ಟಿ20 ವಿಶ್ವಕಪ್ ಫೈನಲ್ 2021 : ಪಿಚ್ ರಿಪೋರ್ಟ್, ಹವಾಮಾನ, ಪಂದ್ಯದ ಪ್ರಿಡಿಕ್ಷನ್
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಸೂಪರ್ ಸಂಡೇಗೆ ಸಾಕ್ಷಿಯಾಗಲಿದೆ. ಭಾನುವಾರ (ನ. 14) ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಚೊಚ್ಚಲ ವಿಶ್ವಕಪ್‌ಗಾಗಿ ಸೆಣಸಾಟ ನಡೆಸಲಿವೆ.
2015 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ಫೈನಲ್‌ನಲ್ಲಿ ಭೇಟಿಯಾದ ನಂತರ ಆಸ್ಟ್ರೇಲಿಯಾವು ಐಸಿಸಿ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸುತ್ತಿರುವುದು ಇದೇ ಮೊದಲು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ಗೆಲುವನ್ನು ಸಾಧಿಸಿತ್ತು. ಆದ್ರೆ ಈ ಬಾರಿ ಆರು ವರ್ಷಗಳ ಬಳಿಕ ಅದೇ ಧಾಟಿಯಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಕಿವೀಸ್ ಬಯಸಿದೆ.
ನ್ಯೂಜಿಲೆಂಡ್ ಈಗಾಗಲೇ 2019ರಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಸ್‌ನಲ್ಲಿ ಇಯಾನ್ ಮಾರ್ಗನ್ ತಂಡವನ್ನು ಸೋಲಿಸಿದಾಗ ತಮ್ಮ 50 ಓವರ್‌ಗಳ ಅಂತಿಮ ಸೋಲಿಗೆ ಸೇಡು ತೀರಿಸಿಕೊಂಡಿದೆ. ಆದ್ದರಿಂದ, ಬ್ಲ್ಯಾಕ್‌ಕ್ಯಾಪ್‌ಗಳು ಆಸೀಸ್‌ನೊಂದಿಗೆ ಮತ್ತೊಂದು ಗೆಲುವನ್ನ ಕಾಣಲು ಬಹಳ ಉತ್ಸುಕಗೊಂಡಿದೆ. ಈ ಪಂದ್ಯ ಪ್ರಾರಂಭಕ್ಕೂ ಮುನ್ನ ದುಬೈನಲ್ಲಿ ಪಿಚ್ ಮತ್ತು ಹವಾಮಾನ ವರದಿಗಳು, ಪಂದ್ಯದ ಮುನ್ಸೂಚನೆ ಮತ್ತು ಟಿ20 ದಾಖಲೆಗಳನ್ನು ಒಳಗೊಂಡಿರುವ ಮಾಹಿತಿ ಈ ಕೆಳಗಿದೆ.

ದುಬೈ್ ಪಿಚ್ ರಿಪೋರ್ಟ್
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟ್ಸ್‌ಮನ್‌ಗೆ ಅನುಕೂಲಕರವಾಗಿದೆ. ವಿಶೇಷವಾಗಿ ಇಬ್ಬನಿಯಿಂದಾಗಿ ಚೇಸಿಂಗ್ ತಂಡಕ್ಕೆ ಹೆಚ್ಚು ನೆರವಾಗಲಿದೆ. ಹೀಗಾಗಿ ಬ್ಯಾಟಿಂಗ್ ಸೆಕೆಂಡ್ ಮಾಡಿದ ತಂಡವೇ ಹೆಚ್ಚು ಪಂದ್ಯಗಳನ್ನ ಗೆದ್ದುಕೊಂಡಿದೆ.
ಇತ್ತೀಚಿನ ಉದಾಹರಣೆಯನ್ನು ನಾವು ನೋಡಿದಾಗ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ 96 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ನಂತರವೂ ಆಸೀಸ್ 170 ರನ್ ಮೀರಿದ ಗುರಿಯನ್ನು ಬೆನ್ನಟ್ಟಿತು. ಅದೂ ಕೂಡ ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದೆ. ಹೀಗಾಗಿ ಯಾವುದೇ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ದುಕೊಳ್ಳುತ್ತದೆ ಮತ್ತು ರನ್ ಚೇಸ್ ಮಾಡಲು ಬಯಸುತ್ತದೆ.

ದುಬೈ ಹವಾಮಾನ
ಭಾನುವಾರದಂದು ದುಬೈ ಹವಾಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಲಿದೆ ಮತ್ತು ರಾತ್ರಿಯಲ್ಲಿ ಇನ್ನೂ ಒಂದೆರಡು ಡಿಗ್ರಿಗಳಷ್ಟು ಇಳಿಯುತ್ತದೆ. ಇನ್ನು ಪಂದ್ಯದ ಸಮಯ. ದುಬೈನಲ್ಲಿನ ಸಾಮಾನ್ಯವಾಗಿ 45 ರಿಂದ 55 ಡಿಗ್ರಿಗಳ ನಡುವೆ ಉಷ್ಣಾಂಶವಿರುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಇಬ್ಬನಿ ಹೆಚ್ಚು ಬೀಳುವುದರಿಂದ ಬೌಲರ್‌ಗಳಿಗೆ ಚಿಂತೆಗೀಡುಮಾಡುತ್ತದೆ.

ಫಲಿತಾಂಶ ಏನಾಗಬಹುದು?
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ಮತ್ತು ವೃತ್ತಿಪರತೆಯನ್ನು ತೋರಿಸಿವೆ. ಸೆಮಿಫೈನಲ್‌ನಲ್ಲಿ ನೆಚ್ಚಿನ ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಉಭಯ ತಂಡಗಳು ಸೋಲಿಸಿವೆ. ಅದ್ರಲ್ಲೂ ಆಸ್ಟ್ರೇಲಿಯಾ ದೊಡ್ಡ ಪಂದ್ಯದ ಅನುಭವದಿಂದಾಗಿ ಕಾಂಗರೂಗಳು ಫೈನಲ್‌ನಲ್ಲಿ ಫೇವರಿಟ್ ಆಗಬಹುದು. ಹೀಗಾಗಿ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್, ಆಸೀಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.
ಪವರ್‌ಫುಲ್ ತಂಡವನ್ನ ಫೈನಲ್‌ನಲ್ಲಿ ಕಣಕ್ಕಿಳಿಸಲು ಯೋಜಿಸಿದೆ ನ್ಯೂಜಿಲೆಂಡ್: ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ

ದುಬೈನ ಟಿ20 ರೆಕಾರ್ಡ್ಸ್
ಒಟ್ಟು ಪಂದ್ಯಗಳು: 73
ಮೊದಲು ಬ್ಯಾಟಿಂಗ್ ಮಾಡಿದ ತಂಡ : 34 ಗೆಲುವು
ಎರಡನೇ ಬ್ಯಾಟಿಂಗ್ ಮಾಡಿದ ತಂಡ: 38 ಗೆಲುವು
ಮೊದಲ ಇನ್ನಿಂಗ್ಸ್ ಸರಾಸರಿ ರನ್: 141
ಎರಡನೇ ಇನ್ನಿಂಗ್ಸ್ ಸರಾಸರಿ ರನ್: 123
ಗರಿಷ್ಠ ಸ್ಕೋರ್: 211/3 (20 ಓವರ್) (ಶ್ರೀಲಂಕಾ ವರ್ಸಸ್ ಪಾಕಿಸ್ತಾನ)
ಕನಿಷ್ಠ ಸ್ಕೋರ್ : 55/10 (14.2 ಓವರ್) (ವೆಸ್ಟ್ ಇಂಡೀಸ್ ವರ್ಸಸ್ ಇಂಗ್ಲೆಂಡ್)
ಚೇಸ್ ಮಾಡಿದ ಗರಿಷ್ಠ ಸ್ಕೋರ್: 183/5 (19.5 ಓವರ್) (ಅಫ್ಘಾನಿಸ್ತಾನ ವರ್ಸಸ್ ಯುಎಇ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications