Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Suryakumar Yadav: ಟೀಮ್ ಇಂಡಿಯಾ ಕ್ಯಾಪ್ಟನ್‌ ಬ್ಯಾಟ್‌ ಮೌನ ಮಾತು: ತಂಡಕ್ಕೆ ನೆರವಾಗದ ಸೂರ್ಯ

ಭಾರತದ ಸದ್ಯ ಇಂಗ್ಲೆಂಡ್‌ ವಿರುದ್ಧ ಟಿ20 ಪಂದ್ಯಗಳನ್ನು ಆಡುತ್ತಿದೆ. ಈ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಮೂರನೇ ಪಂದ್ಯವನ್ನು ಗೆದ್ದು ಸರಣಿ ವಶಕ್ಕೆ ಪಡೆಯುವ ಭಾರತದ ಆಸೆಗೆ ಪೆಟ್ಟು ಬಿದ್ದಿದೆ. ರಾಜ್‌ಕೋಟ್‌ನಲ್ಲಿ ಟೀಮ್ ಇಂಡಿಯಾ ಟಾಪ್‌ ಆರ್ಡರ್‌ ಮಕಾಡೆ ಮಲಗಿದೆ. ಮೊದಲೆರಡು ಪಂದ್ಯಗಳಲ್ಲಿ ತಂಡಕ್ಕೆ ಆಧಾರವಾಗಿದ್ದ ಪ್ಲೇಯರ್ಸ್ ಜವಾಬ್ದಾರಿ ಮರೆತಿದ್ದಾರೆ.

ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್‌ನಲ್ಲಿ ಅಮೋಘವಾಗಿ ಬ್ಯಾಟ್ ಮಾಡುತ್ತಿದ್ದ ಸೂರ್ಯಕುಮಾರ್‌, ಪ್ರಸಕ್ತ ಸರಣಿಯಲ್ಲಿ ಮಂಕಾಗಿದ್ದಾರೆ. ರನ್‌ ಬಾರಿಸಿ ಅಬ್ಬರಿಸುವ ಕಲೆಯನ್ನು ಅವರು ನೆನಪು ಹಾರಿದಂತೆ ಕಾಣುತ್ತಿದೆ. ಸ್ಟಾರ್ ಆಟಗಾರನ ಆಟ ನೋಡಲು ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಈ ಫ್ಲಾಪ್‌ ಶೋ ರಾಜ್‌ಕೋಟ್‌ನಲ್ಲೂ ಮುಂದುವರೆದಿದೆ. ಸೂರ್ಯಕುಮಾರ್ ಯಾದವ್ ಬ್ಯಾಟ್ ಮೌನಕ್ಕೆ ಶರಣಾಗಿದ್ದು, ಅಭಿಮಾನಿಗಳಿಗೆ ಅಷ್ಟೇ ಅಲ್ಲಾ ಟೀಮ್ ಇಂಡಿಯಾ ಟೆನ್ಷನ್‌ ಸಹ ಹೆಚ್ಚು ಮಾಡಿದೆ.

Suryakumar Yadav s T20I Batting Struggles Continue as Captain Against England

ಸೂರ್ಯಕುಮಾರ್ ಫ್ಲಾಪ್‌

ಸೂರ್ಯಕುಮರ್ ಯಾದವ್ ಟೀಮ್ ಇಂಡಿಯಾದ ನಾಯಕ ಸ್ಥಾನವನ್ನು ಅಲಂಕರಿಸಿದ ಮೇಲೆ ಅವರ ಬ್ಯಾಟ್‌ ಮೌನವಾಗಿದೆ. ಇವರು ಬ್ಯಾಟ್‌ನಿಂದ ತಂಡದ ಜಯದಲ್ಲಿ ಮಿಂಚುತ್ತಿಲ್ಲ. ಟಿ20 ಕ್ರಿಕೆಟ್‌ನಲ್ಲಿ ರಾಜನಂತೆ ಮೆರೆದ ಪ್ಲೇಯರ್‌ ಈಗ, ಆರ್ಭಟ ನಡೆಸುತ್ತಿಲ್ಲ. ಇದರ ನೇರ ಪರಿಣಾಮ ಅವರ ಸರಾಸರಿಯ ಮೇಲೆ ಬಿದ್ದಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಹತಾಶೆಯನ್ನು ಬಿಗಿದಪ್ಪಿಕೊಂಡಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ತಂಡದ ಚುಕ್ಕಾಣಿಯನ್ನು ಹಿಡಿದು 20 ಟಿ20 ಪಂದ್ಯಗಳನ್ನು ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಇವರಿಗೆ 19 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕಿದೆ. ಸೂರ್ಯ ಈ ಅವಧಿಯಲ್ಲಿ 29.26 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕನಾಗಿ ಒಂದು ಶತಕ ಬಾರಿಸಿದರೆ 4 ಅರ್ಧಶತಕ ಸಿಡಿಸಿದ್ದಾರೆ. ನಾಯಕನಾಗಿ ಸೂರ್ಯ ಒಮ್ಮೆ ಸೊನ್ನೆ ಸಹ ಸುತ್ತಿದ್ದಾರೆ. ನಾಯಕನಾಗಿ ಅವರ ಸ್ಟ್ರೈಕ್ ರೇಟ್ ಹೆಚ್ಚು ಕಡಿಮೆಯಾಗಿಲ್ಲ ಮತ್ತು 165.97 ರಷ್ಟಿದೆ.

ಸ್ಕೈ ಸಾಧನೆ

ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಮಾಸ್ಟರ್‌ ಬ್ಯಾಟರ್‌. ಇವರ ಬ್ಯಾಟಿಂಗ್‌ ದಾಖಲೆ ಚುಟುಕು ಫಾರ್ಮೆಟ್‌ನಲ್ಲಿ ಅಮೋಘ. ಇವರು ಆಡಿದ 88 ಪಂದ್ಯಗಳ 77 ಇನಿಂಗ್ಸ್‌ಗಳಲ್ಲಿ 39.33 ಸರಸಾರಿಯಲ್ಲಿ 2596 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 21 ಅರ್ಧಶತಕ ಸೇರಿವೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 167.70 ಆಗಿದೆ. ಸೂರ್ಯಕುಮಾರ್ ಯಾದವ್ ಪಂದ್ಯವನ್ನು ಗೆಲ್ಲಿಸಬಲ್ಲ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇವರು ಯಾವುದೇ ಪರಿಸ್ಥಿತಿಯಲ್ಲಾದ್ರೂ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ನಾಯಕತ್ವವನ್ನು ವಹಿಸಿಕೊಂಡ ಮೇಲೆ ಇವರಿಗೆ ಬ್ಯಾಟಿಂಗ್ ಭಾರವಾದಂತೆ ಕಾಣುತ್ತಿದೆ.

Story first published: Wednesday, January 29, 2025, 10:53 [IST]
Other articles published on Jan 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+