Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 ವಿಶ್ವಕಪ್‌: ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದ ಡಾರ್ಕ್ ಹಾರ್ಸ್ ನ್ಯೂಜಿಲೆಂಡ್

New zealand

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ವಿಶ್ವಕಪ್‌ನ ಡಾರ್ಕ್‌ ಹಾರ್ಸ್ ಎಂದೇ ಗುರುತಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಗ್ರೂಪ್ 1ರಿಂದ ಸೆಮೀಸ್ ಪ್ರವೇಶಿಸಿದೆ.

ನ್ಯೂಜಿಲೆಂಡ್ ನೀಡಿದ್ದ 186ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 150 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಐರಿಷ್ ತಂಡವು ಉತ್ತಮ ಆರಂಭ ಪಡೆಯಿತಾದ್ರೂ, ಓಪನರ್‌ಗಳ ಪತನದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದ ಪರಿಣಾಮ ಕಿವೀಸ್ ತಂಡವು 35 ರನ್‌ಗಳಿಂದ ಪಂದ್ಯವನ್ನು ಜಯಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಪರ ಫಿನ್ ಅಲೆನ್ 32, ಡೆವೊನ್ ಕಾನ್ವೆ 28, ನಾಯಕ ಕೇನ್ ವಿಲಿಯಮ್ಸನ್ 61, ಗ್ಲೆನ್ ಫಿಲಿಪ್ಸ್ 17, ಡೆರಿಲ್ ಮಿಚೆಲ್ ಅಜೇಯ 31ರನ್‌ಗಳ ನೆರವಿನಿಂದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿತು.

ಕೇನ್ ವಿಲಿಯಮ್ಸನ್ 34 ಎಸೆತಗಳಲ್ಲಿ 64 ರನ್ ಕಲೆಹಾಕಿ, ತಂಡವನ್ನು 200ರ ಗಡಿ ಮುಟ್ಟಿಸಬೇಕೆಂದು ಪಣತೊಟ್ಟಿದ್ದರು. ಆದ್ರೆ 19ನೇ ಓವರ್‌ನಲ್ಲಿ ಜೋಶ್ ಲಿಟಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ವಿಲಿಯಮ್ಸನ್, ಜೇಮ್ಸ್‌ ನೀಶಮ್, ಮಿಚೆಲ್‌ ಸ್ಯಾಂಟ್ನರ್ ಸತತ ಮೂರು ಎಸೆತಗಳಲ್ಲಿ ಔಟಾದ ಪರಿಣಾಮ ನ್ಯೂಜಿಲೆಂಡ್ 6 ವಿಕೆಟ್ ಕಳೆದುಕೊಂಡು 185ರನ್ ಕಲೆಹಾಕಿತು.

ಜೋಸ್ ಲಿಟರ್ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದು, ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಐರ್ಲೆಂಡ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಗ್ರೂಪ್ 1 ಪಾಯಿಂಟ್ಸ್‌ ಟೇಬಲ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಮತ್ತು 1 ಫಲಿತಾಂಶವಿಲ್ಲದೆ ಒಟ್ಟು 7 ಪಾಯಿಂಟ್ಸ್ ಕಲೆಹಾಕಿದ್ದು, ನೆಟ್‌ ರನ್‌ರೇಟ್‌ +2.113ರಷ್ಟು ಹೊಂದಿದೆ. ಅಲ್ಲದೆ ಗ್ರೂಪ್‌ನ ಅಗ್ರಸ್ಥಾನಿಯಾಗಿ ಸೆಮಿಸ್ ಟಿಕೆಟ್ ಪಡೆದಿದೆ.

ಸೋತ ಐರ್ಲೆಂಡ್ ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 3 ಸೋಲು, 1 ಫಲಿತಾಂಶವಿಲ್ಲದೆ ಒಟ್ಟು 3 ಪಾಯಿಂಟ್ಸ್ ಕಲೆಹಾಕಿ ಗ್ರೂಪ್‌ 5 ಸ್ಥಾನದಲ್ಲಿ ಟಿ20 ವಿಶ್ವಕಪ್ ಕೊನೆಗೊಳಿಸಿದೆ.

Story first published: Friday, November 4, 2022, 13:27 [IST]
Other articles published on Nov 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+