Suryakumar Yadav: ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಸೂರ್ಯಕುಮಾರ್ ಯಾದವ್ ದಂಪತಿ

ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಮಂಗಳವಾರ, ಫೆಬ್ರವರಿ 21ರಂದು ಆಂಧ್ರಪ್ರದೇಶದ ತಿರುಪತಿ ತಿರುಮಲ ಬೆಟ್ಟಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಮಾಡಿ, ಆಶೀರ್ವಾದ ಪಡೆದರು.
ಈ ಹಿಂದೆ ಭಾರತ ತಂಡ ತಿರುವನಂತಪುರಂಗೆ ಹೋದಾಗ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೂ ಸೂರ್ಯಕುಮಾರ್ ಯಾದವ್ ಕೆಲವು ಕ್ರಿಕೆಟಿಗರೊಂದಿಗೆ ತೆರಳಿ, ಪೂಜೆ ಸಲ್ಲಿಸಿದ್ದರು.
ಇದೀಗ ಕ್ರಿಕೆಟ್ ಬಿಡುವಿನ ವೇಳೆಯಲ್ಲಿ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಬಾಲಾಜಿ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಸೂರ್ಯಕುಮಾರ್ ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ತಿರುಪತಿ ತಿಮ್ಮಪ್ಪ ಎಂದೇ ಪ್ರಖ್ಯಾತವಾಗಿರುವ ಬಾಲಾಜಿಯ ದರ್ಶನ ಪಡೆದ ನಂತರ ತಿರುಮಲದ ರಂಗನಾಯಕ ಮಂಟಪದಲ್ಲಿ ವೈದಿಕರು ಆಶೀರ್ವಚನ ನೀಡಿದರು. ದೇಗುಲದ ಅಧಿಕಾರಿಗಳು ಸೂರ್ಯಕುಮಾರ್ ಯಾದವ್ ದಂಪತಿಗೆ ತೀರ್ಥ ಪ್ರಸಾದಗಳನ್ನು ನೀಡಿದರು. ಅಲ್ಲದೇ ಕ್ರಿಕೆಟಿಗನಿಗೆ ರೇಷ್ಮೆ ವಸ್ತ್ರವನ್ನು ನೀಡಿದರು.

ನಂತರ ದೇಗುಲದ ಹೊರಗೆ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಅವರ ಅಭಿಮಾನಿಗಳು ಸೇರಿದಂತೆ ಭಕ್ತರು ಫೋಟೋ ತೆಗೆಸಿಕೊಂಡರು.
Women's T20 World Cup: ಮಳೆ ಬಾಧಿತ ಪಂದ್ಯದಲ್ಲಿ ಭಾರತಕ್ಕೆ ಗೆಲುವು; ಸೆಮಿಫೈನಲ್ ಪ್ರವೇಶಿಸಿದ ಕೌರ್ ಪಡೆ
ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮಾತ್ರವಲ್ಲದೆ, ಬಹಳಷ್ಟು ತಾರೆಯರು ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಆಂಧ್ರಪ್ರದೇಶದ ಗೃಹ ಸಚಿವ ತಾನೆಟಿ ವನಿತಾ, ಜೈಪುರ ರಾಜಕುಮಾರಿ ಸಂಸದೆ ದಿಯಾ ಕುಮಾರಿ ಮತ್ತು ನರಸರಾವ್‌ಪೇಟೆ ಸಂಸದ ಕೃಷ್ಣದೇವರಾಯ ಅವರು ಬಾಲಾಜಿ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications