
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಶ್ರೀಲಂಕಾ ಉತ್ತಮ ಆರಂಭ ಪಡೆದರೂ ಕಡಿಮೆ ಮೊತ್ತಕ್ಕೆ ಕುಸಿತಗೊಂಡಿದೆ. ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141ರನ್ ಕಲೆಹಾಕಿದ್ದು, ಇಂಗ್ಲೆಂಡ್‌ಗೆ 142ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಶ್ರೀಲಂಕಾ ತಂಡವು ಕೇವಲ ಒಂದು ಬದಲಾವಣೆ ಮಾಡಿ ಕಣಕ್ಕಿಳಿಯಿತು. ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಲಂಕಾ ಪರ ಭರ್ಜರಿ ಆರಂಭ ನೀಡಿದ ಪಾಥುಮ್ ನಿಸ್ಸಾಂಕ ಬೃಹತ್ ಮೊತ್ತ ಕಲೆಹಾಕುವ ಭರವಸೆ ಮೂಡಿಸಿದ್ರು.
ಇಂಗ್ಲೆಂಡ್ ಬೌಲರ್‌ಗಳನ್ನ ದಂಡಿಸಿದ ನಿಸ್ಸಾಂಕ ಇನ್ನಿಂಗ್ಸ್‌ನಿಂದಾಗಿ ಶ್ರೀಲಂಕಾ ಪವರ್ ಪ್ಲೇ ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿದ್ದು, ಮೇಲುಗೈ ಸಾಧಿಸಿತು. ಆದ್ರೆ ಪವರ್ ಪ್ಲೇ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು. ಒಂದೆಡೆ ಓಪನರ್ ಫಾತುಮ್ ನಿಸ್ಸಾಂಕ ಅಬ್ಬರಿಸಿದ್ರೆ, ಮತ್ತೊಂದೆಡೆ ವಿಕೆಟ್ ಉರುಳಿದವು.
45 ಎಸೆತಗಳಲ್ಲಿ 67 ರನ್ ಕಲೆಹಾಕಿದ ಪಥುಮ್ ನಿಸ್ಸಾಂಕ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಒಳಗೊಂಡಿದ್ದವು. ನಿಸ್ಸಾಂಕ ಉತ್ತಮ ಆಟವಾಡಿ ಔಟಾಗುವ ಮುನ್ನ, ಔಟಾದ ಬಳಿಕವೂ ಯಾವೊಬ್ಬ ಬ್ಯಾಟರ್ ಕೂಡ ಲಂಕಾಗೆ ಆಧಾರವಾಗಲಿಲ್ಲ.
ಕುಸಾಲ್ ಮೆಂಡೀಸ್ 18, ಧನಂಜಯ ಡಿ ಸಿಲ್ವಾ 9, ಚರಿತಾ ಅಸಲಂಕಾ 8, ಭಾನುಕಾ ರಾಜಪಕ್ಷೆ 22, ದಸುನ್ ಶನಕ 3, ವಹಿಂದು ಹಸರಂಗ 9ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯ 5 ಓವರ್‌ಗಳಲ್ಲಿ ಕೇವಲ 25ರನ್ ಕಲೆಹಾಕಿದ ಶ್ರೀಲಂಕಾಗೆ 150ರ ಗಡಿ ಮುಟ್ಟಲು ಸಹ ಸಾಧ್ಯವಾಗಲಿಲ್ಲ. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141ರನ್ ಗಳಿಸಲಷ್ಟೇ ಶಕ್ತಗೊಂಡಿತು.
ಇಂಗ್ಲೆಂಡ್ ಪರ ತನ್ನ ಮೊದಲ ಓವರ್‌ನಲ್ಲಿ 17ರನ್ ನೀಡಿದ್ದ ಮಾರ್ಕ್ ವುಡ್ ಅದ್ಭುತ ಕಂಬ್ಯಾಕ್ ಮಾಡಿ 3 ಓವರ್‌ಗಳಲ್ಲಿ 26ರನ್ ನೀಡಿ 3 ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಯಾಮ್ ಕರನ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ಪ್ಲೇಯಿಂಗ್ 11
ಜೋಸ್ ಬಟ್ಲರ್(ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಸ್ಯಾಮ್ ಕುರಾನ್, ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಬೆಂಚ್: ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್
ಶ್ರೀಲಂಕಾ ಪ್ಲೇಯಿಂಗ್ 11
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ
ಬೆಂಚ್: ಅಸಿತ ಫೆರ್ನಾಂಡೋ, ಅಶೆನ್ ಬಂಡಾರ, ಜೆಫ್ರಿ ವಾಂಡರ್ಸೆ, ಪ್ರಮೋದ್ ಮದುಶನ್