T20 World Cup 2022 ಫೈನಲ್‌ನಲ್ಲಿ ಈ ತಂಡಗಳ ಕಾದಾಟ ನೋಡಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ: ವ್ಯಾಟ್ಸನ್

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರಲ್ಲಿ ಸತತ ಎರಡು ವಾರಗಳಿಗಿಂತ ಹೆಚ್ಚು ಕಾಲ ನಡೆದ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಗೆಲುವು, ಸೋಲು, ಹೋರಾಟ, ಮುಖಭಂಗ ಸೇರಿದಂತೆ ಹಲವು ದಾಖಲೆಗಳ ನಿರ್ಮಾಣಗಳು ಕಂಡುಬಂದಿವೆ.
ಸೂಪರ್ 12ರಲ್ಲಿ ಅದ್ಭುತ ಆಟದ ನಂತರ ಸೆಮಿಫೈನಲ್‌ಗೆ ಅಂತಿಮ ನಾಲ್ಕು ತಂಡಗಳು ಬಡ್ತಿ ಪಡೆದಿದ್ದು, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಕೊನೆಯ ನಾಲ್ಕು ತಂಡಗಳಾಗಿವೆ. ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಫೈನಲ್ ತಲುಪಲು ಹೋರಾಡಲಿವೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಿ ನಿರೀಕ್ಷೆ, ನಾಟಕ, ಶಕ್ತಿ ಮತ್ತು ಅಭಿಮಾನಿಗಳ ಒಳಗೊಳ್ಳುವಿಕೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಕ್ರಿಕೆಟ್‌ನಲ್ಲಿ ಎರಡು ದೊಡ್ಡ ಪ್ರತಿಸ್ಪರ್ಧಿಗಳ ನಡುವೆ ಕನಸಿನ ಟಿ20 ವಿಶ್ವಕಪ್ ಫೈನಲ್‌ನ ಸಾಧ್ಯತೆಯನ್ನು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಟಿ20 ಪ್ರದರ್ಶನ
ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಗ್ರೂಪ್ ಹಂತದ ಪಂದ್ಯದಲ್ಲಿ ಏಷ್ಯಾದ ದೈತ್ಯ ತಂಡಗಳು ಈಗಾಗಲೇ ಒಮ್ಮೆ ಮುಖಾಮುಖಿಯಾಗಿದ್ದಾರೆ. ಅಲ್ಲಿ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಟಿ20 ಪ್ರದರ್ಶನ ಮೂಲಕ ಭಾರತವನ್ನು ಗೆಲ್ಲಿಸಿದ್ದಾರೆ.
ರೋಮಾಂಚಕ ಪಂದ್ಯವು ಲಕ್ಷಾಂತರ ಅಭಿಮಾನಿಗಳು ತಮ್ಮ ಟಿವಿ ಮುಂದೆ ಅಲುಗಾಡದಂತೆ ಉಸಿರು ಬಿಗಿಹಿಡಿದು ಪಂದ್ಯ ವೀಕ್ಷಿಸಿದರು. ಇದೀಗ ಉಭಯ ತಂಡಗಳು ಸೆಮಿಫೈನಲ್ ಹಂತವನ್ನು ತಲುಪಿದ್ದು, ಅಲ್ಲಿ ಗೆದ್ದರೆ, ಮತ್ತೆ ಭಾರತ-ಪಾಕಿಸ್ತಾನ ತಂಡಗಳ ನಡುವೆ ಪ್ರಶಸ್ತಿಗಾಗಿ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.

ಅಡಿಲೇಡ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಸೆಣಸಾಟ
ಸಿಡ್ನಿಯಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ತಂಡವನ್ನು ಎದುರಿಸುವ ಒಂದು ದಿನದ ನಂತರ ಭಾರತ ತಂಡವು ಗುರುವಾರ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣಸಾಡಲಿದೆ.
"ಎಲ್ಲರೂ ಪಾಕಿಸ್ತಾನ ಮತ್ತು ಭಾರತ ತಂಡಗಳನ್ನು ಫೈನಲ್‌ನಲ್ಲಿ ನೋಡಲು ಇಷ್ಟಪಡುತ್ತಾರೆ," ಎಂದು ಆಸೀಸ್ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಈವೆಂಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಉಲ್ಲೇಖಿಸಿದ್ದಾರೆ.
"ನಾನು ದುರದೃಷ್ಟವಶಾತ್ MCG ಯಲ್ಲಿ ಆ ಮೊದಲ ಸೂಪರ್ 12 ಪಂದ್ಯ ನೋಡುವುದನ್ನು ಕಳೆದುಕೊಂಡೆ. ಏಕೆಂದರೆ ನಾನು ಹಿಂದೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಕಾಮೆಂಟ್ ಮಾಡಿದ್ದೆ. ಹೀಗಾಗಿ ನಾನು ಏನು ತಪ್ಪಿಸಿಕೊಂಡಿದ್ದೇನೆಂದು ನನಗೆ ತಿಳಿದಿದೆ ಮತ್ತು ಮರು-ಪಂದ್ಯವನ್ನು ನೋಡಲು ಇಷ್ಟಪಡುತ್ತೇನೆ," ಎಂದು ಶೇನ್ ವ್ಯಾಟ್ಸನ್ ಹೇಳಿದರು.

2007ರಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದರು
"ಆದರೆ ಎಲ್ಲಾ ವರದಿಗಳಿಂದ, ಆ ಪಂದ್ಯಕ್ಕೆ ಹೋದ ಎಲ್ಲಾ ಜನರು ಇದು ತುಂಬಾ ವಿಶೇಷವಾದ ಸಂಗತಿಯಾಗಿದೆ ಮತ್ತು ಟಿವಿಯಲ್ಲಿ ವೀಕ್ಷಿಸಲು ಅದ್ಭುತ ಆಟವಾಗಿದೆ ಎಂದು ಹೇಳಿದರು. ಎರಡು ತಂಡಗಳು 2007ರಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದರು ಮತ್ತು ಎಲ್ಲರೂ ಇಷ್ಟಪಡುತ್ತಾರೆ ಅದನ್ನು ಮತ್ತೊಮ್ಮೆ ನೋಡಲು ತುದಿಗಾಗಲಲ್ಲಿ ನಿಂತಿದ್ದಾರೆ," ಎಂದು ಶೇನ್ ವ್ಯಾಟ್ಸನ್ ಅಭಿಪ್ರಾಯಪಟ್ಟರು.
ನ್ಯೂಜಿಲೆಂಡ್ ಗೆಲ್ಲುವ ಫೇವರಿಟ್ ತಂಡವಾಗಿ ಕಾಣುತ್ತದೆ, ಆದರೆ ಪಾಕಿಸ್ತಾನವು ಸೆಮಿಫೈನಲ್‌ನಲ್ಲಿ ಹೋರಾಟ ಮಾಡಲಿದೆ. ಆದಾಗ್ಯೂ, ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಅಪಾಯಕಾರಿ ತಂಡವಾಗಲಿದೆ ಎಂದು ಶೇನ್ ವ್ಯಾಟ್ಸನ್ ತಿಳಿಸಿದರು.

ಪಾಕಿಸ್ತಾನ ಸೆಮಿಸ್‌ಗೆ ಹೋಗುವ ನಿರೀಕ್ಷೆಯಿಲ್ಲವಾಗಿತ್ತು
"ಎಲ್ಲಾ ಪಂದ್ಯಾವಳಿಗಳಲ್ಲಿ ಕೆಲವು ಸಮಯಗಳಿವೆ. ಅಲ್ಲಿ ಪಾಕಿಸ್ತಾನ ತಂಡವು ಗೆಲುವಿನ ಗಡಿ ಹತ್ತಿರ ಬಂದು ಸೋಲುತ್ತದೆ ಮತ್ತು ಹೇಗಾದರೂ ಫೈನಲ್‌ಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ. ನಂತರ ಫೈನಲ್ ಗೆಲ್ಲಲು ಹೋಗುತ್ತದೆ," ಎಂದು ಶೇನ್ ವ್ಯಾಟ್ಸನ್ ಪಾಕಿಸ್ತಾನ ತಂಡದ ಬಗ್ಗೆ ಹೇಳಿದರು.
"ವಿಶೇಷವಾಗಿ, ಪಾಕಿಸ್ತಾನ ಈ ಪಂದ್ಯಾವಳಿಯುದ್ದಕ್ಕೂ ನಿರ್ದಿಷ್ಟ ಸಮಯಗಳಲ್ಲಿ ಆಡಿದ ರೀತಿಯಿಂದಾಗಿ ಅವರು ಸೆಮಿಸ್‌ಗೆ ಹೋಗುವ ನಿರೀಕ್ಷೆಯಿಲ್ಲವಾಗಿತ್ತು. ಪಂದ್ಯಾವಳಿಯ ಮಧ್ಯದಲ್ಲಿ ಹೆಚ್ಚು ನಿರೀಕ್ಷಿಸದ ನಂತರ ಅವರು ಪಡೆದ ಫಾರ್ಮ್ ಕಿವೀಸ್‌ಗೆ ತುಂಬಾ ಅಪಾಯಕಾರಿಯಾಗಲಿದೆ," ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಭವಿಷ್ಯ ನುಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications