ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ

ನವದೆಹಲಿ, ನವೆಂಬರ್ 7: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ದೂರ ಉಳಿದಿರುವ ನಾಯಕ ವಿರಾಟ್ ಕೊಹ್ಲಿ, ಈಗಲೂ ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ 'ಕದನ' ಮುಂದುವರಿಸಿದ್ದಾರೆ. ಆದರೆ, ಇದು ಕ್ರಿಕೆಟ್ ಪಂದ್ಯವಲ್ಲ. ಬದಲಾಗಿ 'ಫ್ಯಾನ್ಸ್' ಕದನ.
ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿ ಎದುರಾಳಿ ತಂಡದ ಬೆವರಿಳಿಸುವ ಕೊಹ್ಲಿ, ಇಲ್ಲಿ ಮಾತ್ರ ತಾವೇ ಎದುರಾಳಿಗಳನ್ನು ಕೆಣಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಹ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗುತ್ತಿರುವುದು ಇದು ಮೊದಲ ಸಲವೇನಲ್ಲ.
ಈ ಹಿಂದೆ ಕಾರಿನಿಂದ ಕಸ ಎಸೆದಿದ್ದ ವ್ಯಕ್ತಿಯೊಬ್ಬನ ವಿಡಿಯೋ ಮಾಡಿ ಆತನೊಂದಿಗೆ ಜಗಳವಾಡಿದ್ದ ವಿರಾಟ್-ಅನುಷ್ಕಾ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್‌ಗೆ ಒಳಗಾಗಿದ್ದರು. ಈ ಬಾರಿ ಕೊಹ್ಲಿ ಖಾರವಾದ ಪ್ರತಿಕ್ರಿಯೆ ನೀಡಲು ಹೋಗಿ ಮಾತ್ರ ಅವರ ವಿರುದ್ಧದ ಕೋಪ ದೊಡ್ಡಮಟ್ಟಕ್ಕೆ ಪ್ರಕಟವಾಗಿದೆ.
ಸೋಮವಾರ 30ನೇ ಜನ್ಮದಿನ ಆಚರಿಸಿಕೊಂಡ ವಿರಾಟ್ ಕೊಹ್ಲಿ ಅವರ ಕುರಿತಾದ 'ವಿರಾಟ್ ಕೊಹ್ಲಿ ಅಫಿಷಿಯಲ್ ಆಪ್' ಬಿಡುಗಡೆಯಾಗಿತ್ತು. ಅದರ ಪ್ರಚಾರದ ವೇಳೆ ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರನ್ನು ನಿಂದಿಸುವ ವಿಡಿಯೋ ವೈರಲ್ ಆಗಿದೆ. ಅದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ವೈಭವೀಕರಿಸಿದ ಆಟಗಾರ
ಕೊಹ್ಲಿ ಆಪ್‌ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬರು 'ಕೊಹ್ಲಿ ಅತಿ ವೈಭವೀಕರಿಸಿದ ಬ್ಯಾಟ್ಸ್‌ಮನ್. ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ವಿಶೇಷತೆ ಇಲ್ಲ. ಈ ಭಾರತದ ಕ್ರಿಕೆಟಿಗರಿಗಿಂತ ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಆಟ ನೋಡಲು ಇಷ್ಟಪಡುತ್ತೇನೆ' ಎಂದು ಹೇಳಿದ್ದರು.

ಬೇರೆ ದೇಶಕ್ಕೆ ಹೋಗಿ ಬದುಕಿ
ಇದಕ್ಕೆ ಕೊಹ್ಲಿ, 'ನೀವು ಭಾರತದಲ್ಲಿ ನೆಲೆಸಬಾರದು ಎಂದು ಎನಿಸುತ್ತಿದೆ. ಬೇರೆ ಕಡೆ ಎಲ್ಲಾದರೂ ಹೋಗಿ ಬದುಕಿ. ನೀವೇಕೆ ನಮ್ಮ ದೇಶದಲ್ಲಿ ಬದುಕಿ ಬೇರೆ ದೇಶವನ್ನು ಪ್ರೀತಿಸುತ್ತಿದ್ದೀರಿ? ನೀವು ನನ್ನನ್ನು ಇಷ್ಟಪಡದಿದ್ದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನೀವು ನಮ್ಮ ದೇಶದಲ್ಲಿ ಇರಬಾರದು' ಎಂದು ಆಕ್ರೋಶದಿಂದ ಹೇಳಿದ್ದಾರೆ.
ಟಿ20 ಶತಕಗಳಲ್ಲಿ ದಾಖಲೆ ನಿರ್ಮಿಸಿದ 'ಹಿಟ್ ಮ್ಯಾನ್' ರೋಹಿತ್ ಶರ್ಮಾ
ಎಲ್ಲವೂ ವಿದೇಶದ್ದಲ್ಲವೇ?
ಮದುವೆಯಾಗಿದ್ದು ವಿದೇಶದಲ್ಲಿ. ಇತರೆ ಕ್ರೀಡೆಗಳಲ್ಲಿ ವಿದೇಶಗಳನ್ನು ಬೆಂಬಲಿಸುತ್ತೀರಿ. ಕಬಡ್ಡಿ ಆಡುವ ಬದಲು ಬೇರೆ ದೇಶದಲ್ಲಿ ಹುಟ್ಟಿದ ಕ್ರೀಡೆಯನ್ನು ಆಡುತ್ತಿದ್ದೀರಿ. ಹೆಚ್ಚಿನ ಸಂದರ್ಭದಲ್ಲಿ ವಿದೇಶ ಭಾಷೆಯಲ್ಲಿಯೇ ಮಾತನಾಡುತ್ತೀರಿ. ವಿದೇಶಿ ದಿರಿಸನ್ನು ತೊಡುತ್ತೀರಿ. ಈ ಮಾತುಗಳನ್ನು ಹೇಳಲು ಅವರ ಮನಸ್ಥಿತಿ ಸರಿಯಾಗಿದೆಯೇ ಎಂದು ನರೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ
ಎಮೋಷನಲ್ ಆದ ಕೊಹ್ಲಿ
ಭಾರತೀಯ ಆಟಗಾರರಿಗಿಂತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಇಷ್ಟಪಡುವುದಾಗಿ ಆ ವ್ಯಕ್ತಿ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ನನಗನ್ನಿಸುತ್ತದೆ ವಿರಾಟ್ ಇಲ್ಲಿ ಬಹಳ ಭಾವುಕರಾಗಿ ಸಂಪೂರ್ಣ ತಪ್ಪಾಗಿ ಗ್ರಹಿಸಿದ್ದರೆಂದು ಎಂದು ಝಕಿ ಹೈದರ್ ಎಂಬುವವರು ಹೇಳಿದ್ದಾರೆ.
ಕೊಹ್ಲಿ ಒಬ್ಬ ಅಸಾಮಾನ್ಯ ನಾಯಕ, ಅದ್ಭುತ ಬ್ಯಾಟ್ಸ್ಮನ್: ಮ್ಯಾಕ್ಸ್‌ವೆಲ್
ಇಷ್ಟಪಡಬಾರದೇಕೆ?
ನಮ್ಮ ಆಯ್ಕೆಯ ಆಟಗಾರರನ್ನು ಇಷ್ಟಪಡುವುದು ನಮ್ಮ ಪ್ರಜಾಪ್ರಭುತ್ವದ ಹಕ್ಕಲ್ಲವೇ? ನಾವು ಭಾರತೀಯರಾದ ಕಾರಣಕ್ಕೆ ಇತರೆ ದೇಶದವರನ್ನು ದ್ವೇಷಮಾಡಬೇಕು ಎಂದೇನಿಲ್ಲವಲ್ಲ. ನೀವು ಮತ್ತೊಮ್ಮೆ ವಿಡಿಯೋ ಮಾಡಿ ಭಾರತೀಯರಲ್ಲದೆ ಬೇರೆ ಯಾರೂ ನಮ್ಮ ದೇಶವನ್ನು ಇಷ್ಟಪಡಬೇಡಿ ಎಂದು ಹೇಳುತ್ತೀರಾ? ಎಂದು ಅನಿರುದ್ಧ್ ಕಾರ್ತಿಕ್ ಎಂಬುವವರು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications