ಟಿ20 ವಿಶ್ವಕಪ್: IND vs PAK ಹೈ-ವೋಲ್ಟೇಜ್ ಪಂದ್ಯದ ಫ್ಯಾಂಟಸಿ ಡ್ರೀಮ್ ಟೀಂ; ಸಂಭಾವ್ಯ ತಂಡಗಳು

ಇಂದು (ಭಾನುವಾರ, ಅಕ್ಟೋಬರ್ 23) ನಡೆಯಲಿರುವ ಟಿ20 ವಿಶ್ವಕಪ್ 2022 ಸೂಪರ್ 12ರ ಬಿ ಗುಂಪಿನ ಮುಖಾಮುಖಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿದ್ದು, ಕಳೆದ ವಿಶ್ವಕಪ್ ಸೋಲಿಗೆ ಭಾರತ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ)ದಲ್ಲಿ ಮಳೆಯ ಭೀತಿ ಎದುರಾಗಿದ್ದರೂ, ಭಾರತ ಮತ್ತು ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಯಲಿ ಎಂಬುದು ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳ ಬಯಕೆ.
SL vs IRE: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್, ಆಡುವ 11ರ ಬಳಗ & ಲೈವ್ ಸ್ಕೋರ್
ಮಳೆಯು ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳ ನಡುವೆ, ಮೆಲ್ಬೋರ್ನ್ ಹವಾಮಾನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವ ಜನರ ಪ್ರಕಾರ ಈ ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆಯಿಲ್ಲ.
ಎರಡೂ ದೇಶಗಳ ಕೋಟ್ಯಂತರ ಅಭಿಮಾನಿಗಳು ತಮ್ಮ ತಂಡಗಳನ್ನು ಬೆಂಬಲಿಸಲು ಕಾತರರಾಗಿದ್ದಾರೆ. ಇನ್ನು ಎರಡೂ ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಬಾಬರ್ ಅಜಂ ಅವರು ಇದು ಮತ್ತೊಂದು ಪಂದ್ಯ ಎಂದು ಹೇಳುತ್ತಾರೆ.

ಬ್ಯಾಟಿಂಗ್ ದಿಗ್ಗಜ ಭಾರತ ತಂಡದ ಸೋಲಿಸುವಲ್ಲಿ ಯಶಸ್ವಿಯಾಗಿತ್ತು
ಕಳೆದ ಒಂದು ವರ್ಷದಲ್ಲಿ ಶಾಹೀನ್ ಶಾ ಆಫ್ರಿದಿ ಅವರ ಆರಂಭಿಕ ಸ್ಪೆಲ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್‌ನಲ್ಲಿ ಮೊದಲ ಜಯವನ್ನು ನೀಡಿದ ನಂತರ ಬಹಳಷ್ಟು ಬದಲಾಗಿದೆ. ಕಳೆದ ವಿಶ್ವಕಪ್ ಪಂದ್ಯದಲ್ಲಿ 3/31 ಅಂಕಿಅಂಶಗಳ ಮೂಲಕ ಸಮಕಾಲೀನ ಕ್ರಿಕೆಟ್ ಪ್ರಪಂಚದ ಬ್ಯಾಟಿಂಗ್ ದಿಗ್ಗಜ ಭಾರತ ತಂಡದ ಸೋಲಿಸುವಲ್ಲಿ ಯಶಸ್ವಿಯಾಗಿತ್ತು.
ಶಾಹೀನ್ ಶಾ ಆಫ್ರಿದಿ ಅವರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್ ಉರುಳಿಸುವ ಮೂಲಕ ದುಬೈನಲ್ಲಿ ಕಳೆದ ವರ್ಷದ ಅವಮಾನವನ್ನು ಭಾರತ ಸುಲಭವಾಗಿ ಮರೆತಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ತಂಡವಾಗಿ ಭಾರತವು ಉತ್ತಮ ಪ್ರದರ್ಶನ ನೀಡುತ್ತಿದೆ.

ಪಂದ್ಯದ ವಿವರಗಳು
ಭಾರತ vs ಪಾಕಿಸ್ತಾನ ಟಿ20 ವಿಶ್ವಕಪ್ 2022 ಸೂಪರ್ 12, ಪಂದ್ಯ ಸಂಖ್ಯೆ 16
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ), ಮೆಲ್ಬೋರ್ನ್
ದಿನಾಂಕ ಮತ್ತು ಸಮಯ: ಅಕ್ಟೋಬರ್ 23ರಂದು ಭಾರತೀಯ ಕಾಲಮಾನ ಮಧ್ಯಾಹ್ನ 1.30
ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್

ಟಿ20 ವಿಶ್ವಕಪ್ 2022 ಭಾರತ vs ಪಾಕಿಸ್ತಾನ ಫ್ಯಾಂಟಸಿ ಡ್ರೀಮ್ ಟೀಂ
ವಿಕೆಟ್ ಕೀಪರ್: ಮೊಹಮ್ಮದ್ ರಿಜ್ವಾನ್
ಬ್ಯಾಟರ್ಸ್: ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಬಾಬರ್ ಅಜಂ
ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ನವಾಜ್
ಬೌಲರ್‌ಗಳು: ಅರ್ಶ್‌ದೀಪ್ ಸಿಂಗ್, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ಶಮಿ
ನಾಯಕ: ಮೊಹಮ್ಮದ್ ರಿಜ್ವಾನ್
ಉಪನಾಯಕ: ರೋಹಿತ್ ಶರ್ಮಾ

ಭಾರತ vs ಪಾಕಿಸ್ತಾನ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಧ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್
ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಆಸಿಫ್ ಅಲಿ, ಹೈದರ್ ಅಲಿ, ಶಾನ್ ಮಸೂದ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications