ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇದುವರೆಗೆ ದಾಖಲಾದ ಕನಿಷ್ಠ ಮತ್ತು ಗರಿಷ್ಠ ಮೊತ್ತವೆಷ್ಟು?

ಟಿ20 ವಿಶ್ವಕಪ್ 2022ರ ಮಹಾಸಂಗ್ರಾಮ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು (ಭಾನುವಾರ) ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಮೆಲ್ಬರ್ನ್‌ನ ಐತಿಹಾಸಿಕ ಕ್ರಿಕೆಟ್ ಮೈದಾನ ಎಂಸಿಜಿ, ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಆತಿಥ್ಯವಹಿಸಿದೆ.
ತನ್ನ ಬಲಾಢ್ಯ ಬ್ಯಾಟಿಂಗ್ ಮೇಲೆ ಹೆಚ್ಚಿನ ನಂಬಿಕೆಯಿಟ್ಟಿರುವ ಇಂಗ್ಲೆಂಡ್ ತಂಡವು, ವೇಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನ ತಂಡದೆದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಅಮೋಘ ಜಯ ಸಾಧಿಸಿ ಫೈನಲ್ ಪ್ರವೇಶಿಸಿರುವ ಬಟ್ಲರ್ ಪಡೆ, ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಮತ್ತೊಂದೆಡೆ ಅದೃಷ್ಟದ ಜೊತೆಗೆ ಅಮೋಘ ಆಟವಾಡಿ ಫೈನಲ್ ಪ್ರವೇಶಿಸಿರುವ ಬಾಬರ್ ಅಜಂ ತಂಡವು ಕೂಡ 13 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆಲ್ಲುವ ಕನಸು ಕಂಡಿದೆ.
ಫೈನಲ್ ಅಂದಾಕ್ಷಣ ಎರಡು ತಂಡಗಳು ಕೊಂಚ ಹೆಚ್ಚಾಗಿಯೇ ಒತ್ತಡಕ್ಕೆ ಒಳಗಾಗಿರುತ್ತವೆ. ಬೆಸ್ಟ್ ಬ್ಯಾಟರ್ ಉತ್ತಮ ಪ್ರದರ್ಶನ ನೀಡದೆಯೇ ಇರಬಹುದು. ಪ್ರಮುಖ ಬೌಲರ್‌ಗೆ ವಿಕೆಟ್ ಸಿಗದಿರುವ ಸಾಧ್ಯತೆಯನ್ನು ಕಾಣಬಹುದು. ಹೀಗಿರುವಾಗ ಫೈನಲ್‌ನಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವು ಎಷ್ಟು ಮೊತ್ತ ಕಲೆಹಾಕಲಿದೆ ಎಂಬುದು ಗೆಲುವಿನ ಸೋಲಿನ ಮೇಲೆ ಪರಿಣಾಮ ಬೀರುತ್ತದೆ.
ಐಸಿಸಿ ಟಿ20 ವಿಶ್ವಕಪ್ ಇತಿಹಾಸದ ಫೈನಲ್‌ನಲ್ಲಿ ಇದುವರೆಗೂ ಯಾವ ತಂಡ ಗರಿಷ್ಠ ರನ್ ಕಲೆಹಾಕಿದೆ ಮತ್ತು ಕನಿಷ್ಠ ತಂಡಕ್ಕೆ ಮುಗ್ಗರಿಸಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು, ಈ ಕೆಳಗೆ ಕಾಣಬಹುದು.

ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿದೆ ಗರಿಷ್ಠ ಸ್ಕೋರ್!
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ದಾಖಲೆಯು ಕಿವೀಸ್ ತಂಡದ ಹೆಸರಿನಲ್ಲಿದೆ. ಯುಎನಲ್ಲಿ ನಡೆದ ಕಳೆದ 2021ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 4 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಈ ಬೃಹತ್ ಮೊತ್ತವನ್ನು 18.5 ಓವರ್‌ಗಳಲ್ಲಿಯೇ ಗುರಿ ತಲುಪಿದ್ದಲ್ಲದೆ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
ಈ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪರ ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ ಅಜೇಯ 77 ರನ್ ಕಲೆಹಾಕಿದ್ರೆ, ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ್ರು.
Pak Vs Eng : 1992ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಇಂಗ್ಲೆಂಡ್?

ಟೀಂ ಇಂಡಿಯಾದ ಹೆಸರಿನಲ್ಲಿ ಕನಿಷ್ಠ ಸ್ಕೋರ್!
ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಗರಿಷ್ಠ ಸ್ಕೋರ್ ನ್ಯೂಜಿಲೆಂಡ್ ಹೆಸರಿನಲ್ಲಿದ್ದರೆ, ಕನಿಷ್ಠ ಸ್ಕೋರ್ ಟೀಂ ಇಂಡಿಯಾದ ಹೆಸರಿನಲ್ಲಿದೆ. 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ಶ್ರೀಲಂಕಾ ವಿರುದ್ಧ 130 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ದ್ವೀಪರಾಷ್ಟ್ರ ಕೇವಲ 17.5 ಓವರ್‌ಗಳಲ್ಲಿಯೇ ಗುರಿ ಮುಟ್ಟುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.
ಭಾರತ 20 ಓವರ್‌ಗಳಲ್ಲಿ 130 ರನ್ ಕಲೆಹಾಕಿದ್ರೆ, ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿಯೊಬ್ಬನೇ 77 ರನ್ ಸಿಡಿಸಿರುವುದು ಗಮನಾರ್ಹ ಪ್ರದರ್ಶನವಾಗಿದೆ. ಪ್ರಸ್ತುತ ಟಿ20 ವಿಶ್ವಕಪ್‌ನಲ್ಲೂ ಕೊಹ್ಲಿ ನಾಲ್ಕು ಅರ್ಧಶತಕ ಸಿಡಿಸುವ ಮೂಲಕ ಒಟ್ಟು 296 ರನ್ ಕಲೆಹಾಕಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದಾರೆ.
ಅದೊಂದು ಕೆಟ್ಟ ಪಂದ್ಯವಾಗಿರಬಹುದು ಆದರೆ..: ಟೀಮ್ ಇಂಡಿಯಾ ಪರ ನಿಂತ ಸಚಿನ್ ತೆಂಡೂಲ್ಕರ್

ಫೈನಲ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಮತ್ತು ಅತಿ ದೊಡ್ಡ ಸಿಕ್ಸರ್!
ಇನ್ನು ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಟಗಾರನೊಬ್ಬ ದಾಖಲಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯು, ವೆಸ್ಟ್ ಇಂಡೀಸ್‌ನ ಮರ್ಲಾನ್ ಸ್ಯಾಮ್ಯುವೆಲ್ಸ್ ಹೆಸರಿನಲ್ಲಿದೆ. 2012ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸ್ಯಾಮ್ಯುಯೆಲ್ಸ್ ರನ್ ಚೇಸಿಂಗ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದಲ್ಲದೆ 55 ಎಸೆತಗಳಲ್ಲಿ 78 ರನ್ ಸಿಡಿಸಿದರು. ಅಲ್ಲದೆ 108 ಮೀಟರ್ ಭರ್ಜರಿ ಸಿಕ್ಸರ್ ಕೂಡ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ 2012ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದಲ್ಲದೆ 2016ರಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದ್ರೆ ಪ್ರಸ್ತುತ ವಿಶ್ವಕಪ್‌ನಲ್ಲಿ ಸೂಪರ್ 12 ಹಂತವನ್ನೂ ತಲುಪಲಾಗದೆ ಭಾರೀ ಮುಖಭಂಗ ಅನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications