
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಪಂದ್ಯಕ್ಕೆ ಮಳೆ ಕಾಟ ಎದುರಾಗಿದ್ದು, ಟೀಂ ಇಂಡಿಯಾ ನೀಡಿದ್ದ 185ರನ್‌ಗಳ ಗುರಿಯನ್ನ ಬಾಂಗ್ಲಾದೇಶ ಭರ್ಜರಿಯಾಗಿ ಬೆನ್ನಟ್ಟಿದೆ.
ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿದ್ದು, ಎದುರಾಳಿಗೆ 185 ರನ್ ಗುರಿ ನೀಡಿದೆ.
185ರನ್ ಗುರಿ ಬೆನ್ನತ್ತಿರುವ ಬಾಂಗ್ಲಾದೇಶ ತಂಡಕ್ಕೆ ಓಪನರ್ ಲಿಟ್ಟನ್ ದಾಸ್ ಸ್ಫೋಟಕ ಆರಂಭ ನೀಡಿದ್ದಾರೆ. ಟೀಂ ಇಂಡಿಯಾದ ಎಲ್ಲಾ ಬೌಲರ್‌ಗಳನ್ನ ಬೆಂಡೆತ್ತಿದ ಲಿಟ್ಟನ್ ದಾಸ್ ಪವರ್‌ಪ್ಲೇ ಓವರ್‌ಗಳಲ್ಲಿ ಅಬ್ಬರಸಿದ್ದಾರೆ.
21 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ ಲಿಟ್ಟನ್ ದಾಸ್ ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು 26 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದ್ದಾರೆ. ಜೊತೆಗಾರ ನಜ್ಮುಲ್ ಶಾಂಟೊ 16 ಎಸೆತಗಳಲ್ಲಿ 7ರನ್ ಕಲೆಹಾಕಿದ್ದರು, ಬಾಂಗ್ಲಾದೇಶ 6 ಓವರ್‌ಗಳ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ 60ರನ್ ಕಲೆಹಾಕಿತು.
ಪ್ರಸ್ತುತ ವಿಶ್ವಕಪ್‌ನಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ಭಾರತದ ವಿರುದ್ಧ ಯಾವುದೇ ತಂಡವು ದಾಖಲಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಇನ್ನು ಬಾಂಗ್ಲಾದೇಶ ತನ್ನ ಟಿ20 ಇತಿಹಾಸದಲ್ಲಿ ಭಾರತದ ವಿರುದ್ಧ ಅತಿ ಹೆಚ್ಚಿನ ಪವರ್ ಪ್ಲೇ ಸ್ಕೋರ್ ಇದಾಗಿದೆ ಅಂದ್ರೆ ಆಶ್ಚರ್ಯಪಡಬೇಕಾಗಿದೆ.
ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 7 ಓವರ್‌ಗೆ 66ರನ್ ಕಲೆಹಾಕಿದ್ದು, ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 17 ರನ್ ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆಯಿದ್ದು, ಬಾಂಗ್ಲಾ ತಂಡಕ್ಕೆ ವರದಾನವಾಗುವ ಸಾಧ್ಯತೆಯಿದೆ.
ಓವರ್‌ಗಳು ಕಡಿತಗೊಂಡ್ರೆ ಬಾಂಗ್ಲಾಕ್ಕೆ ಟಾರ್ಗೆಟ್ ಈ ಕೆಳಗಿದೆ
19 ಓವರ್‌ಗಳು: 177
17 ಓವರ್‌ಗಳು: 160
15 ಓವರ್‌ಗಳು: 142
12 ಓವರ್‌ಗಳು: 112
10 ಓವರ್‌ಗಳು: 89