Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ತತ್ತರಿಸಿದ ಕಾಂಗರೂ, ಅಫ್ಘಾನಿಸ್ತಾನಕ್ಕೆ 169ರನ್‌ ಟಾರ್ಗೆಟ್

Australia

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ 20 ಓವರ್‌ಗಳ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿದ್ದು, ಅಫ್ಘಾನಿಸ್ತಾನ ಗೆಲುವಿಗೆ 169ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ನೀಡುವ ಮುನ್ಸೂಚನೆ ನೀಡಿತಾದ್ರೂ ಮತ್ತದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಕ್ಯಾಮರೂನ್ ಗ್ರೀನ್ 3 ರನ್‌ಗಳಿಸಿ ಔಟಾದರು.

ಇದ್ರ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ಡೇವಿಡ್ ವಾರ್ನರ್‌, ಕೆಟ್ಟ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್ ಸೇರಿಕೊಂಡರು. ಸ್ವಿಚ್ ಹಿಟ್ ಹೊಡೆಯಲು ಹೋಗಿ ಡೇವಿಡ್ ವಾರ್ನರ್ 25ರನ್‌ಗೆ ವಿಕೆಟ್ ಒಪ್ಪಿಸಿದ್ರು. ಸ್ಟೀವನ್ ಸ್ಮಿತ್ 4ರನ್‌ಗೆ ಔದಾದ ಪರಿಣಾಮ ಪವರ್‌ಪ್ಲೇ ಓವರ್‌ಗಳಲ್ಲಿ, 6 ಓವರ್ ಮುಕ್ತಾಯಕ್ಕೆ ಆಸಿಸ್ 3 ವಿಕೆಟ್ ನಷ್ಟಕ್ಕೆ 54ರನ್ ಕಲೆಹಾಕಿತು.

ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸಿಸ್ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಧಾರವಾದ್ರು. 29 ಎಸೆತಗಳಲ್ಲಿ 50ರನ್ ಕಲೆಹಾಕಿದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದರು. ಅಫ್ಘಾನಿಸ್ತಾನದ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿದ್ದು, ಅಫ್ಘಾನಿಸ್ತಾನ ಗೆಲುವಿಗೆ 169ರನ್ ಗುರಿ ನೀಡಿದೆ.

ಆಸ್ಟ್ರೇಲಿಯಾ ಪರ ಮ್ಯಾಕ್ಸಿ ಅಜೇಯ 32 ಎಸೆತಗಳಲ್ಲಿ ಅಜೇಯ 54 ರನ್ ಕಲೆಹಾಕಿದ್ದು, ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿವೆ.

ಅಫ್ಘಾನಿಸ್ತಾನ ಪರ ನವೀನ್ ಉಲ್ ಹಕ್ 3, ಫಜಲಕ್ ಫಾರೂಕಿ 2, ಮುಜೀಬ್ ಉರ್ ರಹಮಾನ್ ಹಾಗೂ ರಶೀದ್ ಖಾನ್‌ಗೆ ತಲಾ 1 ವಿಕೆಟ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗೆ ಕಾಣಬಹುದು

ಆಸ್ಟ್ರೇಲಿಯಾ: ಕ್ಯಾಮರೂನ್ ಗ್ರೀನ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್(ನಾಯಕ ಮತ್ತು ವಿಕೆಟ್ ಕೀಪರ್) ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಬೆಂಚ್: ಆಷ್ಟನ್ ಅಗರ್, ಆ್ಯರೋನ್ ಫಿಂಚ್, ಟಿಮ್ ಡೇವಿಡ್, ಮಿಚೆಲ್ ಸ್ಟಾರ್ಕ್

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಉಸ್ಮಾನ್ ಘನಿ, ಇಬ್ರಾಹಿಂ ಝದ್ರಾನ್, ಗುಲ್ಬದಿನ್ ನೈಬ್, ದರ್ವಿಶ್ ರಸೂಲಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ(ನಾಯಕ), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ

ಬೆಂಚ್: ಮೊಹಮ್ಮದ್ ಸಲೀಮ್ ಸಫಿ, ಕೈಸ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್

Story first published: Friday, November 4, 2022, 15:34 [IST]
Other articles published on Nov 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+