PAK vs ZIM: ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲು; ತಂಡದ ಬ್ಯಾಟಿಂಗ್ ವಿರುದ್ಧ ಸಿಟ್ಟಿಗೆದ್ದ ಪಾಕ್ ನಾಯಕ

ಗುರುವಾರ ಪರ್ತ್‌ನಲ್ಲಿ ನಡೆದ ಎರಡನೇ ಗ್ರೂಪ್ 2 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಒಂದು ರನ್‌ನಿಂದ ಅಘಾತಕಾರಿ ಸೋಲು ಅನುಭವಿಸಿತು. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ನಂತರ ಇದು ಸತತ ಎರಡನೇ ಸೋಲಾಗಿದ್ದು, ನಾಕೌಟ್ ಹಂತ ಪ್ರವೇಶಿಸಬೇಕೆಂದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.
ಜಿಂಬಾಬ್ವೆ ವಿರುದ್ಧದ ಸೋಲು ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, 131 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವ ನಿರೀಕ್ಷೆಯಿತ್ತು. ಆದಾಗ್ಯೂ, ಶಾನ್ ಮಸೂದ್ (44) ಹೊರತುಪಡಿಸಿ ಅವರ ಯಾವುದೇ ಬ್ಯಾಟರ್‌ಗಳು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ನಾಯಕ ಬಾಬರ್ ಅಜಂ(4) ಮತ್ತು ಮೊಹಮ್ಮದ್ ರಿಜ್ವಾನ್ (14) ಅಗ್ರಕ್ರಮಾಂಕದಲ್ಲಿ ಮತ್ತೊಮ್ಮೆ ವಿಫಲವಾದ ಕಾರಣ ಪಾಕಿಸ್ತಾನ ತತ್ತರಿಸಿತು. ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋದ ಪಾಕಿಸ್ತಾನ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.

ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಹಿಂತಿರುಗುತ್ತೇವೆ
"ನನ್ನ ತಂಡದಿಂದ ಅತ್ಯಂತ ನಿರಾಶಾದಾಯಕ ಪ್ರದರ್ಶನ ಬಂದಿದೆ. ನಾವು ಬ್ಯಾಟಿಂಗ್‌ನಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಲಿಲ್ಲ. ನಾವು ಮೊದಲ ಆರು ಓವರ್‌ಗಳಲ್ಲಿ ಕೆಟ್ಟ ಆರಂಭವನ್ನು ಹೊಂದಿದ್ದೇವೆ, ಆದರೆ ಶಾದಾಬ್ ಮತ್ತು ಶಾನ್ ಮಸೂದ್ ಉತ್ತಮ ಜೊತೆಯಾಟವನ್ನು ನಿರ್ಮಿಸಿದರು. ಆದರೆ ದುರದೃಷ್ಟವಶಾತ್ ಶಾದಾಬ್ ಔಟಾದರು. ನಂತರದ ಬ್ಯಾಟಿಂಗ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳು ಬಿದ್ದಿದ್ದರಿಂದ ಒತ್ತಡ ನಿರ್ಮಾಣವಾಯಿತು," ಪಂದ್ಯದ ನಂತರದ ಕಾಮೆಂಟರಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದರು.
"ಮೊದಲ ಆರು ಓವರ್‌ಗಳಲ್ಲಿ ನಾವು ಹೊಸ ಚೆಂಡನ್ನು ಚೆನ್ನಾಗಿ ಬಳಸುತ್ತಿಲ್ಲ. ನಂತರ ನಾವು ಚೆನ್ನಾಗಿ ಮುಗಿಸಿದ್ದೇವೆ. ನಾವು ಒಟ್ಟಿಗೆ ಕುಳಿತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಹಿಂತಿರುಗುತ್ತೇವೆ," ಎಂದರು.

ಜಿಂಬಾಬ್ವೆ ಎಂಟು ವಿಕೆಟ್ ನಷ್ಟಕ್ಕೆ 130 ರನ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ಎಂಟು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಪಾಕಿಸ್ತಾನ ಪರ ಶಾನ್ ಮಸೂದ್ 38 ಎಸೆತಗಳಲ್ಲಿ 44 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಆದರೆ ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ ಅಗತ್ಯವಿದ್ದ ಮೂರು ರನ್ ಗಳಿಸಲು ಪಾಕಿಸ್ತಾನ ವಿಫಲವಾಯಿತು. ಜಿಂಬಾಬ್ವೆ ಪರ ಸಿಕಂದರ್ ರಜಾ 3/25 ರೊಂದಿಗೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರೆ, ಬ್ರಾಡ್ ಇವಾನ್ಸ್ 25 ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಇನ್ನು ಜಿಂಬಾಬ್ವೆಯ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಸೀನ್ ವಿಲಿಯಮ್ಸ್ 28 ಎಸೆತಗಳಲ್ಲಿ 31 ರನ್ ಗಳಿಸಿ ಜಿಂಬಾಬ್ವೆ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೆಲವು ಜಿಂಬಾಬ್ವೆ ಬ್ಯಾಟರ್‌ಗಳು ಆರಂಭವನ್ನು ಪಡೆದರು, ಆದರೆ ಅವುಗಳನ್ನು ಗಣನೀಯ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌ಗಳು:
ಮೊಹಮ್ಮದ್ ವಾಸಿಮ್ ಪಾಕಿಸ್ತಾನಕ್ಕೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು, ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 24 ರನ್ ನೀಡಿ 4 ವಿಕೆಟ್ ಪಡೆದು ಉತ್ತಮ ಅಂಕಿಅಂಶಗಳೊಂದಿಗೆ ಮರಳಿದರು. ಲೆಗ್-ಸ್ಪಿನ್ನರ್ ಶಾದಾಬ್ ಖಾನ್ ಅವರು ಚೆಂಡನ್ನು ಉತ್ತಮವಾಗಿ ನಿಭಾಯಿಸಿದರು ಮತ್ತು ಅವರ ನಾಲ್ಕು ಓವರ್‌ಗಳ ಕೋಟಾದಲ್ಲಿ 3/23 ಅಂಕಿಅಂಶ ದಾಖಲಿಸಿದರು.
ಜಿಂಬಾಬ್ವೆ: 20 ಓವರ್‌ಗಳಲ್ಲಿ 130/8 (ಸೀನ್ ವಿಲಿಯಮ್ಸ್ 31; ಶಾದಾಬ್ ಖಾನ್ 3/23, ಮೊಹಮ್ಮದ್ ವಾಸಿಮ್ 4/24).
ಪಾಕಿಸ್ತಾನ: 20 ಓವರ್‌ಗಳಲ್ಲಿ 129/8 (ಶಾನ್ ಮಸೂದ್ 44; ಸಿಕಂದರ್ ರಜಾ 3/25, ಬ್ರಾಡ್ ಇವಾನ್ಸ್ 2/25).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications