ತನ್ನ ಯಶಸ್ಸಿಗೆ ಕಾರಣ ಯಾರು ಎನ್ನುವುದನ್ನು ಬಹಿರಂಗಪಡಿಸಿದ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಸದ್ಯ ಭಾರತದ ಕ್ರಿಕೆಟ್ ತಂಡದ ಮುಖ್ಯ ಆಟಗಾರರಲ್ಲಿ ಒಬ್ಬರು. ಭಾರತ ತಂಡದಲ್ಲಿ ಆಯ್ಕೆಯಾಗಲು ಅವರು ಸಾಕಷ್ಟು ಪರಿಶ್ರಮ ಪಟ್ಟರು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ, ಆದರೂ ಸೂರ್ಯಕುಮಾರ್ ಯಾದವ್, ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ತಂಡದಲ್ಲಿ ಅವಕಾಶ ಪಡೆದುಕೊಂಡರು.
ಸೂರ್ಯಕುಮಾರ್ ಯಾದವ್ ತಮ್ಮ ತರಬೇತಿಯನ್ನು ಬದಲಾಯಿಸಲು ನಿರ್ಧರಿಸಿದರು, ಆಹಾರಕ್ರಮವನ್ನು ಪ್ರಾರಂಭಿಸಿದರು ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲು ಆಫ್-ಸೈಡ್ ಕಡೆಗೆ ಹೆಚ್ಚು ಬ್ಯಾಟಿಂಗ್ ಮಾಡಿದರು. ಸೂರ್ಯಕುಮಾರ್ ತಮ್ಮ ಪತ್ನಿ ದೇವಿಶಾ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.
"2017-18 ರ ನಂತರ ನಾನು ಮತ್ತು ನನ್ನ ಹೆಂಡತಿ ದೇವಿಶಾ ಚರ್ಚೆ ಮಾಡಿದೆವು, ಇಲ್ಲಿಂದ ಸ್ವಲ್ಪ ಬುದ್ಧಿವಂತ ಕೆಲಸ ಮಾಡೋಣ. ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ, ನೀವು ಇಲ್ಲಿಯವರೆಗೆ ಬಂದಿದ್ದೀರಿ, ಬೇರೆ ಏನಾದರೂ ಮಾಡೋಣ ಮತ್ತು ಏನಾಗುತ್ತದೆ ಎಂದು ನೋಡೋಣ" ಎಂದು ಪತ್ನಿ ಸಲಹೆ ನೀಡಿದ್ದಾಗಿ ಸೂರ್ಯಕುಮಾರ್ ತಿಳಿಸಿದ್ದಾರೆ.
"ನಾನು ವಿಭಿನ್ನ ರೀತಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ. 2018 ರ ನಂತರ ನನ್ನ ಆಟದಲ್ಲಿ ಯಾವ ಸುಧಾರಣೆ ಮಾಡಬೇಕೆಂದು ನಾನು ಅರಿತುಕೊಂಡೆ. ಹೆಚ್ಚು ಬ್ಯಾಟಿಂಗ್ ಆರಂಭಿಸಿದೆ. ನಾನು ಆಹಾರಕ್ರಮವನ್ನು ಪ್ರಾರಂಭಿಸಿದೆ. 2018 ಮತ್ತು 2019ರ ಐಪಿಎಲ್ ನನಗೆ ನಿಜವಾಗಿಯೂ ಸಹಾಯ ಮಾಡಿತು ಎಂದು ಹೇಳಿದ್ದಾರೆ.

11 ವರ್ಷ ಕಾದ ಬಳಿಕ ತಂಡದಲ್ಲಿ ಅವಕಾಶ
ಸೂರ್ಯಕುಮಾರ್ ಯಾದವ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಪ್ರಾರಂಭಿಸಿದ 11 ವರ್ಷಗಳ ನಂತರ ಅಂದರೆ, ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸೂರ್ಯಕುಮಾರ್ ಅವರು ಮೊದಲು ನಿರ್ದಿಷ್ಟ ಯೋಜನೆ ಇಲ್ಲದೆ ಅಭ್ಯಾಸ ಮಾಡುತ್ತಿದ್ದರು ಮತ್ತು ಇದರಿಂದ ನಿರಾಶೆಗೊಂಡ ಸೂರ್ಯಕುಮಾರ್ ಯಾದವ್ "ಗುಣಮಟ್ಟದ" ತರಬೇತಿಗೆ ಸ್ಥಳಾಂತರಗೊಂಡರು, ನಂತರ ಅವರು ಹೆಚ್ಚು ಸ್ಥಿರ ಪ್ರದರ್ಶನ ನೀಡಿದರು.
"ನನ್ನ ದೇಹದ ಭಾಷೆಯನ್ನು ಅರ್ಥಮಾಡಿಕೊಳ್ಳಲು ನನಗೆ ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡಿತು. ಅದನ್ನು ಅರಿತುಕೊಂಡ ಮೇಲೆ, ನಾನು ಸರಿಯಾದ ದಿಕ್ಕಿನಲ್ಲಿ ಅಭ್ಯಾಸ ಪ್ರಾರಂಭಿಸಿದೆ. ನಾನು ಏನು ಮಾಡಬೇಕು, ನಾನು ಹೇಗೆ ತರಬೇತಿ ಪಡೆಯಬೇಕು, ಎಷ್ಟು ಅಭ್ಯಾಸ ಮಾಡಬೇಕು ಎಂದು ನನಗೆ ತಿಳಿದಿತ್ತು," ಎಂದು ಅವರು ಹೇಳಿದರು.
ಟರ್ಕಿಯಲ್ಲಿ IPL 2023 ಆಟಗಾರರ ಹರಾಜು ಪ್ರಕ್ರಿಯೆ? ಬಹಿಷ್ಕಾರ ಹಾಕುತ್ತೇವೆ ಎಂದು ಅಭಿಮಾನಿಗಳ ಎಚ್ಚರಿಕೆ

2018ರಿಂದ ಡಯಟ್, ತರಬೇತಿಯಲ್ಲಿ ಬದಲಾವಣೆ
2018 ರ ನಂತರ ನನ್ನ ತರಬೇತಿ, ಡಯಟ್, ನೆಟ್ ಸೆಷನ್‌ಗಳು ಮತ್ತು ಎಲ್ಲದರಲ್ಲೂ ಸಾಕಷ್ಟು ಗುಣಮಟ್ಟವಿತ್ತು, ಅದು ನನಗೆ ಚೆನ್ನಾಗಿ ಸಹಾಯ ಮಾಡಿತು. ನಂತರ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಉತ್ತಮವಾಗಿ ರನ್ ಗಳಿಸಲು ಆರಂಭಿಸಿದೆ ಎಂದು ಅವರು ಹೇಳಿದ್ದಾರೆ.
2020ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಆದರೆ, ಕೆಲವು ದಿನಗಳ ನಂತರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ 43 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ತಮ್ಮ ಫಾರ್ಮ್ ಪ್ರದರ್ಶಿಸಿದರು.

ಅವಕಾಶ ಸಿಗದಿದ್ದಾಗ ನಿರಾಶೆ ಅನುಭವಿಸಿದ್ದೆ
ಐಪಿಎಲ್ ಆಡುವ ಸಂದರ್ಭದಲ್ಲಿ ವಿವಿಧ ದೇಶಗಳ ಎಲ್ಲಾ ತಂಡದ ಸಹ ಆಟಗಾರರು ನಿಮ್ಮ ಸಮಯ ಬಂದಿದೆ ಎಂದು ಹೇಳುತ್ತಿದ್ದರು. ನೀವು ತುಂಬಾ ಚೆನ್ನಾಗಿ ಆಡುತ್ತಿದ್ದೀರಿ ಎಂದು ಕೂಡ ಹೇಳುತ್ತಿದ್ದರು. ಆ ಸಮಯದಲ್ಲಿ ನಾನು ತುಂಬಾ ಉತ್ಸುಕನಾಗಿದ್ದೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಭಾರತ ತಂಡಕ್ಕೆ ಆಯ್ಕೆಯಾಗಲು ಕಾಯುತ್ತಿದ್ದೆ ಆದರೆ ಅವಕಾಶ ಸಿಗದಿದ್ದಾಗ ನಿರಾಶೆಗೊಂಡೆ ಎಂದು ಹೇಳಿದ್ದಾರೆ.
ಆದರೆ ಒಮ್ಮೆ ಅವಕಾಶ ದೊರಕಿದ ನಂತರ ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪ್ರಸ್ತುತ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದ ಮುಖ್ಯ ಆಟಗಾರರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications