ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೀಗೂ ಬೌಲಿಂಗ್ ಮಾಡಬಹುದು!: ಮಿ.360 ಡಿಗ್ರಿ ಬೌಲರ್ ವಿಡಿಯೋ ವೈರಲ್

switch bowling action bcci internet ck naidu trophy uttar pradesh cricket

ಲಕ್ನೋ, ನವೆಂಬರ್ 8: ಎಂ.ಎಸ್. ಧೋನಿಯ ಹೆಲಿಕಾಪ್ಟರ್ ಶಾಟ್, ತಿಲಕರತ್ನೆ ದಿಲ್ಶಾನ್ ಅವರ ದಿಲ್ ಸ್ಕೂಪ್, ಕೆವಿನ್ ಪೀಟರ್ಸನ್ ಸ್ವಿಚ್ ಹಿಟ್, ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟಿಂಗ್ ಶೈಲಿ ಎಲ್ಲವೂ ಅಭಿಮಾನಿಗಳನ್ನು ಮನಸೂರೆಗೊಂಡಿವೆ.

ಕ್ರಿಕೆಟ್‌ನಲ್ಲಿ ವಿಭಿನ್ನ ಶೈಲಿಯ ಬ್ಯಾಟಿಂಗ್‌ಗೆ ಅವಕಾಶವಿದೆ. ಆದರೆ, ಬೌಲಿಂಗ್‌ನಲ್ಲಿ ವಿಶಿಷ್ಟ ಶೈಲಿಯಲ್ಲಿ ಚೆಂಡು ಎಸೆಯುವುದಕ್ಕೆ ಇರುವ ಅವಕಾಶಗಳು ಕಡಿಮೆ. ಏಕೆಂದರೆ ಹಿಡಿತ ತಪ್ಪಿದರೆ ವೈಡ್ ಅಥವಾ ನೋಬಾಲ್ ಆಗುವ ಮತ್ತು ಬ್ಯಾಟ್ಸ್‌ಮನ್‌ನಿಂದ ದಂಡನೆಗೆ ಒಳಗಾಗುವ ಅಪಾಯ ಇರುತ್ತದೆ.

ಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆ

ಲಸಿತ್ ಮಾಲಿಂಗ, ಮುತ್ತಯ್ಯ ಮುರಳೀಧರನ್, ಜಸ್ ಪ್ರೀತ್ ಬೂಮ್ರಾ ಅವರಂತಹ ಕೆಲವೇ ಬೌಲರ್‌ಗಳ ಶೈಲಿ ವಿಶೇಷ ಎನಿಸುತ್ತವೆ. ಆದರೆ, ಇಲ್ಲೊಬ್ಬ ಬೌಲರ್ ಯಾರೂ ಪ್ರಯೋಗಿಸಿರದ ಶೈಲಿಯನ್ನು ಪ್ರಯೋಗಿಸಿದ್ದಾನೆ. ಇದು ಎಬಿ ಡಿವಿಲಿಯರ್ಸ್ ಅವರ 360 ಡಿಗ್ರಿ ಶೈಲಿಯ ಬ್ಯಾಟಿಂಗ್ ನೆನಪಿಸುತ್ತದೆ, ಜತೆಗೆ ಸ್ವಿಚ್ ಹಿಟ್ ಬ್ಯಾಟಿಂಗ್ ಶೈಲಿಯನ್ನೂ ನೆನಪಿಸುತ್ತದೆ.

ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದು ಸಾಕಷ್ಟು ವೈರಲ್ ಆಗಿದ್ದು, ಅದರ ಬಗ್ಗೆ ಭಾರಿ ಚರ್ಚೆಯೂ ನಡೆದಿದೆ.

ಉತ್ತರ ಪ್ರದೇಶ ಮತ್ತು ಬಂಗಾಳಗಳ ನಡುವೆ ಕಲ್ಯಾಣಿಯಲ್ಲಿ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಪಂದ್ಯದಲ್ಲಿ ಈ ವಿಶಿಷ್ಟ ಬೌಲಿಂಗ್ ದಾಖಲಾಗಿದೆ.

ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್‌ಗೆ ತತ್ತರಿಸಿದ ಪಾಕಿಸ್ತಾನನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್‌ಗೆ ತತ್ತರಿಸಿದ ಪಾಕಿಸ್ತಾನ

ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಶಿವ ಸಿಂಗ್ ಚೆಂಡು ಎಸೆಯುವುದಕ್ಕೆ ಮುನ್ನ 360 ಡಿಗ್ರಿಯಲ್ಲಿ ತಿರುಗಿದ್ದರು. ಇದನ್ನು ಅಂಪೈರ್ ವಿನೋದ್ ಶೇಷನ್ 'ಡೆಡ್ ಬಾಲ್' ಎಂದು ಪರಿಗಣಿಸಿದ್ದರು.

ಅಂಪೈರ್ ತೀರ್ಪು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕ್ರಿಕೆಟ್‌ನ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಏಕಾಗ್ರತೆಗೆ ಧಕ್ಕೆ

ಏಕಾಗ್ರತೆಗೆ ಧಕ್ಕೆ

ಶಿವ ಸಿಂಗ್ ಅವರ ಬೌಲಿಂಗ್ ಶೈಲಿ ಬ್ಯಾಟ್ಸ್‌ಮನ್‌ನ ಏಕಾಗ್ರತೆಯನ್ನು ಹಾಳುಮಾಡುವಂತಹದ್ದಾಗಿದೆ. ಇದು ನಿಯಮಾವಳಿಗೆ ವಿರುದ್ಧವಾದದು ಎಂದು ಅಂಪೈರ್ ನಿರ್ಣಯಿಸಿದರು. ಅಂಪೈರ್ ತೀರ್ಪು ಉತ್ತರ ಪ್ರದೇಶದ ಆಟಗಾರರಲ್ಲಿ ಅಸಮಾಧಾನ ಮೂಡಿಸಿತು. ಅವರ ಬಳಿಕ ಕೆಲ ಸಮಯ ಮಾತುಕತೆ ನಡೆಸಿದ ಬಳಿಕ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾದರು.

ನಿಯಮ ಹೇಳುವುದೇನು?

ಅಂಪೈರ್ ತೀರ್ಮಾನಕ್ಕೆ ಕಟು ಟೀಕೆ ಕೇಳಿಬಂದಿದ್ದರೂ ಕ್ರಿಕೆಟ್ ನಿಯಮಾವಳಿಗಳ ಪ್ರಕಾರ ಅಂಪೈರ್ ಈ ರೀತಿ ತೀರ್ಪು ನೀಡಲು ಅವಕಾಶವಿದೆ. ಕ್ರಿಕೆಟ್‌ ಕಾನೂನಿನ 41.2 ಸೆಕ್ಷನ್ ಪ್ರಕಾರ, ಆಟಗಾರರ ವರ್ತನೆ ಯಾವುದು ನ್ಯಾಯೋಚಿತ ಯಾವುದು ನ್ಯಾಯೋಚಿತವಲ್ಲ ಎಂಬುದನ್ನು ತೀರ್ಮಾನಿಸುವ ಅಧಿಕಾರ ಅಂಪೈರ್ ಅವರದ್ದೇ ಆಗಿರುತ್ತದೆ. ಆಡುವ ವೇಳೆ ಡೆಡ್ ಬಾಲ್ ಘೋಷಣೆಯು 41.19ರ ನಿಯಮದಡಿ ಬರುತ್ತದೆ. ಇಲ್ಲದಿದ್ದರೆ ಅಂಪೈರ್ ಆಟದ ವೇಳೆ ಕಾನೂನಿನ ವ್ಯಾಪ್ತಿಗೆ ಒಳಪಡುವುದನ್ನು ಹೊರತುಪಡಿಸಿ ಯಾವುದೇ ಮನವಿ ಇಲ್ಲದೆ ಮಧ್ಯಪ್ರವೇಶ ಮಾಡುವಂತಿಲ್ಲ.

ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

ಹೊಸ ಆವಿಷ್ಕಾರ ಇರಬೇಕು

ಇದು ಬಹಳ ಇಷ್ಟವಾಯಿತು. ಬೌಲರ್‌ಗಳು ಹೊಸ ಆವಿಷ್ಕಾರ ಮಾಡುತ್ತಲೇ ಇರಬೇಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಈ ಶೈಲಿಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಹೇಳಿದ್ದಾರೆ.

ಸ್ವಿಚ್ ಹಿಟ್ ಇದೆಯಲ್ಲ?

ನಿಯಮಾವಳಿಗಳಲ್ಲಿ ಸ್ವಿಚ್ ಹಿಟ್‌ ನ್ಯಾಯಸಮ್ಮತ ಎನಿಸಿಕೊಳ್ಳುವುದಾದರೆ, ಸ್ವಿಚ್ ಬೌಲಿಂಗ್ ಏಕಿಲ್ಲ? ಕ್ರಿಕೆಟ್‌ ಇನ್ನಷ್ಟು ಮಜ ಎನಿಸಬೇಕು. ನಿಯಮದಲ್ಲಿ ಅವಕಾಶ ನೀಡಿ ಎಂದು ಅಮಿತ್ ಪ್ರಭು ಎಂಬುವವರು ಒತ್ತಾಯಿಸಿದ್ದಾರೆ. ಸ್ವಿಚ್ ಹಿಟ್‌ಗೆ ಅವಕಾಶ ನೀಡಿ ಈ ಶೈಲಿಗೆ ಅವಕಾಶ ನೀಡದ ನಿಯಮದ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ

Story first published: Thursday, November 8, 2018, 17:47 [IST]
Other articles published on Nov 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X