PAK vs ENG: ಹೀಗಾದ್ರೆ ಮಾತ್ರ ಪಾಕಿಸ್ತಾನ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯ; ಕೆವಿನ್ ಪೀಟರ್ಸನ್

ಭಾನುವಾರ, ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 2022ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲು ಸಜ್ಜಾಗಿವೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಮ್ಮ ಇತಿಹಾಸದಲ್ಲಿ ಎರಡನೇ ಬಾರಿಗೆ ಮತ್ತು 13 ವರ್ಷಗಳ ನಂತರ ಮೊದಲ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯಲು ಎದುರು ನೋಡುತ್ತಿದೆ. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ ಹಂತ ತಲುಪಿತ್ತು.
ಮತ್ತೊಂದೆಡೆ, ಗುರುವಾರದಂದು ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಕುರಿತು ಪ್ರತಿಕ್ರಿಯಿಸಿರುವ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್, ಇಂಗ್ಲೆಂಡ್ ಸ್ವಯಂಕೃತ ಅಪರಾಧದಿಂದ ಸೋತರೆ ಮಾತ್ರ ಪಾಕಿಸ್ತಾನ ತಂಡವು ಮೆಲ್ಬೋರ್ನ್‌ನಲ್ಲಿ ಟಿ20 ವಿಶ್ವಕಪ್ ಎತ್ತಿಹಿಡಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ಅವರ ಇತ್ತೀಚಿನ ಬೆಟ್ವೇ ಅಂಕಣದಲ್ಲಿ, ಪಾಕಿಸ್ತಾನ ತಂಡವು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ಯಾವುದೇ ಹಂತದಲ್ಲೂ ಹೋಲಿಕೆಯಾಗುವುದಿಲ್ಲ ಮತ್ತು ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ತಂಡಕ್ಕೆ ಪಾಕಿಸ್ತಾನ ವಿರುದ್ಧ ಆರಾಮದಾಯಕ ಗೆಲುವು ಸಿಗಲಿದೆ ಎಂದು ಹೇಳಿದ್ದಾರೆ.
"ಅಜಾಗರೂಕ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಇಂಗ್ಲೆಂಡ್ ಸೋಲಬೇಕೆಂದು ಪಾಕಿಸ್ತಾನವು ಆಶಿಸಬೇಕಾಗಿದೆ. ಆದರೆ ಇಂಗ್ಲೆಂಡ್ ಫೈನಲ್‌ನಲ್ಲಿ ಆ ರೀತಿಯಾಗಿ ಆಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಇಂಗ್ಲೆಂಡ್ ತಂಡ ಸ್ವಯಂ ತಪ್ಪಿನಿಂದ ಸೋಲಬೇಕು. ಅದೊಂದೇ ಪಾಕಿಸ್ತಾನ ನಿರೀಕ್ಷೆ ಇಟ್ಟುಕೊಳ್ಳುಬಹುದಾದ ಸಂಗತಿಯಾಗಿದೆ. ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಹಳಿತಪ್ಪಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ನನ್ನ ಪ್ರಕಾರ, ಇಂಗ್ಲೆಂಡ್‌ಗೆ ಆರಾಮದಾಯಕ ಗೆಲುವಿನ ಮುನ್ಸೂಚನೆ ಇದೆ," ಎಂದು ಕೆವಿನ್ ಪೀಟರ್ಸನ್ ಹೇಳಿದರು.

"ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಆರಂಭಿಕ ಜೋಡಿ ಭಾರತ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಸೋಲಿಸಿದರು. ಇದು ಈ ಪಂದ್ಯಾವಳಿಯಲ್ಲಿ ಯಾವುದೇ ತಂಡದಿಂದ ಅತ್ಯಂತ ಮನಗೆದ್ದ ಗೆಲುವಿನಲ್ಲಿ ಒಂದಾಗಿದೆ. ಇಂಗ್ಲೆಂಡ್ ತಂಡವು ಎಲ್ಲಾ ವಿಭಾಗಗಳಲ್ಲಿ ನೆಲೆ ಕಂಡುಕೊಂಡಿದೆ ಮತ್ತು ವಿಶ್ವಕಪ್‌ನಲ್ಲಿ ಬಲಿಷ್ಠ ತಂಡವಾಗಿದೆ," ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟರು.
"ಅಡಿಲೇಡ್ ಓವಲ್ ಮೈದಾನದಲ್ಲಿ 169 ರನ್‌ಗಳನ್ನು ಬೆನ್ನಟ್ಟುತ್ತಿರುವಾಗ ಅದು ಸುಲಭವಾದ ಆಟವಾಗಿತ್ತು. ಒಬ್ಬ ಬ್ಯಾಟರ್ ಕೇವಲ 50 ಎಸೆತಗಳಲ್ಲಿ 70 ರನ್ ಗಳಿಸಬಹುದಾಗಿದೆ. ಅದು ಸರಳ ರನ್ ಚೇಸಿಂಗ್ ಆಗಿದೆ," ಎಂದು ಕೆವಿನ್ ಪೀಟರ್ಸನ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಬಗ್ಗೆ ಮಾತನಾಡಿದರು.
ಮೆಲ್ಬೋರ್ನ್‌ನಲ್ಲಿ ಪ್ರತಿಕೂಲ ಹವಾಮಾನ ಮುನ್ಸೂಚನೆಯಿಂದಾಗಿ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಇದ್ದು, ಆದರೆ ಪಂದ್ಯ ರದ್ದಾದ ಸಂದರ್ಭದಲ್ಲಿ ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications