For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ-ಪಾಕಿಸ್ತಾನ ಸೆಮಿಫೈನಲ್ ಕಾದಾಟ: ಸಂಭಾವ್ಯ ಪ್ಲೇಯಿಂಗ್ 11, ಪಿಚ್ ರಿಪೋರ್ಟ್‌

 T20 World Cup 2021 2nd semi-final, Pakistan vs Australia Preview, Probable 11, forecast and pitch report

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳು ಮೂರು ವಿಭಾಗದಲ್ಲಿ ಬಲಿಷ್ಠವಾಗಿದ್ದು, ಅಮೋಘ ಫಾರ್ಮ್‌ನಲ್ಲಿ ಕಣಕ್ಕಿಳಿಯಲಿವೆ.

ಗ್ರೂಪ್ 2ರಲ್ಲಿ ಒಂದೂ ಪಂದ್ಯ ಸೋಲದ ಪಾಕಿಸ್ತಾನ 10 ಪಾಯಿಂಟ್ಸ್‌ಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಏಕೈಕ ತಂಡವಾಗಿದೆ. ಅತ್ತ ಆಸ್ಟ್ರೇಲಿಯಾ ಗ್ರೂಪ್ 1ರಲ್ಲಿ ಒಂದು ಪಂದ್ಯ ಸೋಲನ್ನ ಕಂಡಿದ್ದು, ಎಂಟು ಪಾಯಿಂಟ್‌ಗಳೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ನಡೆಯಲಿದ್ದು ಸಂಭಾವ್ಯ ಪ್ಲೇಯಿಂಗ್ ಇಲೆವೆನ್, ಪಿಚ್ ರಿಪೋರ್ಟ್, ತಂಡಗಳ ಬಲಾಬಲ ಈ ಕೆಳಗಿದೆ.

ಪಿಚ್‌ ರಿಪೋರ್ಟ್‌

ಪಿಚ್‌ ರಿಪೋರ್ಟ್‌

ದುಬೈನ ಪಿಚ್ ವಿಶೇಷವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಆರಂಭದಲ್ಲಿ ಸ್ವಿಂಗ್ ಆಗಬಹುದು, ಆದ್ದರಿಂದ ಎರಡೂ ತಂಡದವರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಉತ್ಸುಕರಾಗಿರುತ್ತಾರೆ.

ಇನ್ನು ದುಬೈನಲ್ಲಿಂದು ಬಿಸಿಲಿನ ತಾಪವು ಹೆಚ್ಚಿರಲಿದ್ದು, 26 ರಿಂದ 29 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವಿರಲಿದೆ.

ಪಾಕಿಸ್ತಾನದ ಸಂಭಾವ್ಯ ಪ್ಲೇಯಿಂಗ್ 11

ಪಾಕಿಸ್ತಾನದ ಸಂಭಾವ್ಯ ಪ್ಲೇಯಿಂಗ್ 11

ಮೊಹಮ್ಮದ್ ರಿಜ್ವಾನ್ (wk), ಬಾಬರ್ ಅಜಮ್ (c), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಹಸನ್ ಅಲಿ, ಇಮಾದ್ ವಾಸಿಮ್, ಶಾದಾಬ್ ಖಾನ್, ಹ್ಯಾರಿಸ್ ರೌಫ್ ಮತ್ತು ಶಾಹೀನ್ ಅಫ್ರಿದಿ

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11

ಡೇವಿಡ್ ವಾರ್ನರ್, ಆರನ್ ಫಿಂಚ್ (c), ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (WK), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ ಮತ್ತು ಜೋಶ್ ಹ್ಯಾಜಲ್‌ವುಡ್

ಫಲಿತಾಂಶದ ಅಂದಾಜು

ಫಲಿತಾಂಶದ ಅಂದಾಜು

ವಿಶ್ವಕಪ್ ಆರಂಭದಿಂದಲೂ ಅಜೇಯ ಗೆಲುವಿನ ಓಟ ಮುಂದುವರಿಸುವ ಪಾಕಿಸ್ತಾನ ತಂಡವು ಎರಡನೇ ಸೆಮಿಫೈನಲ್‌ಲ್ಲಿ ಗೆಲುವಿನ ಫೇವರಿಟ್ ತಂಡವಾಗಿದೆ. ಪಾಕ್ ಪಡೆ ಮೂರು ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ. ಈ ಮೂಲಕ ಆಸ್ಟ್ರೇಲಿಯಾವನ್ನು ಸೋಲಿಸುವ ಮತ್ತು ಫೈನಲ್‌ಗೆ ಎಂಟ್ರಿ ಕೊಡುವ ಸಾಮರ್ಥ್ಯ ಹೊಂದಿದೆ.

ಆದರೆ ಪಾಕಿಸ್ತಾನ ತಂಡದಲ್ಲಿ ಇಂದು ಅನುಭವಿ ಶೋಯೆಬ್ ಮಲ್ಲಿಕ್ ಹಾಗೂ ಮೊಹಮ್ಮದ್ ರಿಜ್ವಾನ್ ಆಡುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ ಈ ಇಬ್ಬರು ಆಟಗಾರರು ಟ್ರೈನಿಂಗ್‌ನಲ್ಲಿ ಭಾಗವಹಿಸಿರಲಿಲ್ಲ.

Story first published: Thursday, November 11, 2021, 18:55 [IST]
Other articles published on Nov 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+