IND vs PAK: ಸರಿಯಾಗಿ 364 ದಿನಗಳ ಬಳಿಕ ಭಾರತ ವಿರುದ್ಧ ಮಂಕಾದ ದುಬೈ ಹೀರೋಗಳು

ದುಬೈನಲ್ಲಿ ನಡೆದಿದ್ದ 2021ರ ವಿಶ್ವಕಪ್ ಲೀಗ್ ಪಂದ್ಯದ ವೇಳೆ ಭಾರತ ತಂಡದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಐತಿಹಾಸಿಕ ಗೆಲುವಿನಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಬಹುಮುಖ್ಯ ಪಾತ್ರ ವಹಿಸಿತ್ತು.
ಆ ಐತಿಹಾಸಿಕ ಪ್ರದರ್ಶನ ನೀಡಿದ 364 ದಿನಗಳ ನಂತರ, ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ವಿರುದ್ಧದ ಹೈ-ವೋಲ್ಟೇಜ್ ಟಿ20 ವಿಶ್ವಕಪ್ 2022 ಪಂದ್ಯದಲ್ಲಿ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್‌ರ ಪಾಕಿಸ್ತಾನ ಸ್ಟಾರ್ ಆರಂಭಿಕ ಜೋಡಿ ವಿಫಲವಾಯಿತು.
ಸರಿಯಾಗಿ 364 ದಿನಗಳ ಹಿಂದೆ, ಬಾಬರ್ ಮತ್ತು ರಿಜ್ವಾನ್ ಅಜೇಯ ಅರ್ಧಶತಕಗಳನ್ನು ಬಾರಿಸಿ 150 ಪ್ಲಸ್ ಆರಂಭಿಕ ಜೊತೆಯಾಟವನ್ನು ನೀಡಿ, ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಲು ಸಹಾಯ ಮಾಡಿದರು. ಅಕ್ಟೋಬರ್ 24, 2021ರಂದು ಟಿ20 ವಿಶ್ವಕಪ್‌ನಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಪಾಕಿಸ್ತಾನ ತಮ್ಮ ಮೊದಲ ಜಯವನ್ನು ದಾಖಲಿಸಿದರು.

ಮೆಲ್ಬೋರ್ನ್‌ನಲ್ಲಿ ವಿಫಲವಾದ ಪಾಕಿಸ್ತಾನದ ಆರಂಭಿಕ ಜೋಡಿ
ಆದಾಗ್ಯೂ, ಮೆಲ್ಬೋರ್ನ್‌ನಲ್ಲಿ ಭಾರತದ ವಿರುದ್ಧ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನದ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಸಾಧನೆಯನ್ನು ಪುನರಾವರ್ತಿಸಲು ವಿಫಲರಾದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮೊದಲು ಬೌಲಿಂಗ್ ಮಾಡುವ ನಿರ್ಧಾರವು ತಂಡಕ್ಕೆ ಲಾಭ ತಂದುಕೊಟ್ಟಿತು. ಭುವನೇಶ್ವರ್ ಕುಮಾರ್ ಮತ್ತು ಅರ್ಶ್‌ದೀಪ್ ಸಿಂಗ್ ಅವರು ಚೆಂಡನ್ನು ಸ್ವಿಂಗ್ ಮಾಡುತ್ತಿದ್ದರು. ಬಾಬರ್ ಅಜಂ (0) ಮತ್ತು ಮೊಹಮ್ಮದ್ ರಿಜ್ವಾನ್ (4) ಇಬ್ಬರನ್ನೂ ಕಡಿಮೆ ರನ್‌ಗೆ ಔಟ್ ಮಾಡುವಲ್ಲಿ ಅರ್ಶ್‌ದೀಪ್ ಸಿಂಗ್ ಯಶಸ್ವಿಯಾದರು.

ಬಾಬರ್ ಅಜಂ, ರಿಜ್ವಾನ್‌ರನ್ನು ಔಟ್ ಮಾಡಿದ ಅರ್ಶ್‌ದೀಪ್ ಸಿಂಗ್
ಭಾನುವಾರ ನಡೆದ ಟಿ20 ವಿಶ್ವಕಪ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಶ್‌ದೀಪ್ ಸಿಂಗ್ ಬಾಬರ್ ಅಜಂ ಅವರನ್ನು ಔಟ್ ಮಾಡಿದರು. ಇನ್‌ಸ್ವಿಂಗ್ ಮೂಲಕ ಎಲ್‌ಬಿಡಬ್ಲ್ಯೂ ಮಾಡಿದರು. ನಂತರ ನಾಲ್ಕನೇ ಓವರ್ ಎಸೆದ ಅರ್ಶ್‌ದೀಪ್ ಅವರು ಹಾಕಿದ ಶಾರ್ಟ್ ಬಾಲ್ ಅನ್ನು ಮೊಹಮ್ಮದ್ ರಿಜ್ವಾನ್ ಹೊಡೆದರು. ಅದನ್ನು ಫೈನ್ ಲೆಗ್‌ನಲ್ಲಿ ಮೊಹ್ಮದ್ ಶಮಿ ಕ್ಯಾಚ್ ಪಡೆದರು.
ಭಾರತ ತಂಡವು ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸಿದ್ದು, ಯುಜ್ವೇಂದ್ರ ಚಹಾಲ್ ಅವರನ್ನು ಬೆಂಚ್ ಕಾಯಿಸಿದೆ. ರಿಷಭ್ ಪಂತ್ ಬದಲು ಆಡುವ ಹನ್ನೊಂದರ ಬಳಗದಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಮೊಹಮ್ಮದ್ ಶಮಿ 2021ರ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ಭಾರತದ ಟಿ20 ತಂಡಕ್ಕೆ ಮರಳಿದರು, ಹೀಗಾಗಿ ಹರ್ಷಲ್ ಪಟೇಲ್ ಅವರಿಗೆ ಅವಕಾಶ ತಪ್ಪಿತು.

ಭಾರತ vs ಪಾಕಿಸ್ತಾನ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಶ್‌ದೀಪ್ ಸಿಂಗ್
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications