ತ್ರಿಕೋನ ಟಿ20 ಸರಣಿ: ಟ್ರೋಫಿ ಗೆದ್ದ ಬಳಿಕ 'ಧೋನಿ ಸ್ಟ್ರೈಲ್' ಕಾಪಿ ಮಾಡಿದ ಬಾಬರ್ ಅಜಮ್

ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಟಿ20 ಸರಣಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಪಾಕಿಸ್ತಾನ ಟ್ರೋಫಿ ಗೆದ್ದುಕೊಂಡಿತು. ಟ್ರೋಫಿ ಪಡೆಯುವ ವೇಳೆಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ , ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಸ್ಟ್ರೈಲ್ ಅನ್ನು ನಕಲು ಮಾಡಿದ್ದಾರೆ. ಟ್ರೋಫಿ ಪಡೆದ ಬಳಿಕ ಸ್ಟ್ರೇಜ್‌ನಿಂದ ಹೊರನಡೆದು ನಂತರ ಮರಳಿದ್ರು.
ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಆಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಇದಾದ ಬಳಿಕ ಪಾಕಿಸ್ತಾನ 19.3 ಓವರ್‌ಗಳಲ್ಲಿ 168/5 ಗಳಿಸಿ ಜಯ ಸಾಧಿಸಿತು. ಆಕ್ರಮಣಕಾರಿ ಆಟವಾಡಿದ ಮೊಹಮ್ಮದ್ ನವಾಜ್ 22 ಎಸೆತಗಳಲ್ಲಿ 38 ರನ್ ಗಳಿಸಿದರು.
ಈ ವೇಳೆ ಬಾಬರ್ ಅಜಂ ಟ್ರೋಫಿಯನ್ನ ಪಡೆದು ಪಾಕ್ ತಂಡದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ನಾಯಕನಾಗಿ ಟ್ರೋಫಿಯನ್ನು ಸ್ವೀಕರಿಸಿದ ನಂತರ, ಬಾಬರ್ ಅಜಮ್ ತಕ್ಷಣವೇ ಅದನ್ನು ತನ್ನ ಸಹ ಆಟಗಾರರಿಗೆ ನೀಡಿದರು ಮತ್ತು ಫೋಟೋ ಫ್ರೇಮ್ ಅನ್ನು ಸಹ ಬಿಟ್ಟರು. ನಂತರ ಹಿಂತಿರುಗಿ ಬಂದು ಆಟಗಾರರೊಂದಿಗೆ ಕೊನೆಯ ಸಾಲಿನಲ್ಲಿ ನಿಂತು ಫೋಟೋಗಳನ್ನ ತೆಗೆಸಿಕೊಂಡರು.
ಇದಕ್ಕೂ ಮುನ್ನ ಟೀಂ ಇಂಡಿಯಾ ನಾಯಕನಾಗಿದ್ದ ವೇಳೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಇದೇ ರೀತಿಯಲ್ಲಿ ಔದಾರ್ಯ ಮೆರೆದಿದ್ದರು. ಸರಣಿ ಎಷ್ಟೇ ಯಶಸ್ವಿಯಾದರೂ ಧೋನಿ ಫೋಟೋ ಫ್ರೇಮ್‌ಗೆ ಸೆಂಟರ್‌ನಲ್ಲಿ ನಿಂತು ಪೋಸ್ ನೀಡುತ್ತಿರಲಿಲ್ಲ. ಕಪ್ ಪಡೆದ ತಕ್ಷಣವೇ ಯುವ ಆಟಗಾರನಿಗೆ ಹಸ್ತಾಂತರಿಸಿ ಫೋಟೋಗೆ ಕೊನೆಯ ಸಾಲಿನಲ್ಲಿ ನಿಂತು ಪೋಸ್ ನೀಡುತ್ತಿದ್ರು. ಅವರ ಈ ಗುಣವು ಅಭಿಮಾನಿಗಳಿಗೆ ಅತ್ಯಂತ ಪ್ರಿಯವಾದದ್ದು. ಬಾಬರ್ ಅಜಂ ಕೂಡ ಇದನ್ನೇ ಅನುಸರಿಸಿ ಅಭಿಮಾನಿಗಳನ್ನು ಹುರಿದುಂಬಿಸಿದರು.
ಟಿ20 ವಿಶ್ವಕಪ್‌ಗೂ ಮುನ್ನ ಮಹತ್ವದ ಸರಣಿ ಗೆದ್ದಿರುವ ಪಾಕಿಸ್ತಾನ ತಂಡ ಅಸಾಧಾರಣ ಬಲದೊಂದಿಗೆ ಆಸ್ಟ್ರೇಲಿಯಾಕ್ಕೆ ಆಗಮಿಸಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications