ಸೆಮಿಫೈನಲ್‌ನಲ್ಲಿ ಭಾರತದ ಪರ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಕಣಕ್ಕಿಳಿಯಲಿ: ಅನಿಲ್ ಕುಂಬ್ಳೆ

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪರ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಕಣಕ್ಕಿಳಿಯಲಿ ಎಂದು ಭಾರತದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಭಾರತ ತಂಡದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಚರ್ಚಿತ ವಿಷಯವಗಿರುವ ವಿಕೆಟ್ ಕೀಪರ್ ಸ್ಥಾನದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ DK ಬದಲು ರಿಷಭ್ ಪಂತ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಬೇಕು ಎಂಬುದು ಅನಿಲ್ ಕುಂಬ್ಳೆ ಅಭಿಪ್ರಾಯವಾಗಿದೆ.
ಕ್ರಿಕ್‌ಇನ್ಫೋ ಟಿ20 ಟೈಂನಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ದಿನೇಶ್ ಕಾರ್ತಿಕ್ ಇಡೀ ಟೂರ್ನಮೆಂಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಗಮನಾರ್ಹವಾದ ಪ್ರದರ್ಶನವನ್ನು ನೀಡಲಿಲ್ಲ. ಹೀಗಾಗಿ ಇಂಗ್ಲೆಂಡ್‌ನ ಆದಿಲ್ ರಶೀದ್ ಮಣಿಸಲು ಭಾರತವು ರಿಷಭ್ ಪಂತ್ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಭಾರತದ ಬಲಗೈ ಬ್ಯಾಟರ್‌ಗಳ ವಿರುದ್ಧ ಪ್ರಭಾವ ಬೀರಬಹುದು. ಆದ್ರೆ ರಿಷಭ್ ಪಂತ್ ರಿಷಭ್ ಪಂತ್ ಕೌಂಟರ್ ಅಟ್ಯಾಕ್ ಮಾಡಬಹುದು ಎಂದು ಅಂದಾಜಿಸಿದ್ದಾರೆ.
'' ನನ್ನ ಪ್ರಕಾರ ಭಾರತವು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಬದಲಾವಣೆ ಬಯಸಿದ್ದಲ್ಲಿ, ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು. ರಿಷಭ್ ಪಂತ್‌ರನ್ನು ಆಯ್ಕೆ ಮಾಡದೇ ಇದ್ದರೆ, ಭಾರತವು ಯಾವುದೇ ಹೊಸ ಬದಲಾವಣೆಯನ್ನು ತರಲಾಗುವುದಿಲ್ಲ'' ಎಂದು ಅನಿಲ್ ಕುಂಬ್ಳೆ ಇಂಡಿಯಾ ಟುಡೆಗೆ ಹೇಳಿದ್ದಾರೆ.
''ಏಕೆಂದರೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಲೈನಪ್‌ನಲ್ಲಿ ಹೆಚ್ಚಾಗಿ ಪರಿಣಾಮ ಬೀರಿಲ್ಲ. ಕೇವಲ ಒಂದು ಪಂದ್ಯವನ್ನ ಬಿಟ್ಟರೆ ಅವರು ಉತ್ತಮ ಅವಕಾಶವನ್ನು ಪಡೆದಿಲ್ಲ. ಹೀಗಾಗಿ ನಾನು ರಿಷಭ್ ಪಂತ್ ಆಯ್ಕೆಯನ್ನು ಬಯಸುತ್ತೇನೆ ಮತ್ತು ಅಡಿಲೇಡ್ ಓವಲ್ ಲಾಭವನ್ನ ಪಡೆಯಲು ಸಲಹೆ ನೀಡುತ್ತೇನೆ. ಓವಲ್‌ನಲ್ಲಿ ಆದಿಲ್ ರಶೀದ್ ಸ್ಪಿನ್ ಬಲಗೈ ಬ್ಯಾಟರ್‌ಗಳಿಗೆ ಕಂಟಕವಾಗಬಹುದು. ಆತ ಚೆಂಡನ್ನು ಟರ್ನ್ ಮಾಡುವುದಲ್ಲಿ ಉತ್ತಮವಾಗಿದ್ದಾನೆ. ಆತ ಉತ್ತಮ ಗೂಗ್ಲಿ ಬೌಲಿಂಗ್ ಮಾಡುವುದರಿಂದ ರಿಷಭ್ ಪಂತ್ ಆತನ ದಾಳಿ ಹಿಮ್ಮೆಟ್ಟಿಸಬಹುದು ಎಂಬುದನ್ನ ಭಾರತ ತನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು'' ಎಂದು ಕುಂಬ್ಳೆ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಜಿಂಬಾಬ್ವೆ ವಿರುದ್ಧ ರಿಷಭ್ ಪಂತ್‌ರನ್ನ ಕಣಕ್ಕಿಳಿಸಿದ್ದು, ಕಾಯತಂತ್ರವಾಗಿದೆ. ಇಬ್ಬರು ವಿಕೆಟ್ ಕೀಪರ್‌ಗಳು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಅರ್ಹರಾಗಿದ್ದಾರೆ ಎಂದಿದ್ದಾರೆ. ಜೊತೆಗೆ ಇಬ್ಬರು ಆಟಗಾರರು ಆಯ್ಕೆಗೆ ಲಭ್ಯವಿದ್ದಾರೆ ಎಂದು ತಿಳಿಸಿದ್ದಾರೆ.
ಬಹುತೇಕ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಆಟಗಾರರು ಅಂದಾಜಿಸಿದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್‌ಗೆ ಅವಕಾಶ ನೀಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಡಿದ ಪ್ಲೇಯಿಂಗ್ ಇಲೆವೆನ್ ಮುಂದುವರಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಡೇವಿಡ್ ಮಲನ್ ಹಾಗೂ ಮಾರ್ಕ್ ವುಡ್ ಇಂಜ್ಯುರಿ ಪರಿಣಾಮ ಫಿಲಿಪ್ ಸಾಲ್ಟ್ ಮತ್ತು ಕ್ರಿಸ್ ಜೋರ್ಡಾನ್ ಕಂಬ್ಯಾಕ್ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ: ಕೆಎಲ್ ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications