರ ಸಾಕಷ್ಟು ಉತ್ತಮ ಇನ್ನಿಂಗ್ಸ್‌ಗಳನ್ನು ನೋಡಿದ್ದೇನೆ, ಆದರೆ ಟಿ20 ಇತಿಹಾಸದಲ್ಲಿ, ನಾನು ಈ ನೆಲದಲ್ಲಿ ನೋಡಿದ ಅತ್ಯುತ್ತಮ ಟಿ20 ಶತಕ ಇದೇ ಇರಬೇಕು," ಎಂದು ರಾಸ್ ಟೇಲರ್ ಹೇಳಿದರು.
32ರ ಹರೆಯದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಕೌಶಲ್ಯಗಳನ್ನು ಹೊಂದಿದ್ದು, ಅವುಗಳನ್ನು ಶಾಟ್ ಆಡುವಾಗ ಬಳಸುತ್ತಾರೆ ಎಂದು ರಾಸ್ ಟೇಲರ್ ಬಣ್ಣಿಸಿದರು.

ಸೂರ್ಯಕುಮಾರ್ ಅಪಾಯಗಳನ್ನು ತೆಗೆದುಕೊಳ್ಳುತ್ತಾನೆ
"ಬ್ಯಾಟಿಂಗ್ ಸೂರ್ಯಕುಮಾರ್ ಯಾದವ್ ಅಪಾಯಗಳನ್ನು ತೆಗೆದುಕೊಳ್ಳುತ್ತಾನೆ. ಸ್ಪಿನ್ನರ್‌ಗಳ ವಿರುದ್ಧ ಆರಾಮದಾಯಕವಾಗಿ ಶಾಟ್ ಬೀಸುತ್ತಾರೆ. ಲ್ಯೂಕಿ ಫರ್ಗುಸನ್ ದಾಳಿಯನ್ನು ಎದುರಿಸುವಾಗ ಸ್ವಲ್ಪ ಅದೃಷ್ಟ ಹೊಂದಿದ್ದರು ಎಂದುಕೊಳ್ಳುತ್ತೇನೆ. ಆದರೆ ಅದನ್ನು ಹೊರತುಪಡಿಸಿ, ತಮ್ಮ ಎಂದಿನ ಶಾಟ್‌ಗಳನ್ನು ಬಳಸಿ ಉತ್ತಮವಾಗಿ ಆಡಿದರು," ಎಂದು ರಾಸ್ ಟೇಲರ್ ತಿಳಿಸಿದರು.
"ಸೂರ್ಯಕುಮಾರ್ ಯಾದವ್ ಬಾಲ್ ಅನ್ನು ಶ್ರಮವಹಿಸಿ ಬಾರಿಸಲು ಪ್ರಯತ್ನಿಸುವುದಿಲ್ಲ, ಹಾಗೆ ಮಾಡಿ ಸ್ನಾಯು ನೋವು ಮಾಡಿಕೊಳ್ಳುವುದಿಲ್ಲ. ತಮ್ಮಲ್ಲಿರುವ ಕೌಶಲ್ಯ ಮತ್ತು ಉತ್ತಮ ಕ್ರಿಕೆಟ್ ಹೊಡೆತಗಳನ್ನು ಬಳಸಿ ಆಡುತ್ತಾನೆ," ಎಂದು ಭಾರತೀಯ ಬ್ಯಾಟರ್‌ನನ್ನು ರಾಸ್ ಟೇಲರ್ ಶ್ಲಾಘಿಸಿದರು.

ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ದಾಖಲೆಯನ್ನು ಮುರಿದರು
ನ್ಯೂಜಿಲೆಂಡ್ ಬೌಲರ್‌ಗಳನ್ನು ಕಾಡಿದ ಮುಂಬೈ ಮೂಲದ ಸೂರ್ಯಕುಮಾರ್ ಯಾದವ್ ಬೌಂಡರಿ, ಸಿಕ್ಸರ್‌ಗಳಿಂದ 32 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು.
ಸೂರ್ಯಕುಮಾರ್ ಯಾದವ್ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಒಂದು ಕ್ಯಾಲೆಂಡರ್ ವರ್ಷದಲ್ಲಿ ಭಾರತೀಯ ಬ್ಯಾಟರ್‌ನಿಂದ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ದಾಖಲೆಯನ್ನು ಮುರಿದರು. ಸೂರ್ಯಕುಮಾರ್ ಯಾದವ್ 2022ರಲ್ಲಿ 7 ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಇನ್ನೂ ಪಂದ್ಯಗಳು ಬಾಕಿ ಇವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications