Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Aus vs Afg : T20 ವಿಶ್ವಕಪ್‌: ಗೆಲ್ಲಲೇಬೇಕಾದ ಪಂದ್ಯದಲ್ಲಿ ಫಿಂಚ್ ಇಲ್ಲ, ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್

Afghanistan vs Australia

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಸೆಮಿಫೈನಲ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ನಾಯಕ ಆ್ಯರೋನ್ ಫಿಂಚ್ ಅಲಭ್ಯರಾಗಿದ್ದಾರೆ.

ಹ್ಯಾಮ್‌ಸ್ಟ್ರಿಂಗ್ ಇಂಜ್ಯುರಿಯಿಂದಾಗಿ ಆ್ಯರೋನ್ ಫಿಂಚ್ ಪ್ರಮುಖ ಪಂದ್ಯಕ್ಕೆ ಮಿಸ್ ಆಗಿದ್ದು, ಸ್ಫೋಟಕ ಬ್ಯಾಟರ್ ಕ್ಯಾಮರೂನ್ ಗ್ರೀನ್‌ಗೆ ಅವಕಾಶ ನೀಡಲಾಗಿದೆ. ಜೊತೆಗೆ ಸ್ಟೀವನ್ ಸ್ಮಿತ್, ಕೇನ್‌ ರಿಚರ್ಡ್ಸನ್‌ ತಂಡಕ್ಕೆ ಇನ್ ಆಗಿದ್ದು, ಮಿಚೆಲ್‌ ಸ್ಟಾರ್ಕ್‌ ತಂಡದಿಂದ ಹೊರಬಿದ್ದಿದ್ದಾರೆ.

ಶ್ರೀಲಂಕಾ ವಿರುದ್ಧ ಕಳೆದ ಪಂದ್ಯದಲ್ಲಿ ಸೋತಿರುವ ಅಫ್ಘಾನಿಸ್ತಾನದ ಸೆಮಿಫೈನಲ್ ಪ್ರವೇಶವು ಈಗಾಗಲೇ ಅಂತ್ಯಗೊಂಡಿದ್ದು, ಗೆಲುವಿನ ಮೂಲಕ ವಿಶ್ವಕಪ್‌ಗೆ ವಿದಾಯ ಹೇಳಲು ಬಯಸಿದೆ.

ಇಂಗ್ಲೆಂಡ್ ಗೆಲುವಿನ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮಿಫೈನಲ್ ಹಾದಿ ಕಠಿಣಗೊಂಡಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ತಂಡದಷ್ಟೇ ಪಾಯಿಂಟ್ಸ್ ಹೊಂದಿರುವ ಆಸ್ಟ್ರೇಲಿಯಾ ನೆಟ್‌ ರನ್‌ರೇಟ್‌ -0.304 ಹೊಂದಿರುವ ಕಾರಣ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರೀ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗೆ ಕಾಣಬಹುದು

ಆಸ್ಟ್ರೇಲಿಯಾ: ಕ್ಯಾಮರೂನ್ ಗ್ರೀನ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್(ನಾಯಕ ಮತ್ತು ವಿಕೆಟ್ ಕೀಪರ್) ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಬೆಂಚ್: ಆಷ್ಟನ್ ಅಗರ್, ಆ್ಯರೋನ್ ಫಿಂಚ್, ಟಿಮ್ ಡೇವಿಡ್, ಮಿಚೆಲ್ ಸ್ಟಾರ್ಕ್

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಉಸ್ಮಾನ್ ಘನಿ, ಇಬ್ರಾಹಿಂ ಝದ್ರಾನ್, ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ(ನಾಯಕ), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ

ಬೆಂಚ್: ಮೊಹಮ್ಮದ್ ಸಲೀಮ್ ಸಫಿ, ಕೈಸ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್

Story first published: Friday, November 4, 2022, 13:47 [IST]
Other articles published on Nov 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+