For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಕುಸಿದ ಟೀಂ ಇಂಡಿಯಾಗೆ ಆಧಾರವಾದ ಸೂರ್ಯಕುಮಾರ್ , 134ರನ್ ಟಾರ್ಗೆಟ್

Suryakumar yadav

ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಐಸಿಸಿ ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ದ.ಆಫ್ರಿಕಾ ಬೌಲಿಂಗ್ ದಾಳಿಗೆ ಪವರ್‌ಪ್ಲೇ ಓವರ್‌ಗಳಲ್ಲಿ ತತ್ತರಿಸಿದ ಟೀಂ ಇಂಡಿಯಾ 133ರನ್‌ಗೆ ಕುಸಿದಿದ್ದು, ಹರಿಣಗಳಿಗೆ 134ರನ್ ಟಾರ್ಗೆಟ್ ನೀಡಿದೆ.

ಆರಂಭಿಕ ಓವರ್‌ಗಳಲ್ಲೇ ಐದು ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಧಾರವಾದರು. ಒಂದೆಡೆ ವಿಕೆಟ್ ಉರುಳುತ್ತಿದ್ರೆ, ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಬೊಂಬಾಟ್ ಆಟ ಪ್ರದರ್ಶಿಸಿದ್ದಾರೆ. 30 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದ ಸೂರ್ಯಕುಮಾರ್ ಯಾದವ್ ಬೊಂಬಾಟ್ ಆಟವಾಡುವ ಮೂಲಕ ಭಾರತದ ಸ್ಕೋರ್ ಅನ್ನು 100ರ ಗಡಿದಾಟಿಸುವಲ್ಲಿ ಯಶಸ್ವಿಯಾದ್ರು.

ಮೇಡನ್ ಓವರ್ ಮೂಲಕ ಆರಂಭವಾದ ಟೀಂ ಇಂಡಿಯಾ ಬ್ಯಾಟಿಂಗ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಸಿಕ್ಸರ್ ಸಿಡಿಸಿ ಖಾತೆ ತೆರೆದಿದ್ದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಬಹುಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ರಾಹುಲ್ 14 ಎಸೆತಗಳಲ್ಲಿ 9ರನ್‌ಗೆ ಔಟಾದ್ರೆ, ರೋಹಿತ್ 14 ಎಸೆತಗಳಲ್ಲಿ 15ರನ್ ಸಿಡಿಸುವ ಮೂಲಕ ವಿಕೆಟ್ ಒಪ್ಪಿಸಿದ್ರು.

ದಕ್ಷಿಣ ಆಫ್ರಿಕಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಲುಂಗಿ ಎನ್‌ಗಿಡಿ ತನ್ನ ಮೊದಲ ಓವರ್‌ನಲ್ಲೇ ಎರಡುವ ವಿಕೆಟ್ ಕಬಳಿಸಿದ್ರು.

ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ 2 ಬೌಂಡರಿ ಸಿಡಿಸಿ ತಿರುಗೇಟು ನೀಡುವ ಲಕ್ಷಣ ತೋರಿದರು. ಆದ್ರೆ ಮತ್ತೆ ದಾಳಿಗಿಳಿದ ಲುಂಗಿ ಎನ್‌ಗಿಡಿ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ್ರು. ವಿರಾಟ್ 12, ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯ 2ರನ್‌ಗೆ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ನುಂಗಲಾರದ ತುತ್ತಾಯಿತು.

ಭಾರತ 8.3 ಓವರ್‌ಗಳಲ್ಲಿ 49ರನ್‌ಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಈ ವೇಳೆಯಲ್ಲಿ 6ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿದ ಸೂರ್ಯಕುಮಾರ್ ಯಾದವ್ ಮತ್ತು ದಿನೇಶ್ ಕಾರ್ತಿಕ್ ತಂಡದ ಸ್ಕೋರನ್ನು 100ರ ಗಡಿದಾಟಿಸಿದ್ರು.

ಆದ್ರೆ ಕಾರ್ತಿಕ್ ಟೀಂ ಇಂಡಿಯಾ ರನ್‌ರೇಟ್ ಹೆಚ್ಚಿಸಬೇಕಾದ ವೇಳೆಯಲ್ಲಿ ವಿಕೆಟ್ ಒಪ್ಪಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯ್ತು. DK 15 ಎಸೆತಗಳಲ್ಲಿ ಕೇವಲ 6ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದ್ರೆ ಒಂದೆಡೆ ತನ್ನ ಅಬ್ಬರದ ಬ್ಯಾಟಿಂಗ್ ಪದರ್ಶಿಸಿದ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 68 ರನ್ ಸಿಡಿಸಿ ಭಾರತಕ್ಕೆ ಆಧಾರವಾದ್ರು. ಸೂರ್ಯಕುಮಾರ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿತ್ತು.

ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕುವ ಮೂಲಕ ಹರಿಣಗಳಿಗೆ 134ರನ್ ಟಾರ್ಗೆಟ್ ನೀಡಿದೆ.

ದಕ್ಷಿಣ ಆಫ್ರಿಕಾ ಪರ ಬೊಂಬಾಟ್ ಬೌಲಿಂಗ್ ಮಾಡಿದ ಲುಂಗಿ ಎನ್‌ಗಿಡಿ 4, ವೇಯ್ನ್ ಪರ್ನೆಲ್ 3, ಎರ್ನಿಕ್ ನೊರ್ಕಿಯಾ 1 ವಿಕೆಟ್ ಪಡೆದು ಮಿಂಚಿದರು.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ(ನಾಯಕ), ರಿಲೀ ರೋಸೌ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಎರ್ನಿಕ್ ನೊರ್ಕಿಯಾ

ಬೆಂಚ್: ಹೆನ್ರಿಚ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ರೀಜಾ ಹೆಂಡ್ರಿಕ್ಸ್, ತಬ್ರೈಜ್ ಶಮ್ಸಿ

ಟೀಂ ಇಂಡಿಯಾ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ಬೆಂಚ್: ಅಕ್ಷರ್ ಪಟೇಲ್, ರಿಷಭ್ ಪಂತ್, ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್

Story first published: Sunday, October 30, 2022, 18:22 [IST]
Other articles published on Oct 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+