
ಮೆಲ್ಬರ್ನ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಪಾಕ್ ಸೋಲಿಗೆ ಶರಣಾಗಿದೆ. ಪಂದ್ಯದ ಗತಿಯನ್ನೇ ಬದಲಿಸಿದ ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ ಎದುರಾಳಿ ತಂಡದಿಂದ ಗೆಲುವನ್ನು ಕಸಿದುಕೊಂಡರು. ಕೊಹ್ಲಿ ಅದ್ಭುತ ಇನ್ನಿಂಗ್ಸ್ ಕ್ರಿಕೆಟ್ ಲೋಕವೇ ಮೂಕವಿಸ್ಮಿತರಾಗಿದ್ದು, ಕೊಹ್ಲಿ ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್ ಎಂದು ಅನೇಕ ಮಾಜಿ ಕ್ರಿಕೆಟಿಗರು, ಸೆಲೆಬ್ರಿಟಿಗಳು ಹೊಗಳಲಿದ್ದಾರೆ.
ಸ್ವತಃ ವಿರಾಟ್ ಕೊಹ್ಲಿಯೇ ಹೇಳಿರುವಂತೆ ಇದು ಅವರ ಬೆಸ್ಟ್ ಟಿ20 ಇನ್ನಿಂಗ್ಸ್ ಆಗಿದೆ. 53 ಎಸೆತಗಳಲ್ಲಿ ಅಜೇಯ 82ರನ್ ಕಲೆಹಾಕಿದ ಕಿಂಗ್ ಕೊಹ್ಲಿ ಟೀಂ ಇಂಡಿಯಾ ಗೆಲುವು ತಂದುಕೊಟ್ಟರು.
ಆದ್ರೆ ವಿರಾಟ್ ಕೊಹ್ಲಿ ಗೆಲುವಿನ ಸರದಾರನಾದ್ರೂ ಸಹ ಭಾರತದ ಗೆಲುವಿಗೆ ಪ್ರಮುಖ ಕಾರಣವಾದವರಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಆದ್ರೆ ಕೊಹ್ಲಿ ಅಮೋಘ ಆಟದೆದುರು ಹಾರ್ದಿಕ್ ಪಾಂಡ್ಯ ಅಮೂಲ್ಯ ಇನ್ನಿಂಗ್ಸ್ ಅನ್ನು ಜನತೆ ಮರೆತುಬಿಟ್ಟಿದ್ದಾರೆ.
ಪಾಕ್ ನೀಡಿದ್ದ 160ರನ್‌ಗಳ ಗುರಿಯನ್ನ ಬೆನ್ನತ್ತಿದ ಭಾರತ ಆರಂಭಿಕ ಕುಸಿತಕ್ಕೆ ಒಳಗಾಗಿತು 40ರನ್‌ಗಳಿಸೋದ್ರಲ್ಲಿ 4 ವಿಕೆಟ್ ಕಳೆದುಕೊಂಡ ಭಾರತಕ್ಕೆ ನೆರವಾಗಿದ್ದೇ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ. 5ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಟೀಂ ಇಂಡಿಯಾವನ್ನ ಮೇಲೆತ್ತಿದರು.
ವಿರಾಟ್ ಕೊಹ್ಲಿ ಅರ್ಧಶತಕದ ಜೊತೆಗೆ ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40ರನ್ ಕಲೆಹಾಕುವ ಮೂಲಕ ವಿರಾಟ್ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದ್ರು. ಹಾರ್ದಿಕ್ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. 40ರನ್‌ಗಳಿಸಿ ಕೊಹ್ಲಿ ಮೊಹಮ್ಮದ್ ನವಾಜ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಕೊಹ್ಲಿ ತಂಡವನ್ನು ಗೆಲುವಿನ ದಡ ತಲುಪಿಸಿದ್ರು.
ಆದ್ರೆ ಭಾರತದ ಗೆಲುವಿನ ಬಳಿಕ ಕೊಹ್ಲಿ ಶ್ರೇಷ್ಟ ಬ್ಯಾಟಿಂಗ್ ಕುರಿತು ಜನರು ಮಾತನಾಡುತ್ತಿದ್ದಾರೆಯೇ ಹೊರತು ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಮರೆತುಬಿಟ್ಟಿದ್ದಾರೆ. ಬ್ಯಾಟಿಂಗ್ ಅಷ್ಟೇ ಅಲ್ಲದೆ
ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು.
ಶದಾಬ್ ಖಾನ್ 5, ಹೈದರ್ ಅಲಿ 2ರನ್‌ಗಳಿಸಿ 14ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ರು. ಮತ್ತೆ ಬೌಲಿಂಗ್ ದಾಳಿಗಿಳಿದ ಹಾರ್ದಿಕ್ ಪಂದ್ಯದ 16ನೇ ಓವರ್‌ನಲ್ಲಿ ಮೊಹಮ್ಮದ್ ನವಾಜ್(9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಈ ಮೂಲಕ ಭಾರತವು ಪಾಕ್ ತಂಡವನ್ನು 160ರನ್‌ಗಳೊಳಗೆ ಕಟ್ಟಿಹಾಕಲು ಸಾಧ್ಯವಾಯಿತು. ಹೀಗೆ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಕುರಿತು ಜನರು ನೆನಪನ್ನೇ ಮಾಡಿಕೊಳ್ಳದ ಕುರಿತು ಪಾಂಡ್ಯ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅಮೂಲ್ಯ ಇನ್ನಿಂಗ್ಸ್ ಕುರಿತು ನೆನಪು ಮಾಡಿದ್ದಾರೆ.
ಭಾನುವಾರ ಪಾಕ್ ವಿರುದ್ಧ 3 ಪ್ರಮುಖ ವಿಕೆಟ್ ಪಡೆದ ಹಾರ್ದಿಕ್ 74 ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 57 ವಿಕೆಟ್‌ಗಳ ಜೊತೆಗೆ 1029 ರನ್ ಕಲೆಹಾಕಿ ಪರ್ಫೆಕ್ಟ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಭಾರತದ ಗೆಲುವಿನಲ್ಲಿ ಹಾರ್ದಿಕ್ ಅನ್ನು ಕಡೆಗಡಿಸಬೇಡಿ ಎಂದು ನೆಟ್ಟಿಗರು ಎಚ್ಚರಿಸಿದ್ದಾರೆ.