ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಮುಕ್ತಾಯದ ನಂತರ ಪಾಕ್ ಸೇಫ್, ಈ ಬಲಿಷ್ಠ ತಂಡಗಳಿಗೆ ಹೆಚ್ಚಾಯ್ತು ಕಷ್ಟ!

ಕಳೆದ ಭಾನುವಾರದಿಂದ ( ಅಕ್ಟೋಬರ್ 17 ) ಆರಂಭವಾಗಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತು ಮುಕ್ತಾಯವಾಗಿದ್ದು ಇಂದಿನಿಂದ ( ಅಕ್ಟೋಬರ್ 23 ) ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುತ್ತಿವೆ. ಅಕ್ಟೋಬರ್ 17ರಿಂದ ಅಕ್ಟೋಬರ್ 22ರವರೆಗೂ ನಡೆದ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್, ಬಾಂಗ್ಲಾದೇಶ, ಒಮನ್, ಪಪುವಾ ನ್ಯೂ ಗಿನಿಯಾ, ಶ್ರೀಲಂಕಾ, ನಮೀಬಿಯಾ, ಐರ್ಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳು ತಲಾ 3 ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ಈ 8 ತಂಡಗಳ ಪೈಕಿ 4 ತಂಡಗಳು ಸೂಪರ್ 12 ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿವೆ.
ಅರ್ಹತಾ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳಾದ ಸ್ಕಾಟ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದು ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಗ್ರೂಪ್ 2ಗೆ ಸೇರ್ಪಡೆಗೊಂಡಿದ್ದರೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಗ್ರೂಪ್ 1ಗೆ ಸೇರ್ಪಡೆಯಾಗಿವೆ.
ಹೀಗೆ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡಗಳು ಸೂಪರ್ 12 ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡ ನಂತರ ಲೀಗ್ ಪಂದ್ಯಗಳ ಗುಂಪುಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಈ ಬದಲಾವಣೆ ಒಂದು ಗುಂಪಿಗೆ ಅನುಕೂಲವಾದರೆ ಮತ್ತೊಂದು ಗುಂಪಿಗೆ ಕೊಂಚ ಹಿನ್ನಡೆ ತಂದೊಡ್ಡಿದೆ. ಹಾಗಿದ್ದರೆ ಅರ್ಹತಾ ಸುತ್ತು ಮುಗಿದ ನಂತರ ಸೂಪರ್ 12 ಹಂತದ ಯಾವ ಗುಂಪುಗಳಲ್ಲಿ ಯಾವ ತಂಡಗಳು ಸ್ಥಾನ ಪಡೆದುಕೊಂಡಿವೆ, ಇದರಿಂದ ಯಾವ ಗುಂಪುಗಳಿಗೆ ಅನುಕೂಲ ಹಾಗೂ ಯಾವ ಗುಂಪಿಗೆ ಅನಾನುಕೂಲ ಮತ್ತು ಸೂಪರ್ 12 ಸುತ್ತಿನಲ್ಲಿ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಹೇಗಿದೆ ಎಂಬುದು ಮುಂದೆ ಇದೆ ಓದಿ..

ಅರ್ಹತಾ ಸುತ್ತಿನ ಮುಕ್ತಾಯದ ನಂತರ ಸೂಪರ್ 12 ಗುಂಪುಗಳು ಹೀಗಿವೆ
ಅರ್ಹತಾ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳಾದ ಸ್ಕಾಟ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡ ನಂತರ ಸೂಪರ್ 12 ಹಂತದ ಗುಂಪುಗಳು ಹೀಗಿವೆ.
ಗ್ರೂಪ್ 1:
1. ವೆಸ್ಟ್ ಇಂಡೀಸ್
2. ಬಾಂಗ್ಲಾದೇಶ ( ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡು 3. ಸೂಪರ್ 12 ಹಂತ ಪ್ರವೇಶಿಸಿದ ತಂಡ )
4. ಇಂಗ್ಲೆಂಡ್
5. ಸೌತ್ ಆಫ್ರಿಕಾ
ಆಸ್ಟ್ರೇಲಿಯಾ
6. ಶ್ರೀಲಂಕಾ ( ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡು ಸೂಪರ್ 12 ಹಂತ ಪ್ರವೇಶಿಸಿದ ತಂಡ )
ಗ್ರೂಪ್ 2:
1. ಅಫ್ಘಾನಿಸ್ತಾನ
2. ಭಾರತ
3. ಸ್ಕಾಟ್ಲೆಂಡ್ ( ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡು ಸೂಪರ್ 12 ಹಂತ ಪ್ರವೇಶಿಸಿದ ತಂಡ )
4. ಪಾಕಿಸ್ತಾನ
5. ನ್ಯೂಜಿಲೆಂಡ್
6. ನಮೀಬಿಯಾ ( ಮೊದಲ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡು ಸೂಪರ್ 12 ಹಂತ ಪ್ರವೇಶಿಸಿದ ತಂಡ )

ಯಾವ ಗುಂಪಿಗೆ ಹೆಚ್ಚು ಅನುಕೂಲ?
ಅರ್ಹತಾ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಗ್ರೂಪ್ 2ಗೆ ಸೇರ್ಪಡೆಗೊಂಡಿದ್ದು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಗ್ರೂಪ್ 1ಗೆ ಸೇರ್ಪಡೆಯಾಗಿವೆ. ಈ ಸೇರ್ಪಡೆಯಿಂದ ಗ್ರೂಪ್ 1ಕ್ಕಿಂತ ಗ್ರೂಪ್ 2ಗೆ ಹೆಚ್ಚು ಅನುಕೂಲ ಎಂದು ಹೇಳಬಹುದು. ಗ್ರೂಪ್ 2ಗೆ ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಸೇರಿಕೊಂಡಿರುವುದರಿಂದ ಉಳಿದ ತಂಡಗಳಾದ ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಹೆಚ್ಚೇನು ಒತ್ತಡ ಬೀಳುವುದಿಲ್ಲ. ಆದರೆ ಗ್ರೂಪ್ 1ಗೆ ಕ್ರಿಕೆಟ್‍ನಲ್ಲಿ ಪೈಪೋಟಿ ನೀಡಬಹುದಾದಂತಹ ನುರಿತ ತಂಡಗಳಾಗಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪ್ರವೇಶ ಪಡೆದುಕೊಂಡಿರುವುದು ಇದೀಗ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳಿಗೆ ಒತ್ತಡವನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು.

ಸೂಪರ್ 12 ಸುತ್ತಿನಲ್ಲಿ ಭಾರತದ ಪಂದ್ಯಗಳು
1. ಭಾರತ vs ಪಾಕಿಸ್ತಾನ - ಅಕ್ಟೋಬರ್ 24
2. ಭಾರತ vs ನ್ಯೂಜಿಲೆಂಡ್ - ಅಕ್ಟೋಬರ್ 31
3. ಭಾರತ vs ಅಫ್ಘಾನಿಸ್ತಾನ - ನವೆಂಬರ್ 3
4. ಭಾರತ vs ಸ್ಕಾಟ್ಲೆಂಡ್ - ನವೆಂಬರ್ 5
5. ಭಾರತ vs ನಮೀಬಿಯಾ - ನವೆಂಬರ್ 8
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications