Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಾವುದೇ ತಂಡವನ್ನ ಹಗುರವಾಗಿ ಪರಿಗಣಿಸುವುದಿಲ್ಲ: ಬಾಂಗ್ಲಾ ವಿರುದ್ಧ ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್‌ ಹೇಳಿಕೆ

Rahul dravid

ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್‌ ಬಾಂಗ್ಲಾದೇಶ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಮೂಲಕ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಎಚ್ಚರಿಕೆಯ ಆಟವಾಡಲಿದೆ ಎಂಬ ಸಂದೇಶ ನೀಡಿದೆ.

ಅಡಿಲೇಡ್‌ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಐಸಿಸಿ ಟಿ20 ವಿಶ್ವಕಪ್‌ ಸೂಪರ್ 12 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಬಾಂಗ್ಲಾದೇಶ ಟೀಂ ಇಂಡಿಯಾಗೆ ಬ್ಯಾಟಿಂಗ್ ಆಹ್ವಾನಿಸಿದ್ದು, ಭಾರತ ಗೆಲುವಿನ ಫೇವರಿಟ್ ಆಗಿದೆ.

ಟೀಂ ಇಂಡಿಯಾ ಗೆಲ್ಲಲಿದೆ ಎಂದು ಮೊದಲೇ ಹೇಳಿರುವ ಬಾಂಗ್ಲಾ ನಾಯಕ

ಟೀಂ ಇಂಡಿಯಾ ಗೆಲ್ಲಲಿದೆ ಎಂದು ಮೊದಲೇ ಹೇಳಿರುವ ಬಾಂಗ್ಲಾ ನಾಯಕ

ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಉಭಯ ತಂಡಗಳ ಮುಖಾಮುಖಿಯಲ್ಲಿ ಭಾರತವೇ ಗೆಲುವಿನ ಫೇವರಿಟ್ ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ರು.

''ನಾವು ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ 2022'' ಗೆಲ್ಲಲು ಬಂದಿಲ್ಲ. ಬಾಂಗ್ಲಾದೇಶ ಗೆಲುವು ಸಾಧಿಸಿದ್ದೇ ಆದಲ್ಲಿ ಟೀಂ ಇಂಡಿಯಾಗೆ ತೊಂದರೆಯಾಗಲಿದೆ ಎಂಬ ಅರಿವಿದೆ'' ಎಂದು ಶಾಕೀಬ್ ಹೇಳಿಕೆಯು ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿತು.

'' ನಾವು ಇಲ್ಲಿ ವಿಶ್ವಕಪ್ ಗೆಲ್ಲಲು ಬಂದಿಲ್ಲ, ಆದ್ರೆ ಭಾರತ ಗೆಲ್ಲಲು ಬಂದಿದೆ. ನಾವು ನಾಳೆ ಗೆದ್ದರೆ, ಎದುರಾಳಿಗೆ ದೊಡ್ಡ ತೊಂದರೆಯಾಗಲಿದೆ. ಭಾರತ ಗೆಲುವಿನ ಫೇವರಿಟ್ ಆಗಿದೆ'' ಎಂದು ಶಾಕೀಬ್ ಹೇಳಿದ್ದರು.

ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದಿಲ್ಲ!

ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಗೆದ್ದಿಲ್ಲ!

ಹೌದು ಬಾಂಗ್ಲಾದೇಶ ತಂಡವು ಇದುವರೆಗೂ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಒಂದು ಬಾರಿಯೂ ಜಯಗಳಿಸಿಲ್ಲ. 2016 ಟಿ20 ವಿಶ್ವಕಪ್‌ನಲ್ಲಿ ಗೆಲುವಿನಂಚಿನಲ್ಲಿದ್ದ ಬಾಂಗ್ಲಾದೇಶದೆದುರು ಮಹೇಂದ್ರ ಸಿಂಗ್ ಅದ್ಭುತ ರನೌಟ್ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಬಾಂಗ್ಲಾದೇಶ ತಂಡವು 2 ಪಂದ್ಯ ಸೋತಿದ್ದರೂ ಸಹ ಇನ್ನೂ ಸೆಮಿಫೈನಲ್ ತಲುಪುವ ಅವಕಾಶವಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಪಂದ್ಯ ಜಯಿಸಿದ್ದೇ ಆದಲ್ಲಿ ಬಾಂಗ್ಲಾ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.

ಕೊಹ್ಲಿ ನಾಯಕನಿದ್ದಾಗ ಇದ್ದ ತಂಡ ಈಗಿಲ್ಲ; ರೋಹಿತ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಹೇಳಿಕೆ

ನಾವು ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಲ್ಲ ಎಂದ ದ್ರಾವಿಡ್

ನಾವು ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಲ್ಲ ಎಂದ ದ್ರಾವಿಡ್

ಬಾಂಗ್ಲಾದೇಶ ತಂಡದ ನಾಯಕ ಶಾಕೀಬ್ ಅಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ನಾವು ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ, ಎದುರಾಳಿಯನ್ನ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

'' ನಾವು ಅವರನ್ನು ತುಂಬಾನೆ ಗೌರವಿಸುತ್ತೇವೆ ಎಂದು ಭಾವಿಸುತ್ತೇವೆ. ನನ್ನ ಪ್ರಕಾರ ಅವರದ್ದು ಉತ್ತಮ ತಂಡವಾಗಿದೆ. ಪ್ರಸ್ತುತ ಈ ಫಾರ್ಮೆಟ್‌ನಲ್ಲಿ ಯಾವುದೇ ತಂಡವನ್ನು ಸಹ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಐರ್ಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ತನ್ನ ಸಾಮರ್ಥ್ಯ ಏನೆಂಬುದನ್ನ ಪ್ರದರ್ಶಿಸಿದೆ. ಈ ಸ್ಪರ್ಧೆಯಲ್ಲಿ ನಾವು ಈಗಾಗಲೇ ಹಲವು ಪಂದ್ಯಗಳನ್ನು ವೀಕ್ಷಿಸಿದ್ದೇವೆ'' ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಹೆಡ್ ಟು ಹೆಡ್ ರೆಕಾರ್ಡ್‌ ಭಾರತ ಎದುರಾಳಿ ಬಾಂಗ್ಲಾದೇಶ ವಿರುದ್ಧ ಮೇಲುಗೈ ಸಾಧಿಸಿದ್ದು, ಇದುವರೆಗೆ 11 ಟಿ20 ಅಂತರಾಷ್ಟ್ರೀಯ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ 10 ಪಂದ್ಯಗಳನ್ನ ಜಯಿಸಿದೆ. ಬಾಂಗ್ಲಾದೇಶ ಕೇವಲ 1 ಬಾರಿ ಪಂದ್ಯ ಜಯಿಸಿದೆ.

Story first published: Wednesday, November 2, 2022, 13:56 [IST]
Other articles published on Nov 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+