ಟಿ20: ಉತ್ತಪ್ಪ ಉತ್ತಮ ಆಟ, ಕರ್ನಾಟಕಕ್ಕೆ ಜಯ
ಕಟಕ್, ಜ. 08: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ20 ಪಂದ್ಯಾವಳಿಯ 'ಡಿ' ಗುಂಪಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ವಿನಯ್ ಕುಮಾರ್ ಪಡೆ ಶುಕ್ರವಾರ ಸುಲಭ ಜಯ ದಾಖಲಿಸಿದೆ. ರಾಬಿನ್ ಉತ್ತಪ್ಪ ಹಾಗೂ ಸ್ಟುವರ್ಟ್ ಬಿನ್ನಿ ಉತ್ತಮ ಆಟ ಪ್ರದರ್ಶಿಸಿ ಒಡಿಶಾ ವಿರುದ್ಧ ಕರ್ನಾಟಕಕ್ಕೆ 6 ವಿಕೆಟ್ ಜಯ ತಂದಿತ್ತಿದ್ದಾರೆ.
ಇದಕ್ಕೂ ಮುನ್ನ ಮಧ್ಯಮ ವೇಗಿ ಅಭಿಮನ್ಯು ಮಿಥುನ್, ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹಾಗೂ ಕೆಸಿ ಕಾರ್ಯಪ್ಪ ತಲಾ 2 ವಿಕೆಟ್ ಪಡೆದುಕೊಂಡು ಒಡಿಶಾ ತಂಡವನ್ನು 20 ಓವರ್ ಗಳಲ್ಲಿ 102/7ಕ್ಕೆ ನಿಯಂತ್ರಿಸಿದರು. ಒಡಿಶಾ ಪರ ಅಭಿಶೇಕ್ ಯಾದವ್ 31, ಬಿಪ್ಲಬ್ ಸಮಂತ್ರಾಯ್ 19 ರನ್ ಗಳಿಸಿ ತಂಡದ ಮೊತ್ತವನ್ನು 102/7 ಮುಟ್ಟಿಸಿದರು. [ರಾಹುಲ್ ದ್ರಾವಿಡ್ ದಾಖಲೆ ಸಮಕ್ಕೆ ನಿಂತ ರಾಬಿನ್ ಉತ್ತಪ್ಪ]

ನಂತರ ರನ್ ಚೇಸ್ ಮಾಡಿದ ಕರ್ನಾಟಕದ ತಂಡದ ಪರ ರಾಬಿನ್ ಉತ್ತಪ್ಪ 48, ಸ್ಟುವರ್ಟ್ ಬಿನ್ನಿ ಅಜೇಯ 32ರನ್ ಗಳಿಸಿ ಗೆಲುವಿನ ಗುರಿಯನ್ನು 17.5 ಓವರ್ ಗಳಲ್ಲಿ ದಾಟಿಸಿದರು.
41 ಎಸೆತಗಳನ್ನು ಎದುರಿಸಿದ ಉತ್ತಪ್ಪ ಅವರು 6 ಬೌಂಡರಿ ಹಾಗೂ ಒಂದು ಸಿಕ್ಸ್ ಸಿಡಿಸಿದರೆ, ಬಿನ್ನಿ ಅವರು 30 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸ್ ಇದ್ದ 32ರನ್ ಗಳಿಸಿದರು. ಒಡಿಶಾ ಪರ ಲೆಗ್ ಸ್ಪಿನ್ನರ್ ಟುಕುನಾ ಸಾಹೂ ಅವರು 2 ವಿಕೆಟ್, ದೀಪಕ್ ಬೆಹೆರಾ ಹಾಗೂ ಬಸಂತ್ ಮೊಹಂತಿ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications