T20 World Cup: ವೆಸ್ಟ್ ಇಂಡೀಸ್ ಔಟ್, ಶ್ರೀಲಂಕಾ ಇನ್; ಸೂಪರ್ 12 ಹಂತಕ್ಕೆ ಅರ್ಹತೆ ಪಡೆದ 4 ತಂಡಗಳು

ಟಿ20 ವಿಶ್ವಕಪ್ 2022ರ ಅರ್ಹತಾ ಪಂದ್ಯಗಳು ಎಲ್ಲರ ನಿರೀಕ್ಷೆಯನ್ನು ಮೀರಿ ನಡೆದವು. ಏಕೆಂದರೆ ರೌಂಡ್ 1 ಹಂತವು ಕಳೆದ ಒಂದು ವಾರದಲ್ಲಿ ಸಾಕಷ್ಟು ಥ್ರಿಲ್ ಮತ್ತು ಆಶ್ಚರ್ಯಕರ ಫಲಿತಾಂಶಗಳನ್ನು ನೀಡಿದೆ.
ಸೂಪರ್ 12ರಲ್ಲಿ 4 ಸ್ಥಾನಗಳಿಗಾಗಿ 8 ತಂಡಗಳು ಸೆಣಸಾಡಿದವು ಮತ್ತು ಆಶ್ಚರ್ಯಕರ ಮತ್ತು ಅದ್ಭುತ ಪ್ರದರ್ಶನಗಳಿಗೇನು ಕೊರತೆಯಿರಲಿಲ್ಲ. ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಣಸಾಟದ ಮೂಲಕ ಪ್ರಾರಂಭವಾಗಲಿವೆ.
ರೌಂಡ್ 1ರಲ್ಲಿ 12 ಪಂದ್ಯಗಳ ಕೊನೆಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಟೂರ್ನಿಯಿಂದಲೇ ಹೊರಗಟ್ಟಲಾಗಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಕೆರಿಬಿಯನ್ ಪ್ರಾಬಲ್ಯವನ್ನು ಕೊನೆಗೊಳಿಸಿದಂತಾಯಿತು. ಶುಕ್ರವಾರ ಹೋಬಾರ್ಟ್‌ನಲ್ಲಿ ನಡೆದ ತಮ್ಮ ಅಂತಿಮ ಸುತ್ತಿನ 1 ಪಂದ್ಯದಲ್ಲಿ ಸೋತ ನಂತರ ನಿಕೋಲಸ್ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ಹೊರಬಿತ್ತು.

ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ ತಂಡ ಸೋಲಿಸಿತ್ತು
ಗಮನಾರ್ಹವಾದ ಅಂಶವೆಂದರೆ, ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ ತಂಡ ಸೋಲಿಸಿತ್ತು ಮತ್ತು ರೌಂಡ್ 1ರ ಬಿ ಗುಂಪಿನಲ್ಲಿ ಅವರ ಏಕೈಕ ಗೆಲುವು ಜಿಂಬಾಬ್ವೆ ವಿರುದ್ಧ ಬಂದಿತ್ತು.
ಅಂತಿಮವಾಗಿ, ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳು ಬಿ ಗುಂಪಿನಿಂದ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದವು. ಐರ್ಲೆಂಡ್ ಎರಡನೇ ಸ್ಥಾನವನ್ನು ಗಳಿಸಿದರೆ, ಜಿಂಬಾಬ್ವೆ ತಂಡವು ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ವಿರುದ್ಧ ಆರಾಮದಾಯಕ ವಿಜಯಗಳ ನಂತರ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಜಿಂಬಾಬ್ವೆ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಸುತ್ತಿಗೆ ಮುನ್ನಡೆದಿದೆ.

ಶ್ರೀಲಂಕಾ ತಂಡವು ಸೂಪರ್ 12ಗೆ ಅರ್ಹತೆ ಪಡೆಯಿತು
ಮತ್ತೊಂದೆಡೆ, 2022ರ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ತಂಡವು ಸೂಪರ್ 12ಗೆ ಅರ್ಹತೆ ಪಡೆಯಲು ಕಷ್ಟಪಡಬೇಕಾಯಿತು. ನಮೀಬಿಯಾ ವಿರುದ್ಧ ಆಘಾತಕಾರಿ ಸೋಲಿನಿಂದ ಹಿನ್ನಡೆ ಕಂಡ ಕಾರಣ ರೌಂಡ್ 1ರ ಗುಂಪು ಎ ಕೂಡ ಸಾಕಷ್ಟು ಏರಿಳಿತಗಳನ್ನು ಕಂಡಿತು. ಇನ್ನು ಕಳೆದ ದಿನದಂದು ನಮೀಬಿಯಾ ವಿರುದ್ಧ ಯುಎಇ ಗೆಲುವು ಸಾಧಿಸಿದ್ದು, ನೆದರ್ಲೆಂಡ್ಸ್ ತಂಡವು ಎ ಗುಂಪಿನಿಂದ ಶ್ರೀಲಂಕಾದೊಂದಿಗೆ ಸೂಪರ್ 12ಗೆ ಅರ್ಹತೆ ಪಡೆಯಿತು.
ಗ್ರೂಪ್ ಎ ವಿಜೇತ ಶ್ರೀಲಂಕಾ ಮತ್ತು ಗ್ರೂಪ್ ಬಿ ರನ್ನರ್-ಅಪ್ ಐರ್ಲೆಂಡ್ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳನ್ನು ಹೊಂದಿರುವ ಸೂಪರ್ 12ರ ಗುಂಪು 1ಕ್ಕೆ ಸೇರಿಕೊಂಡವು.
ಗ್ರೂಪ್ ಬಿ ವಿಜೇತ ಜಿಂಬಾಬ್ವೆ ಮತ್ತು ಗ್ರೂಪ್ ಎ ರನ್ನರ್-ಅಪ್ ನೆದರ್ಲ್ಯಾಂಡ್ಸ್ ತಂಡಗಳು ಸೂಪರ್ 12ರ ಗ್ರೂಪ್ 2ರಲ್ಲಿ ಸ್ಥಾನ ಪಡೆದವು. ಇಲ್ಲಿ ಮಾಜಿ ಚಾಂಪಿಯನ್‌ಗಳಾದ ಭಾರತ ಮತ್ತು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.

ಸೂಪರ್ 12 ಅಂತಿಮ ತಂಡಗಳು
ಗುಂಪು 1: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ಐರ್ಲೆಂಡ್
ಗುಂಪು 2: ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಜಿಂಬಾಬ್ವೆ, ನೆದರ್ಲ್ಯಾಂಡ್ಸ್
ನವೆಂಬರ್ 6ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ತಮ್ಮ ಅಂತಿಮ ಸೂಪರ್ 12 ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸುವ ಮೊದಲು ಏಷ್ಯಾದ ದೈತ್ಯ ಭಾರತ ತಂಡ ಅಕ್ಟೋಬರ್ 27ರಂದು ಸಿಡ್ನಿಯಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿರುವ ಕಾರಣ ಭಾರತದ ಅಂತಿಮ ಪಂದ್ಯಗಳನ್ನು ಶುಕ್ರವಾರ ಖಚಿತಪಡಿಸಲಾಯಿತು. ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications